ETV Bharat / state

ತಲೆನೋವಾಗಿದ್ದ ಕಸ ವಿಲೇವಾರಿ ಸಮಸ್ಯೆ.. ಕಲಬುರಗಿ ಸ್ವಚ್ಛವಾಗಿಡಲು ಪಾಲಿಕೆಯಿಂದ ನೂತನ ಯೋಜನೆ - Rangoli design

ತಲೆನೋವಾಗಿದ್ದ ಕಸ ವಿಲೇವಾರಿ ಸಮಸ್ಯೆಯನ್ನು ಕಲಬುರಗಿ ಮಹಾನಗರ ಪಾಲಿಕೆ ನೂತನ ಯೋಜನೆಯೊಂದನ್ನು ಹಾಕಿಕೊಳ್ಳುವ ಮೂಲಕ ನಿರಾಳವಾಗಿದೆ.

New plan from Kalaburagi Corporation
ಕಲಬುರಗಿ ಪಾಲಿಕೆಯಿಂದ ನೂತನ ಪ್ಲ್ಯಾನ್
author img

By

Published : Sep 6, 2022, 1:49 PM IST

Updated : Sep 6, 2022, 2:04 PM IST

ಕಲಬುರಗಿ: ಸಾಮಾನ್ಯವಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಬಿಸಾಡಿದರೆ ದಂಡ ವಿಧಿಸುವುದನ್ನು ನೋಡಿದ್ದೇವೆ, ಹಾಗೂ ಕೇಳಿದ್ದೇವೆ. ಆದರೆ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛ ನಗರಕ್ಕಾಗಿ ವಿನೂತನ ಯೋಜನೆಯೊಂದನ್ನು ರೂಪಿಸಿದ್ದಾರೆ. ಆ ಪ್ಲಾನ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ..

ಕಲಬುರಗಿ ಮಹಾನಗರ ದಿನೇ ದಿನೇ ಬೆಳೆಯುತ್ತಲೇ ಇದೆ. ನಗರ ಬೆಳೆದಂತೆ ಕಸನಿರ್ವಹಣೆ ಜವಾಬ್ದಾರಿ ಕೂಡ ಹೆಚ್ಚಾಗುತ್ತಿದೆ. ಆದ್ರೆ ಕಸ ಸಂಗ್ರಹಿಸಿ ವಿಲೇವಾರಿ ಮಾಡುವುದೇ ಪಾಲಿಕೆಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಎಷ್ಟೇ ಜಾಗೃತಿ ಮೂಡಿಸಿದರೂ, ಮನೆ ಬಾಗಿಲಿಗೆ ವಾಹನಗಳನ್ನು ಕಳಿಸಿದರೂ ಸಾರ್ವಜನಿಕರು ಮಾತ್ರ ರಸ್ತೆ ಬದಿ ಕಸ ಹಾಕುವುದನ್ನು ನಿಲ್ಲಿಸುತ್ತಿಲ್ಲ. ಇದರಿಂದ ಹೈರಾಣಾಗಿರುವ ಪಾಲಿಕೆ ಈಗ ಸೂಪರ್ ಯೋಜನೆಯೊಂದನ್ನು ರೂಪಿಸಿದೆ. ಈ‌ ಮೂಲಕ ಕಸ ಮನೆಯಲ್ಲಿಯೇ ಸಂಗ್ರಹಿಸಿಟ್ಟು ಪಾಲಿಕೆ ವಾಹನ ಬಂದಾಗ ಹಾಕಲು ಜನರನ್ನು ಪ್ರೇರೇಪಿಸಲಾಗುತ್ತಿದೆ.

New plan from Kalaburagi Corporation
ಕಲಬುರಗಿ ಪಾಲಿಕೆಯಿಂದ ನೂತನ ಪ್ಲ್ಯಾನ್

ಬಿಸಿಲೂರು ಕಲಬುರಗಿ ನಗರ ಈಗ 8 ಲಕ್ಷ ಜನ ಸಂಖ್ಯೆಯ ಆಸುಪಾಸಿನಲ್ಲಿದೆ. ಈಗಾಗಲೇ ಸುಮಾರು 200 ಕಿ.ಮೀ ವ್ಯಾಪ್ತಿಯಲ್ಲಿ ಸಿಟಿ ವಿಸ್ತರಿಸಿದೆ. ಸಿಟಿ ಬೆಳದಂತೆ ಕಸದ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಪಾಲಿಕೆ ಸೂಕ್ತವಾಗಿ ಕಸ ನಿರ್ವಹಣೆ ಮಾಡುತ್ತಿದೆ. ಆದ್ರೆ ಸಾರ್ವಜನಿಕರು‌ ಮಾತ್ರ ಪಾಲಿಕೆಯೊಂದಿಗೆ ಸರಿಯಾಗಿ ಕೈ ಜೋಡಿಸುತ್ತಿಲ್ಲ. ಇದನ್ನು ತಪ್ಪಿಸಲು ಪಾಲಿಕೆ ರಂಗೋಲಿ ಹಾಕುವ ಯೋಜನೆ ಹಾಕಿಕೊಂಡಿದೆ. ಅಂದಹಾಗೆ ಹಿಂದೂ ಧರ್ಮದಲ್ಲಿ ರಂಗೋಲಿಗೆ ಅದರದೆಯಾದ ಪ್ರಾಮುಖ್ಯತೆ ಇದೆ. ರಂಗೋಲಿಯನ್ನು ದೇವರ ರೂಪದಲ್ಲಿ ಕಾಣಲಾಗುತ್ತದೆ. ಇದನ್ನೆ ಸರಿಯಾಗಿ ಉಪಯೋಗಿಸಿಕೊಂಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀದಿಬದಿ ಕಸ ಹಾಕುವ ಪ್ರದೇಶವನ್ನು ಸ್ವಚ್ಛಗೊಳಿಸಿ ಅಂತಹ ಸ್ಥಳಗಳಲ್ಲಿ ಪಾಲಿಕೆ ಪೌರ ಕಾರ್ಮಿಕ ಮಹಿಳೆಯರಿಂದ ಸುಂದರ ರಂಗೋಲಿ ಹಾಕಿಸುತ್ತಿದ್ದಾರೆ.

