ಕಲಬುರಗಿ: ಆ ಮಗು ಆಡಿ ಬೆಳೆಯಬೇಕಾದ ಪುಟ್ಟ ಕಂದಮ್ಮ, ಆದರೆ, ಒಂದು ವರ್ಷದ ಆ ಮಗುವಿನಲ್ಲಿ ಕಾಣಿಸಿಕೊಂಡ 'ಥಲಸ್ಸೇಮಿಯಾ' ಎಂಬ ಅಪರೂಪದ ಕಾಯಿಲೆ ಕಂದಮ್ಮನ ಪ್ರಾಣ ಹಿಂಡುತ್ತಿದೆ. ಇತ್ತ ಮಗುವಿನ ಚಿಕಿತ್ಸೆ ವೆಚ್ಚ ಕೂಡಾ ಬರಿಸಲು ಆಗದೇ ಹೆತ್ತವರು ಸಹಾಯ ಹಸ್ತದ ನೀರಿಕ್ಷೆಯಲ್ಲಿದ್ದಾರೆ.
ಮೂಲತಃ ಕಲಬುರಗಿ ಜಿಲ್ಲೆ ಶಹಬಾದ ಪಟ್ಟಣ ನಿವಾಸಿಗಳಾದ ಕೃಷ್ಣಾ ಹಾಗೂ ರೇಣುಕಾ ದಂಪತಿಯ ದ್ವಿತಿಯ ಪುತ್ರಿ ಶ್ರೇಷ್ಠಾ. ಶ್ರೇಷ್ಠಾ ದೇಹದಲ್ಲಿ ಅಪರೂಪವಾದ ಥಲಸ್ಸೇಮಿಯಾ ಎಂಬ ಮಾರಕ ಕಾಯಿಲೆ ಕಾಣಿಸಿಕೊಂಡಿದೆ. ದೇಹದಲ್ಲಿ ರಕ್ತ ಉತ್ಪತ್ತಿಯಾಗಲು ಬಿಡದ ಥಲಸ್ಸೇಮಿಯಾ ಕಾಯಿಲೆ. ದೇಹದಲ್ಲಿ ಕೆಂಪು ರಕ್ತ ಕಣಗಳು ಉತ್ಪತ್ತಿಯಾಗದಂತೆ ಮಾಡುತ್ತದೆ.
ಕಾಯಿಲೆ ಗುಣಪಡಿಸಲು ಬೋನ್ ಮ್ಯಾರೋ ಕಸಿ ಮಾಡಬೇಕು. ಈ ಶಸ್ತ್ರಚಿಕಿತ್ಸೆಗೆ ಸುಮಾರು 25 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದು, ಬಡ ದಂಪತಿಗಳಿಗೆ ದಿಕ್ಕು ತೋಚದಂತಾಗಿದೆ. ದೊಡ್ಡ ಮೊತ್ತ ಹೊಂದಿಸಲು ಆಗದೇ ಮಗಳ ಈ ಸ್ಥಿತಿ ನೆನೆದು ತಂದೆ, ತಾಯಿ ಮಮ್ಮಲ ಮರುಗುತ್ತಿದ್ದಾರೆ.
ಪುಟ್ಟ ಕಂದಮ್ಮ ಶ್ರೇಷ್ಠಾ ಆರು ತಿಂಗಳಿನವಳು ಇದ್ದಾಗ ಥಲಸ್ಸೇಮಿಯಾ ಕಾಯಿಲೆ ಪತ್ತೆಯಾಗಿದೆ. ಪ್ರತಿ ತಿಂಗಳು ರಕ್ತ ಹಾಕಿಸಿದರೆ ಮಾತ್ರ ಮಗು ಉಸಿರಾಡುತ್ತದೆ. ಹೀಗಾಗಿ ಖಾಸಗಿ ಕಂಪನಿಯಲ್ಲಿ ದುಡಿಯುವ ತಂದೆ ಕೃಷ್ಣಾ ತಮ್ಮ 20 ಸಾವಿರ ಸಂಬಳದಲ್ಲಿ ಅರ್ಧ ಹಣ ಮಗುವಿನ ಆರೋಗ್ಯಕ್ಕೆ ಖರ್ಚು ಮಾಡುತ್ತಾ, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಕಸಿ ಮಾಡಿಸಲು ನಮ್ಮಿಂದ ಅಸಾಧ್ಯ ಎಂದು ಹೆತ್ತವರು ಅಸಹಾಯಕರಾಗಿ ಧಾನಿಗಳಲ್ಲಿ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ.
ನೇರವು ನೀಡಲು.. ಮೊಬೈಲ್ ಸಂಖ್ಯೆ 9964247707 ಪೋ.ಪೇ, ಗೂ.ಪೇ ಅಥವಾ ಅಕೌಂಟ್ ವಿವರ; ಎಸ್‌ಬಿಐ ಬ್ಯಾಂಕ್ ಖಾತೆ ಸಂಖ್ಯೆ 62135996460. ಹೆಸರು ಕೃಷ್ಣಾ, ಶಹಬಾದ ಬ್ರ್ಯಾಂಚ್. ಐಎಫ್‌ಎಸ್‌ಸಿ ಕೋಡ್ SBIN0020228.
ಇದನ್ನೂ ಓದಿ : ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ ಮಗಳ ಚಿಕಿತ್ಸೆಗೆ ಸಹಾಯ ಕೋರಿದ ಬಡಕುಟುಂಬ