ಕಲಬುರಗಿ: ಕೊಳಚೆ ಪ್ರದೇಶದ ಬಡ ನಿವಾಸಿಗಳಿಗೆ ಮನೆ ನಿರ್ಮಿಸಿಕೊಂಡುವಂತೆ ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಲಂ ಜನರ ಗೋಳು ಕೇಳುವವರೇ ಇಲ್ಲವೆಂದು ನಿವೇಶನ ರಹಿತ ಕೊಳಚೆ ಪ್ರದೇಶದ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸ್ಲಂ ಜನಾಂದೋಲನ ಸಂಘಟನೆ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಾರು ಸ್ಲಂ ನಿವಾಸಿಗಳು, ಮನೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಲಂಗಳಲ್ಲಿ ಪರಿಶಿಷ್ಟರು ವಾಸಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದಲೂ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದೇವೆ. ಬಾಡಿಗೆ ಕಟ್ಟುಲು ಆಗದಷ್ಟು ಬಡತನ, ಕೂಲಿ ಮಾಡಿ ಸಂಸಾರ ನಡೆಸಬೇಕಾ ಅಥವಾ ಬಾಡಿಗೆ ಕಟ್ಟೋದ್ರಲ್ಲಿ ನಮ್ಮ ಜೀವನ ಕಳೆಯಬೇಕಾ ಎಂದು ನೋವು ತುಂಬಿದ ಧ್ವನಿಯಲ್ಲಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರ ಕೋಡಲೇ ನಿವೇಶನ ರಹಿತ ಕುಟುಂಬಗಳಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿ ಮನೆ ನಿರ್ಮಿಸಿಕೊಂಡುವಂತೆ ಒತ್ತಾಯಿಸಿದ್ದಾರೆ.
ಕೊರೊನಾ ಹಾವಳಿಯಿಂದ ಬಾಡಿಗೆ ಕಟ್ಟಲಾಗದೆ ಪರದಾಟ:
ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ಬಡ ಕೊಲಿ ಕಾರ್ಮಿಕರಿಗೆ ಯಮನಂತೆ ಕಾಡಿದ್ದು ಹೆಮ್ಮಾರಿ ಕೊರೊನಾ. ಕೂಲಿ ನಾಲಿ ಮಾಡಿ ಬಂದ ಹಣದಲ್ಲಿ ಸ್ವಲ್ಪ ಮನೆ ಬಾಡಿಗೆ ತೆಗೆದಿಟ್ಟು ಉಳಿದ ಅಲ್ಪ ಸ್ವಲ್ಪ ದುಡ್ಡಿನಲ್ಲಿ ಸಂಸಾರ ನಡೆಸುತ್ತಿದ್ದಾರೆ. ಆದರೆ ಕೊರೊನಾ ಹಾವಳಿ ಆರಂಭವಾದಗಿನಿಂದ ಲಾಕ್ಡೌನ್ ಇತ್ಯಾದಿ ಕಾರಣದಿಂದಾಗಿ ಸರಿಯಾಗಿ ಕೂಲಿ ಕೆಲಸ ಸಿಗದೆ ಬಾಡಿಗೆ ಕಟ್ಟುವುದಿರಲ್ಲಿ ಮನೆ ನಡೆಸಲಾದಂತಹ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಈಗಲಾದರು ಕೊಳಚೆ ಪ್ರದೇಶದ ಬಡ ನಿವಾಸಿಗಳ ಕಡೆ ಗಮನ ಹರಿಸಿ ಸಂಕಷ್ಟದಲ್ಲೇ ದಿನಗಳೆಯುತ್ತಿರುವ ಜನರ ನೆರವಿಗೆ ಬರಬೇಕಾಗಿದೆ.
ಓದಿ:ಕೊನೆ ಬಾರಿ ತಮ್ಮನ ಮುಖ ನೋಡ್ಬೇಕು ಅಂದ್ರೂ ಅವಕಾಶ ಕೊಡದ ಅಧಿಕಾರಿಗಳು!