ETV Bharat / state

ಆರೆಂಜ್ ಮತ್ತು ಗ್ರೀನ್​ ಝೋನ್​ಗಳಲ್ಲಿ ನಾಳೆಯಿಂದ ವೈನ್​ಶಾಪ್ ತೆರೆಯಲು ಅನುಮತಿ - ಆರೆಂಜ್ ಮತ್ತು ಗ್ರೀನ್​ ಝೋನ್​ಗಳಲ್ಲಿ ನಾಳೆಯಿಂದ ವೈನ್​ಶಾಪ್ ತೆರೆಯಲು ಅನುಮತಿ

ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ವೈನ್‌ಶಾಪ್‌ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಕೆಲವೊಂದು ನಿಯಮಗಳನ್ನು ಕಟ್ಪುನಿಟ್ಟಾಗಿ ಪಾಲಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ.

Permission to open a wine shop tomorrow
ಆರೆಂಜ್ ಮತ್ತು ಗ್ರೀನ್​ ಝೋನ್​ಗಳಲ್ಲಿ ನಾಳೆಯಿಂದ ವೈನ್​ಶಾಪ್ ತೆರೆಯಲು ಅನುಮತಿ
author img

By

Published : May 3, 2020, 8:02 PM IST

ಕಲಬುರಗಿ: ಆರೆಂಜ್ ಮತ್ತು ಗ್ರೀನ್​ ಝೋನ್​ಗಳಲ್ಲಿ ನಾಳೆಯಿಂದ ವೈನ್​ಶಾಪ್ ತೆರೆಯಲು ಅನುಮತಿ ಸಿಕ್ಕಿರೋ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಮದ್ಯದ ಅಂಗಡಿಗಳ ಪುನರಾರಂಭಕ್ಕೆ ಸಿದ್ಧತೆಗಳು ನಡೆದಿವೆ.

ಜಿಲ್ಲೆಯಾದ್ಯಂತ ಸಿದ್ಧತೆಗಳು ಬಿರುಸುಗೊಂಡಿವೆ. ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯವರೆಗೆ ತೆಗೆಯಲು ಸರ್ಕಾರ ಅನುಮತಿ ನೀಡಿದೆ. ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಸೂಚನೆ ಕೂಡ ಸರ್ಕಾರ ನೀಡಿದೆ. ಸಾಮಾಜಿಕ ಅಂತರ ಕಾಪಾಡುವುದು, ಐವರಿಗೆ ಮಾತ್ರ ವೈನ್​ಶಾಪ್ ಮುಂದೆ ನಿಲ್ಲಲು ಅವಕಾಶ, ಮಾಸ್ಕ್ ಹಾಕಿಕೊಂಡವರಿಗೆ ಮಾತ್ರ ಮದ್ಯ ನೀಡುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳ ಕಟ್ಟುನಿಟ್ಟಿನ ಪಾಲನೆಗೆ ಸೂಚಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಮದ್ಯದ ಅಂಗಡಿಗಳ ಮುಂದೆ ಮಾರ್ಕ್ ಮಾಡಲಾಗುತ್ತಿದೆ. ಅಂಗಡಿಗಳ ಮುಂದೆ ಬಾಕ್ಸ್​ಗಳನ್ನು ಹಾಕಲಾಗುತ್ತಿದೆ. ಮದ್ಯ ಖರೀದಿಗೆ ನೂಕು ನುಗ್ಗಲು ಆಗೋ ಸಾಧ್ಯತೆ ಇರೋ ಹಿನ್ನೆಲೆಯಲ್ಲಿ, ವೈನ್​ಶಾಪ್​ಗಳ ಮುಂದೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದ್ದು, ಬೆಳಗ್ಗೆ 9 ರಿಂ ಸಂಜೆ 7ರ ವರೆಗೆ ಎಂದು ಬರೆಯಲಾಗಿದೆ. ಕಂಟೈನ್‌ಮೆಂಟ್ ಝೋನ್​ಗಳಲ್ಲಿ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಿಲ್ಲ. ಕಂಟೈನ್ ಮೆಂಟ್ ಏರಿಯಾ ಹೊರತುಪಡಿಸಿ ಇತರೆಡೆ ಅವಕಾಶ ನೀಡಲಾಗಿದ್ದು, ಅಂತಹ ಕಡೆ ಮದ್ಯದಂಗಡಿಗಳ ಪುನರಾರಂಭಕ್ಕೆ ಸಿದ್ಧತೆಗಳು ನಡೆದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.