ETV Bharat / state

ಚಿಂಚೋಳಿ ವನ್ಯಜೀವಿ ಧಾಮದ ಪ್ರಾಣಿಗಳ ಹಸಿವು ತಣಿಸಿದ ದಾರಿಹೋಕರು..

ಕಾಡಿನಿಂದ ಆಹಾರ ಅರಸಿ ರಸ್ತೆ ಬದಿಗೆ ಬಂದ ಮಂಗಗಳಿಗೆ ದಾರಿ ಹೋಕರು ಹಣ್ಣು, ಕಾಯಿ ನೀಡುತ್ತಿದ್ದಾರೆ. ಚಿಂಚೋಳಿಯ ಶಾಂತುರೆಡ್ಡಿ ನರನಾಳ ಎನ್ನುವವರು ತಮ್ಮ ಕಾರಿನಲ್ಲಿ ಕಲ್ಲಂಗಡಿ ತುಂಬಿಕೊಂಡು ಬಂದು ವನ್ಯಜೀವಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

author img

By

Published : May 14, 2020, 12:39 PM IST

Passengers who have quenched the hunger of animals at Chincholi Wildlife Sanctuary.
ಮಂಗಗಳಿಗೆ ದಾರಿ ಹೋಕರು ಹಣ್ಣು, ಕಾಯಿ ನೀಡುತ್ತಿದ್ದಾ

ಕಲಬುರಗಿ : ಈಶಾನ್ಯ ಕರ್ನಾಟಕಕ್ಕೆ ದೊಡ್ಡದಾದ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪ್ರಾಣಿಗಳಿಗೆ ಆಹಾರದ ಕೊರತೆ ಕಂಡು ಬಂದಿದೆ. ಬೇಸಿಗೆ ಹಿನ್ನೆಲೆ ಆಹಾರಕ್ಕಾಗಿ ವನ್ಯಜೀವಿಗಳು ಪರದಾಡುತ್ತಿವೆ.

ಕಾಡಿನಿಂದ ಆಹಾರ ಅರಸಿ ರಸ್ತೆ ಬದಿಗೆ ಬಂದ ಮಂಗಗಳಿಗೆ ದಾರಿ ಹೋಕರು ಹಣ್ಣು, ಕಾಯಿ ನೀಡುತ್ತಿದ್ದಾರೆ. ಚಿಂಚೋಳಿಯ ಶಾಂತುರೆಡ್ಡಿ ನರನಾಳ ಎನ್ನುವವರು ತಮ್ಮ ಕಾರಿನಲ್ಲಿ ಕಲ್ಲಂಗಡಿ ತುಂಬಿಕೊಂಡು ಬಂದು ವನ್ಯಜೀವಿಗಳಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಚಿಂಚೋಳಿ ವನ್ಯಜೀವಿ ಧಾಮದ ಪ್ರಾಣಿಗಳ ಹಸಿವು ತಣಿಸಿದ ದಾರಿಹೋಕರು..

ತಮ್ಮ ಹೊಲದಲ್ಲಿ ಬೆಳೆದ ಸುಮಾರು ಒಂದು ಟನ್ ಕಲ್ಲಂಗಡಿ ಹಣ್ಣುಗಳನ್ನು ವನ್ಯಧಾಮದ ಮೂರು-ನಾಲ್ಕು ಕಡೆ ಕಟ್ ಮಾಡಿ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಕೋತಿ, ಕೃಷ್ಣ ಮೃಗ, ಜಿಂಕೆ, ಚಿರತೆ ಮತ್ತಿತರ ಪ್ರಾಣಿಗಳಿವೆ. ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳು ಸಹ ವನ್ಯಜೀವಿಗಳಿಗೆ ಆಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.