ETV Bharat / state

ನಿಜಾಮುದ್ದೀನ್​ ಸಭೆಯಲ್ಲಿ ಭಾಗಿಯಾದವರು ವರದಿ ಮಾಡದಿದ್ದಲ್ಲಿ ಕೇಸ್ ದಾಖಲಿಸಿ.. ಡಿಸಿಎಂ ಕಾರಜೋಳ

ಕೊರೊನಾ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ ನಿಜಾಮುದ್ದೀನ್​ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರು ತಕ್ಷಣ ವರದಿ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅವರ ವಿರುದ್ದ ಕೇಸ್​ ದಾಖಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

author img

By

Published : Apr 11, 2020, 5:07 PM IST

DCM Govinda Karajola Notice
ನಿಜಾಮುದ್ದೀನ್​ ಸಭೆಗಯಲ್ಲಿ ಭಾಗಿಯಾದವರು ವರದಿ ಮಾಡದಿದ್ದಲ್ಲಿ ಕೇಸ್ ದಾಖಲಿಸಿ : ಡಿಸಿಎಂ

ಕಲಬುರಗಿ : ದೆಹಲಿ ನಿಜಾಮುದ್ದೀನ್​ ಧಾರ್ಮಿಕ ಸಭೆಗೆ ಹೋಗಿ ಬಂದವರು ತಾವಾಗಿಯೇ ವರದಿ ಮಾಡಿಕೊಂಡರೆ ಸರಿ, ಇಲ್ಲದಿದ್ದಲ್ಲಿ ಅವರ ಮೇಲೆ ಕೇಸ್ ದಾಖಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೊನಾ ಬಗ್ಗೆ ಸಭೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ..
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನಾ ಕುರಿತಾಗಿ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಹಲವು ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದರು. ದೆಹಲಿಗೆ ಹೋಗಿ ಬಂದ ಕೆಲವರು ಮಾಹಿತಿ ನೀಡುತ್ತಿಲ್ಲ ಎಂದು ಡಿಸಿ ಮಾಹಿತಿ ನೀಡಿದಾಗ ಅಂತವರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಿಂದ ಬಂದವರ ಮೇಲೆ ನಿಗಾ ಇಡಿ. ಮಟನ್ ಅಂಗಡಿ ಮತ್ತು ಬೇಕರಿ ತೆಗೆಯದಿರುವಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ತಮ್ಮ ಪ್ರಾಣದ ಹಂಗು ತೊರೆದು ವೈದ್ಯರು, ಆಶಾ ಕಾರ್ಯಕರ್ತೆಯರು, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಇನ್ನೂ ಒಂದು ವಾರ ಲಾಕ್‌ಡೌನ್ ಇರಬೇಕು. ನಂತರ ಸೀಲ್‌ಡೌನ್ ಬಗ್ಗೆ ನೋಡೋಣ.
ಅನಾವಶ್ಯಕವಾಗಿ ರಸ್ತೆ ಮೇಲೆ ಓಡಾಡುವವರಿಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಹೊಸದಾಗಿ ಬಂದ 18 ಸಾವಿರ ಜನರ ಪಡಿತರ ಅರ್ಜಿ ತಿರಸ್ಕರಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ಅವರು ಸದ್ಯ ತಾತ್ಕಾಲಿಕ ಪಡಿತರ ಚೀಟಿ ವಿತರಿಸಿ, ಎರಡು ತಿಂಗಳ ಕಾಲ ಧಾನ್ಯ ವಿತರಿಸಿ. ನಂತರ ಪರಿಶೀಲಿಸಿ ಬೇಕಿದ್ದರೆ ಪರ್ಮನೆಂಟ್ ಪಡಿತರ ಚೀಟಿ ವಿತರಿಸಿ ಎಂದು ಸಲಹೆ ನೀಡಿದರು. ಅಲೆಮಾರಿಗಳಿಗೆ ಊಟದ ಬದಲು ರೇಷನ್ ನೀಡಿ, ಯಾರೂ ಉಪವಾಸದಿಂದ ಉಳಿಯಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.