ETV Bharat / state

ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು: ಜೈಲಿಗಟ್ಟಿದ ಪೊಲೀಸರು - Police arrested the gang who theaft on the night with weapons

ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ಖತರ್ನಾಕ್​​ ದರೋಡೆಕೋರರ ತಂಡವೊಂದನ್ನು ಕಲಬುರಗಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಲ್ಲದೇ ಬಂಧಿತರಿಂದ ಮಾರಕಾಸ್ತ್ರಗಳು, ಮೊಬೈಲ್ ಹಾಗೂ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

Police arrested the gang
ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು
author img

By

Published : Jan 28, 2021, 6:37 AM IST

Updated : Jan 28, 2021, 6:53 AM IST

ಕಲಬುರಗಿ: ಕತ್ತಲಾಗುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ಖತರ್ನಾಕ್​​ ದರೋಡೆಕೋರರ ತಂಡವೊಂದನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದ ದರೋಡೆಕೋರರು

ಮಿರ್ಜಾ ಸಲ್ಮಾನ (21), ಮಿರ್ಜಾ ಮುನಾವರ್ ಬೇಗ (24), ಮಹ್ಮದ ರಫೀಕ್ (23), ಶೇಖ್​​ ವಸಿಮ್​​ (22), ಮಹ್ಮದ್​​ ಜುಬೇರ (21), ಮಾಜೀದ್ ಹುಸೇನ್ (19) ಬಂಧಿತ ಆರೋಪಿಗಳು. ಬಂಧಿತರಿಂದ ಮಾರಕಾಸ್ತ್ರಗಳು, ಮೊಬೈಲ್ ಹಾಗೂ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಓದಿ:ಪ್ರೀತಿ ನಾಟಕವಾಡಿ ಅಪ್ರಾಪ್ತೆಯ ಕರೆದೊಯ್ದು ಅತ್ಯಾಚಾರ, ಕೊಲೆ: ಪೋಷಕರಿಂದ ಆರೋಪ

ಹಗಲು ಹೊತ್ತಿನಲ್ಲಿ ಡ್ರೈವರ್, ಪ್ಲಂಬರ್, ಸೆಂಟ್ರಿಂಗ್ ಸೋಗು ಹಾಕುತ್ತಿದ್ದ ಆರೋಪಿಗಳು ರಾತ್ರಿಯಾಗುತ್ತಿದ್ದಂತೆ ಮಾರಕಾಸ್ತ್ರ ಹಿಡಿದು ರಸ್ತೆಗೆ ಇಳಿಯುತ್ತಿದ್ದರು. ಬಳಿಕ ಜನರನ್ನು ಹೆದರಿಸಿ ದರೋಡೆ ಮಾಡುತ್ತಿದ್ದರು. ಬಂಧಿತರ ಮೊಬೈಲ್ ಪರಿಶೀಲಿಸಿದಾಗ ಕೊಲೆ ನಡೆಸಲು ಸ್ಕೇಚ್ ಹಾಕಿದ್ದು, ಓರ್ವ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ತಲ್ವಾರ್​​ ಹಿಡಿದು ವಿಕೃತವಾಗಿ ನಟಿಸಿರುವ ದೃಶ್ಯಗಳು ಸೆರೆಯಾಗಿವೆ ಎಂದು ಎಸಿಪಿ ಅಂಶು ಕುಮಾರ್​ ತಿಳಿಸಿದ್ದಾರೆ.

Last Updated : Jan 28, 2021, 6:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.