ಕಲಬುರಗಿ: ಕೈದಿಯೋರ್ವ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಸಂಗಮೇಶ್ ಕುಂಬಾರ(25) ಸಾವನ್ನಪ್ಪಿದವನು. ಸಹ ಕೈದಿಗಳ ಜೊತೆ ಕ್ರಿಕೆಟ್ ಆಡುವಾಗ ಚೆಂಡು ಮರದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮರ ಹತ್ತಿದ್ದ ಸಂಗಮೇಶ್ ಆಯತಪ್ಪಿ ಮೇಲಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದವನಾಗಿದ್ದ ಈತ ಕಳೆದ 18 ತಿಂಗಳ ಹಿಂದೆ ಗಾಂಜಾ ಪ್ರಕರಣದಲ್ಲಿ ಜೈಲು ಸೇರಿದ್ದನು.
ಇದನ್ನೂ ಓದಿ: ಪೊಲೀಸ್ ಚೌಕಿಯಲ್ಲಿ ಯಾರೂ ಇಲ್ಲ, ಮೇಜು ಹತ್ತಿ ಯುವಕನಿಂದ ಬೋಜ್ಪುರಿ ಡ್ಯಾನ್ಸ್!