ಕಲಬುರಗಿ : ಕೊರೊನಾ ತಡೆಗಟ್ಟಲು ಭಾರತ್ ಲಾಕ್ ಡೌನ್ ಮಾಡಿದ್ದರೂ ಕೂಡ ನಗರದಲ್ಲಿ ಅನಗತ್ಯ ಓಡಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಯೋಗಾಸನ ಮಾಡಿಸಿ ವಿಭಿನ್ನ ಶಿಕ್ಷೆ ಕೊಟ್ಟಿದ್ದಾರೆ.
ಲಾಕ್ಡೌನ್ ಉಲ್ಲಂಘಿಸಿದವರಿಗೆ ಈಗಾಗಲೇ ಬಸ್ಕಿ, ಕಸ ಗುಡಿಸುವ ಶಿಕ್ಷೆ ಕೊಟ್ಟಿದ್ದ ಪೊಲೀಸರು ಇದೀಗ 15 ನಿಮಿಷಗಳ ಕಾಲ ಕಪಾಲಭಾತಿ ಸೇರಿದಂತೆ ವಿವಿಧ ಯೋಗಾಸನಗಳನ್ನು ಮಾಡಿಸುತ್ತಿದ್ದಾರೆ.
ನಗರದ ಗಂಜ್ ಚೌಕ್ ಪೊಲೀಸ್ ಔಟ್ ಪೋಸ್ಟ್ ಮುಂಭಾಗದ ರಸ್ತೆ ಮೇಲೆ ಯೋಗಾಸನದ ಶಿಕ್ಷೆ ಜೊತೆಗೆ ಕ್ಯಾಂಡಲ್ ಕೊಟ್ಟು ಪೊಲೀಸರು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ಮನೆಯಲ್ಲಿಯೇ ಉಳಿದು ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿ ಕರೆಯಂತೆ ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ನಮ್ಮ ಮನೆಯಲ್ಲಿಯೇ ದೀಪ ಬೆಳಗಿಸುತ್ತೇವೆಂದು ಸವಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿ ನಂತ್ರ, ದಂಡ ಹಾಕಿ ಬೈಕ್ ಕೊಟ್ಟು ಕಳಿಸಿದ್ದಾರೆ.