ಗದಗ: ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮ ಕಳೆದ ಒಂದು ವಾರದ ಹಿಂದೆ ಪ್ರವಾಹಕ್ಕೆ ತುತ್ತಾಗಿತ್ತು. ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ಅಪಾರ ಪ್ರಮಾಣ ನೀರು ಬಿಡುಗಡೆ ಮಾಡಲಾಗಿತ್ತು. ಮಲಪ್ರಭೆಯ ಪ್ರವಾಹಕ್ಕೆ ಕೊಚ್ಚಿಹೋದ ಗ್ರಾಮದಲ್ಲೀಗ ವಿದ್ಯುತ್ ಕಂಬಗಳು, ಟಿಸಿಗಳು ಮುರಿದು ಕೆಳಗೆ ಬಿದ್ದಿವೆ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ.
ವಿದ್ಯುತ್ ಸಂಪರ್ಕ ಇಲ್ಲದೆ ಮೇಣದಬತ್ತಿ, ದೀಪದ ಕೆಳಗೆ ಗ್ರಾಮಸ್ಥರು ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಸಹ ಭಾರಿ ಪರಿಣಾಮ ಉಂಟು ಮಾಡಿದೆ. ಇಷ್ಟೆಲ್ಲ ಅವಘಡ ಸಂಭವಿಸಿದ್ರು ಹೆಸ್ಕಾಂ ಅಧಿಕಾರಿಗಳು ಮಾತ್ರ ಇತ್ತ ತಲೆಹಾಕಿಲ್ಲ. ಅಧಿಕಾರಿಗಳು ತೋರಿದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಲಪ್ರಭ ನದಿಯ ಅಟ್ಟಹಾಸಕ್ಕೆ ನಲುಗಿರುವ ಲಖಮಾಪುರ ಗ್ರಾಮಸ್ಥರು, ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಿಕೊಡಿ. ನಾವು ಅಲ್ಲಿ ಜೀವನ ಸಾಗಿಸುತ್ತೇವೆ. ಗ್ರಾಮದಲ್ಲಿ ಇರುವ ಮನೆಗಳು ಯಾವಾಗ ಬೀಳುತ್ತವೆ ಎಂಬ ಭಯ ಕಾಡುತ್ತಿದೆ. ಗ್ರಾಮದಲ್ಲಿ ಕರೆಂಟ್ ವ್ಯವಸ್ಥೆ ಸಹ ಇಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.