ETV Bharat / state

ಬರಸಿಡಿಲಂತೆ ಬಂತು ಕೊರೊನಾ: ಜೀವನ ನಿರ್ವಹಣೆಗೆ ಹಸು ಸಾಕಾಣಿಕೆಗಿಳಿದ ಶಿಕ್ಷಕ

ಕೊರೊನಾ ಹಾಗೂ ಲಾಕ್​​​ಡೌನ್​​​ನಿಂದಾಗಿ ಉದ್ಯೋಗ ಕಳೆದುಕೊಂಡು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನೇಕರು ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಅದರಂತೆ ಇಲ್ಲಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಗೆ ವೇತನ ಸಿಗದೆ ಜೀವನ ನಿರ್ವಹಣೆಗೆ ತೊಡಕಾಗಿದ್ದು, ಬಳಿಕ ಸಾಲ ಮಾಡಿ ಹಸು ಸಾಕಾಣಿಕೆಗೆ ಮುಂದಾಗಿದ್ದಾರೆ.

private school Teacher get into cow Farming
ಬರಸಿಡಿಲಂತೆ ಬಂದ ಕೊರೊನಾ: ಜೀವನ ನಿರ್ವಹಣೆಗೆ ಹಸು ಸಾಕಾಣಿಕೆಗಿಳಿದ ಖಾಸಗಿ ಶಿಕ್ಷಕ
author img

By

Published : Aug 28, 2020, 9:44 PM IST

ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಬಹುತೇಕ ಖಾಸಗಿ ಕ್ಷೇತ್ರದ ನೌಕರರ ಜೀವನ ಬೀದಿಗೆ ತಂದು ನಿಲ್ಲಿಸಿದೆ. ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ವೇತನವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದೇ ರೀತಿ ಇಲ್ಲಿನ ಚಿತ್ತಾಪುರ ಪಟ್ಟಣ ನಿವಾಸಿ ಶಿಕ್ಷಕ ಬಸವರಾಜ್​​​ ಕೊರೊನಾ ಬಂದ ನಂತರ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಲ್ಲದೆ, ಜೀವನ ನಿರ್ವಹಣೆಗಾಗಿ ಹಸು ಸಾಕಾಣಿಕೆಗೆ ಇಳಿದಿದ್ದಾರೆ. ವಾಡಿ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಸಮಾಜ ವಿಷಯ ಪಾಠ ಮಾಡುತ್ತಿದ್ದ ಬಸವರಾಜ್​, ಕೊರೊನಾದಿಂದ ಶಾಲೆಗಳು ಮುಚ್ಚಲ್ಪಟ್ಟ ಬಳಿಕ ಕಳೆದ 6 ತಿಂಗಳಿನಿಂದ ವೇತನ ಸಿಗದೆ ಇಲ್ಲದ ಸಂಕಷ್ಟಕ್ಕೆ ಸೀಲುಕಿದ್ದರು. ಜೀವನ ನಡೆಸಲು ಶಿಕ್ಷಕ ಬಸವರಾಜ ಬೇರೆ ಬೇರೆ ಕಡೆ ಕೆಲಸಕ್ಕಾಗಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಒಂದು ಹಸು ಕೊಂಡು ಅದರ ಪೋಷಣೆಯಲ್ಲಿ ತೊಡಗಿದ್ದಾರೆ.

ಜೀವನ ನಿರ್ವಹಣೆಗೆ ಹಸು ಸಾಕಾಣಿಕೆಗಿಳಿದ ಖಾಸಗಿ ಶಿಕ್ಷಕ

ಇದಕ್ಕಾಗಿ ಸಂಬಂಧಿಕರ ಬಳಿ ಸಾಲ ಪಡೆದು 25 ಸಾವಿರಕ್ಕೆ ಹಸು ಖರೀದಿಸಿದ್ದಾರೆ. ನಿತ್ಯ ಹಸು ಮೇಯಿಸುವ ಬಸವರಾಜ್​​​​ ಬೆಳಗ್ಗೆ ಮತ್ತು ಸಂಜೆ ಹೊತ್ತು ಮನೆ ಮನೆಗೆ ಹೋಗಿ ಹಾಲು ಹಾಕಿ, ಅದರಿಂದ ಸಿಗುವ 250 ರೂಪಾಯಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇದೇ ರೀತಿ ಕೊರೊನಾ ಹೊಡೆತಕ್ಕೆ ಸಿಲುಕಿ ಜಿಲ್ಲೆಯ ನೂರಾರು ಶಿಕ್ಷಕರು ಕಟ್ಟಡ ನಿರ್ಮಾಣ ಕಾಮಗಾರಿ, ಚಹಾ ಅಂಗಡಿ, ತರಕಾರಿ ಅಂಗಡಿ ಹೀಗೆ ಬೇರೆ ಬೇರೆ ಕೂಲಿ ಕೆಲಸ ಹಾಗೂ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.