ಕಲಬುರಗಿ : ರಾಜ್ಯದಲ್ಲಿ ದಲಿತರ ಕೊಲೆಯಾದಾಗ ಕರ್ನಾಟಕ ಪೊಲೀಸ ಇಲಾಖೆ ತಮ್ಮ ಕರ್ತವ್ಯ ಮರೆತು ಹೋಗುತ್ತದೆಯೇ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಟ್ವಿಟರ್ ಮೂಲಕ ಆಕ್ರೋಶವನ್ನು ಹೊರ ಹಾಕಿದ ಶಾಸಕ ಪ್ರಿಯಾಂಕ್ ಖರ್ಗೆ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ದಲಿತ ಯುವಕನ ಕೊಲೆಯನ್ನು ಖಂಡಿಸಿ ಕರ್ನಾಟಕ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ದಲಿತ ಸಮುದಾಯದವರನ್ನ ಮನಬಂದಂತೆ ಥಳಿಸಿ, ಕೊಲ್ಲುವ ನಿರ್ದೇಶನವನ್ನು ಬಜರಂಗ ದಳದವರಿಗೆ ನೇರವಾಗಿ ಕೇಶವ ಕೃಪ ನೀಡಿದೆಯಾ? ದಲಿತರ ಕೊಲೆಯಾದಾಗ ಕರ್ನಾಟಕ ಪೊಲೀಸರಿಗೆ ತಮ್ಮ ಕರ್ತವ್ಯ ಮರೆತು ಹೋಗುತ್ತದೆಯೇ?. ಶಿವಮೊಗ್ಗದಲ್ಲಿ ಬಲಿಯಾದ ಯುವಕರ ಜೀವಕ್ಕಿರುವ ಬೆಲೆ ಧರ್ಮಸ್ಥಳದಲ್ಲಿ ಕೊಲೆಯಾಗಿರುವ ದಲಿತ ಹುಡುಗನ ಜೀವಕ್ಕಿಲ್ಲವೇ? ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಟ್ವೀಟ್ ಮಾಡಿರುವ ಅವರು, ಈ ಕೊಲೆಗೆ ಪ್ರತೀಕಾರ ಪಡೀತೀವಿ ಎಂಬ ಹೇಳಿಕೆ ಗೃಹ ಸಚಿವರ ಬಾಯಲ್ಲಿ ಬರದಿರಲು, ನಮ್ಮ ಮಾಧ್ಯಮಗಳಿಗೆ ಕೊಲೆಯಾಗಿರುವ ಹುಡುಗನ ಕುಟುಂಬ ಕಾಣದಿರಲು, ದಲಿತ ಎಂಬ ಕಾರಣಕ್ಕೋ? ಕೊಲೆಗಾರ ಬಜರಂಗದಳದವನು ಎನ್ನುವ ಕಾರಣಕ್ಕೋ? ಅಥವಾ ಬಡವರ ಮನೆ ಹುಡುಗ ಎಂಬ ಕಾರಣಕ್ಕೋ ಎಂಬುವುದರ ಉತ್ತರ ನೀಡುವಂತೆ ಸಿಎಂ ಬಸವರಾಜ ಬೋಮ್ಮಾಯಿ, ಸಚಿವ ಈಶ್ವರಪ್ಪ ಹಾಗೂ ಶ್ರೀನಿವಾಸ ಪೂಜಾರಿಯವರಿಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ನಟ ದಳಪತಿ ವಿಜಯ್ ಭೇಟಿ.. ಪೂಜೆ ಮಾಡಿ ನಮನ