ETV Bharat / state

ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆ ಮತಪತ್ರಗಳಲ್ಲಿ ನೋಟಾ ರದ್ದು - ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆ ಸುದ್ದಿ

ಭಾರತ ಚುನಾವಣಾ ಆಯೋಗವು ದಿನಾಂಕ 11-09-2018ರ ಪತ್ರದನ್ವಯ ರಾಜ್ಯಸಭಾ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳ ಮತಪತ್ರಗಳಲ್ಲಿ ನೋಟಾ ಆಯ್ಕೆಗೆ ಇದ್ದ ಅವಕಾಶವನ್ನು ಹಿಂಪಡೆದಿದೆ ಎಂದು ಚುನಾವಣಾಧಿಕಾರಿ ಡಾ.ಎನ್.ವಿ. ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Karnataka Teachers' Constituency Election
ಈಶಾನ್ಯ ಕರ್ನಾಟಕ ಶಿಕ್ಷಕರ ಚುನಾವಣೆ
author img

By

Published : Oct 17, 2020, 9:08 PM IST

ಕಲಬುರಗಿ: ಅಕ್ಟೋಬರ್ 28ರಂದು ನಡೆಯಲಿರುವ ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರದ ಚುನಾವಣೆ ಮತಪತ್ರಗಳಲ್ಲಿ ಈ ಬಾರಿ ನೋಟಾ (None of the above) ಆಯ್ಕೆ ಇರುವುದಿಲ್ಲ ಎಂದು ಚುನಾವಣಾಧಿಕಾರಿ ಡಾ.ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.

ಈ ಕುರಿತು ತಿಳಿಸಿದ ಅವರು, ಭಾರತ ಚುನಾವಣಾ ಆಯೋಗವು ದಿನಾಂಕ 11-09-2018ರ ಪತ್ರದನ್ವಯ ರಾಜ್ಯಸಭಾ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗಳ ಮತಪತ್ರಗಳಲ್ಲಿ ನೋಟಾ ಆಯ್ಕೆಗೆ ಇದ್ದ ಅವಕಾಶವನ್ನು ಹಿಂಪಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

9 ಗುರುತಿನ ಚೀಟಿಯಲ್ಲಿ ಯಾವುದಾದರು ಒಂದು ಇದ್ದರೆ ಮತದಾನಕ್ಕೆ ಅವಕಾಶ:

ಅರ್ಹ ಮತದಾರರು, ಮತದಾನ ಮಾಡಲು ಭಾವಚಿತ್ರ ಹೊಂದಿರುವ ಮತದಾರರ ಗುರುತಿನ ಚೀಟಿಯನ್ನು ಹೊಂದಿಲ್ಲದಿದ್ದರೂ, ಚುನಾವಣಾ ಆಯೋಗ ನಿಗಮದ ಪ್ರಕಾರ 9 ಪರ್ಯಾಯ ದಾಖಲಾತಿಗಳಾದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್‍ಕಾರ್ಡ್, ಪಾಸ್‍ಪೋರ್ಟ್, ರಾಜ್ಯ/ ಕೇಂದ್ರ ಸರ್ಕಾರ/ಸಾರ್ವಜನಿಕ ಉದ್ಯಮಗಳು, ಸ್ಥಳೀಯ ಸಂಸ್ಥೆ ಅಥವಾ ಇತರೆ ಖಾಸಗಿ ಕೈಗಾರಿಕಾ ಸಂಸ್ಥೆಗಳು ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು, ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರ ನೀಡುವ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡುವ ಉದ್ಯೋಗ ಗುರುತಿನ ಚೀಟಿ, ವಿಶ್ವವಿದ್ಯಾಲಯಗಳು ನೀಡುವ ಮೂಲ ಪದವಿ ಹಾಗೂ ಡಿಪ್ಲೋಮಾ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ಮೂಲ ದೈಹಿಕ ಅಂಗವಿಕಲತೆಯ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೂ ಒಂದು ದಾಖಲಾತಿಯನ್ನು ತೋರಿಸಿ ಮತದಾನ ಮಾಡಬಹುದು ಎಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.