ಕಲಬುರಗಿ: ಲಾಕ್ಡೌನ್ ಉಲ್ಲಂಘಿಸಿರುವ ಹಲವರನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ. ನಗರದ ರೋಜಾ ಪ್ರದೇಶದಲ್ಲಿ ಸಂಚರಿಸಿದ ಪೊಲೀಸರು, ಅಂಗಡಿ ಮತ್ತು ಹೋಟೆಲ್ಗಳನ್ನು ತೆರೆದಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬೇಕಾಬಿಟ್ಟಿ ಅಡ್ಡಾಡುತ್ತಿದ್ದವರನ್ನೂ ಬಂಧಿಸಿದ್ದಾರೆ.
![police arrested those who violated lockdown in kalburgi](https://etvbharatimages.akamaized.net/etvbharat/prod-images/kn-klb-02-lockdown-arrest-ka10021_10042020163423_1004f_1586516663_171.jpg)
ಲಾಕ್ಡೌನ್ ನಡುವೆಯೂ ಹೋಟೆಲ್ ತೆಗೆದವರನ್ನು ಬಂಧಿಸಿದ್ದು, ರೋಜಾ ಪ್ರದೇಶದಲ್ಲಿ ಒಟ್ಟು ಒಂಭತ್ತು ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ರುಕ್ಮೋದ್ದೀನ್, ಸತ್ತಾರ್ ಬಾಬುಮಿಯ್ಯಾ, ಶೇಖ್ ರಹೀಂ, ಜಾಹೀದ್ ಹಮೀದ್, ಮಹ್ಮದ್ ಸಲೀಂ, ಶಫೀ ಅಬ್ದುಲ್ ಮಿಯ್ಯಾ, ಮಹ್ಮದ್ ಅಯೂಬ್, ಜಿಸ್ಯಾನ್, ಯೂನಸ್ ನೂರ್ ಪಾಷಾ ಎಂದು ಗುರುತಿಸಲಾಗಿದೆ.