ಕಲಬುರಗಿ: ನಾಳೆ ರಾಜ್ಯದ ಐದು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್ ನಡೆಯಲಿದ್ದು, ದೇಶದಲ್ಲೇ ಕೊರೊನಾಗೆ ಮೊದಲ ಬಲಿಯಾದ ಜಿಲ್ಲೆಯಲ್ಲಿ ಲಸಿಕೆ ತಾಲೀಮಿಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇಲ್ಲಿನ ಅಶೋಕ ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಲಬುರಗಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆಯ ಡ್ರೈ ರನ್ ನಡೆಯಲಿದೆ. ಲಸಿಕೆ ಪ್ರಾಯೋಗಿಕ ಪರೀಕ್ಷೆಗೆ ಒಂದೊಂದು ಕೇಂದ್ರದಲ್ಲಿ ಮೂರು ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, 5 ಜನರ ಆರೋಗ್ಯ ಸಿಬ್ಬಂದಿ ತಂಡ ಕಾರ್ಯ ನಿರ್ವಹಿಸಲಿದೆ.
ಓದಿ: ಚಿಕ್ಕಮಗಳೂರಿಗೆ ಆಗಮಿಸಿದ್ದ ಅಣ್ಣಾಮಲೈ ಜೊತೆ ಸೆಲ್ಪಿ ತೆಗೆದುಕೊಳ್ಳಲು ಮುಗಿಬಿದ್ದ ಜನ
ಮೊದಲ ಕೊಠಡಿಯಲ್ಲಿ ಪರೀಕ್ಷಾರ್ಥಿಗಳ ದಾಖಲೆಗಳ ಪರಿಶೀಲನೆ, ಎರಡನೇ ಕೊಠಡಿಯಲ್ಲಿ ಲಸಿಕೆ ಪ್ರಯೋಗ ಮತ್ತು ಮೂರನೇಯದು ನಿಗಾ (ಅಬ್ಸರ್ವೇಷನ್) ಕೊಠಡಿ. ಹೀಗೆ ಹಂತ-ಹಂತವಾಗಿ ಲಸಿಕೆ ಡ್ರೈ ರನ್ ತಾಲೀಮು ನಡೆಯಲಿದೆ. ಒಂದು ಕೇಂದ್ರದಲ್ಲಿ 25 ಜನ ಆರೋಗ್ಯ ಇಲಾಖೆಯ ಕೋವಿಡ್ ಫ್ರಂಟ್ ಲೈನ್ ವರ್ಕರ್ ಮೇಲೆ ಲಸಿಕೆಯ ಡ್ರೈ ರನ್ ಪ್ರಯೋಗ ನಡೆಯಲಿದೆ.
ಸುಮಾರು 80 ಲಕ್ಷ ವ್ಯಾಕ್ಸಿನ್ ಡೋಸ್ ದಾಸ್ತಾನು ಮಾಡುವ ಎರಡು ವಾಕರ್ ಫ್ರೀಜರ್ ಈಗಾಗಲೇ ಆರೋಗ್ಯ ಇಲಾಖೆಯಲ್ಲಿದ್ದು, ಒಟ್ಟು 1 ಕೋಟಿ 20 ಲಕ್ಷ ವ್ಯಾಕ್ಸಿನ್ ಡೋಜ್ ಸಾಮರ್ಥ್ಯ ಹೊಂದಿದೆ.
ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ ನರ್ಸ್, ಆಶಾ ಕಾರ್ಯಕರ್ತೆಯರು, ಟೆಕ್ನಿಷಿಯನ್ಸ್, ಕೋವಿಡ್ ಕೇರ್ ಸೆಂಟರ್ ಸ್ವೀಪರ್, ಗಾರ್ಡ್ ಹೀಗೆ ಕೋವಿಡ್ ಕರ್ತವ್ಯದಲ್ಲಿರುವರಿಗೆ ಲಸಿಕೆ ನೀಡಲು 15,900 ಜನರ ಮಾಹಿತಿಯನ್ನು ಕೋವಿಡ್ ಆ್ಯಪ್ನಲ್ಲಿ ನೋಂದಣಿ ಮಾಡಲಾಗಿದೆ.