ಸೇಡಂ: ಇಲ್ಲಿನ ಡಿಬಿಆರ್ ಕಾಂಪೌಂಡ್ ಬಳಿಯ ಮಾತೃಛಾಯಾ ಕಾಲೇಜು ರಸ್ತೆಯಲ್ಲಿ ನೀರಿನ ಪೈಪ್ಲೈನ್ ಒಡೆದಿದ್ದು, ನೀರು ಪೋಲಾಗುತ್ತಿದೆ.
ಹಲವಾರು ತಿಂಗಳುಗಳಿಂದ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರೂ ಪುರಸಭೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಸ್ಥಳೀಯರ ದೂರಾಗಿದೆ. ಅಲ್ಲದೇ ಕೊಳಚೆ ನೀರು ಸಹ ಪೈಪ್ಲೈನ್ಗೆ ಸೇರುತ್ತಿದ್ದು, ಇದೇ ನೀರು ಅನೇಕ ಬಡಾವಣೆಗಳಿಗೆ ಸರಬರಾಜಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲೂ ಸಹ ರೋಗದ ಭೀತಿ ಕಾಡತೊಡಗಿದೆ.
ಕೂಡಲೇ ಪುರಸಭೆ ಅಧಿಕಾರಿಗಳು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಕೂಡಲೇ ಒಡೆದ ಪೈಪ್ಲೈನ್ ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.