ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಜಿಲ್ಲೆಯ ಜನತೆ ಬ್ಯಾಂಕ್ ಮುಂದೆ ಅಂತರ ಕಾಯ್ದಯಕೊಳ್ಳದೆ ಮುಗಿಬಿದ್ದಿದ್ದ ದೃಶ್ಯ ಕಂಡುಬಂದಿದೆ.
ಪೆನ್ಷನ್, ಸಂಬಳ ಡ್ರಾ, ವ್ಯವಹಾರಕ್ಕಾಗಿ ಬ್ಯಾಂಕ್ಗೆ ಮುಗಿಬಿದ್ದ ಜನರು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ನಿಂತು ನಿರ್ಲಕ್ಷ್ಯ ವಹಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬ್ಯಾಂಕ್ ಸಿಬ್ಬಂದಿ ಹೇಳಿದ್ರೂ ಕೂಡಾ ಅದನ್ನ ಲೆಕ್ಕಿಸದ ಜನ ಸಿಬ್ಬಂದಿ ಜೊತೆಗೆ ವಾಗ್ವಾದಕ್ಕೆ ಇಳಿಯುವ ದೃಶ್ಯ ಕಂಡುಬಂತು. ಕೊರೊನಾ ಬಗ್ಗೆ ಎಚ್ಚರವ ಹಿಸುವಂತೆ ಅಧಿಕಾರಿಗಳು ಎಷ್ಟೇ ಹೇಳಿದರೂ ಜನ ನಿರ್ಲಕ್ಷ್ಯ ವಹಿಸುತ್ತಿರುವುದು ಅಧಿಕಾರಿ ವರ್ಗಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.