New plan from Kalaburagi Corporation
ಕಲಬುರಗಿ ಪಾಲಿಕೆಯಿಂದ ನೂತನ ಪ್ಲ್ಯಾನ್

ಜಾಗೃತಿ ಮೂಡಿಸಬಲ್ಲ ರಂಗೋಲಿ: ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 55 ವಾರ್ಡ್​ಗಳಿವೆ. ಬಹುತೇಕ ವಾರ್ಡ್‌ಗಳಲ್ಲಿ ರಂಗೋಲಿ ಹಾಕುವ ಪ್ಲ್ಯಾನ್ ಜಾರಿಗೆ ತರಲಾಗಿದೆ. ಬೀದಿ ಬದಿಯ ಕಸ ತೆರವುಗೊಳಿಸಿದ ನಂತರ ಸ್ವಚ್ಛಂದವಾದ ಚಿತ್ರಗಳು, ಗಾಂಧೀಜಿ ಚಿತ್ರ, ಸ್ವಚ್ಛ ಭಾರತ ಅಭಿಯಾನ ಸೇರಿ ಜಾಗೃತಿ ಮೂಡಿಸಬಲ್ಲ ಶಬ್ದಗಳನ್ನು ಬರೆಯಲಾಗುತ್ತಿದೆ.

ಬಿಳಿ ಬಣ್ಣದ ರಂಗೋಲಿ ಚಿತ್ರ ನೋಡಿ, ಮೇಲಾಗಿ ರಂಗೋಲಿಗೆ ವಿಶೇಷ ಪ್ರಾತಿನಿಧ್ಯ ಇರುವ ಕಾರಣಕ್ಕೆ ಜನರು ಬೀದಿಬದಿ ರಂಗೋಲಿ ಹಾಕಿದ ಪ್ರದೇಶದಲ್ಲಿ ಕಸ ತಂದು ಸುರಿಯುವುದನ್ನು ನಿಲ್ಲಿಸಿದ್ದಾರೆ. ಮನೆಗಳಲ್ಲಿಯೇ ಬಕೆಟ್​ ಅಥವಾ ಡಬ್ಬಿಗಳಲ್ಲಿ ಕಸ ಸಂಗ್ರಹಿಸಿ ಪ್ರತಿನಿತ್ಯ ಬೆಳಗಿನ ಸಮಯಕ್ಕೆ ಬರುವ ಪಾಲಿಕೆಯ ಕಸ ಸಂಗ್ರಹ ವಾಹನದಲ್ಲಿ ಹಾಕುತ್ತಿದ್ದಾರೆ.‌

ಬೆಳಗ್ಗೆ ಡ್ಯೂಟಿಗೆ ಹೋಗುವವರು ಕಸದ ಬುಟ್ಟಿ ಮನೆಯ ಹೊರಭಾಗದಲ್ಲಿ ತಂದಿಟ್ಟರೆ ಸಾಕು, ಪೌರ ಸಿಬ್ಬಂದಿ ಕಸ ಸಂಗ್ರಹಿಸಿಕೊಂಡು ಹೋಗುತ್ತಿದ್ದಾರೆ. ಕಲಬುರಗಿ ನಗರವನ್ನು ಸ್ವಚ್ಛವಾಗಿಡಲು ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದರೆ ಕಲಬುರಗಿ ನಗರವನ್ನು ಸಂಪೂರ್ಣವಾಗಿ ಹಸಿರಿಕರಣಗೊಳಿಸಬಹುದು ಎನ್ನುತ್ತಾರೆ ಪಾಲಿಕೆ ಆಯುಕ್ತ ಭುವನೇಶ ದೇವಿದಾಸ ಪಾಟೀಲ್.

ಕಲಬುರಗಿ ಪಾಲಿಕೆಯಿಂದ ನೂತನ ಪ್ಲ್ಯಾನ್

ಕಸ ಬಿಸಾಡಿದ್ರೆ ಅಂಗಡಿಗಳು ಬಂದ್​: ಅಷ್ಟೇ ಅಲ್ಲ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಹೋಟೆಲ್ ಹಾಗೂ ಕಮರ್ಷಿಯಲ್ ಅಂಗಡಿಗಳು ರಸ್ತೆ ಬದಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಚೆಲುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಿದ್ರೆ ಅಂತಹ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಒಂದು ವಾರಗಳವರೆಗೆ ಅಂಗಡಿಗಳನ್ನ ಬಂದ್ ಮಾಡಿಸಲಾಗುವುದು. ಪ್ರತಿ ದಿನ ಮಹಾನಗರ ಪಾಲಿಕೆಯ ಕಸ ವಿಲಿವಾರಿ ವಾಹನ ಪ್ರತಿ ಸರ್ಕಲ್​​ನಲ್ಲಿಯು ನಿಲ್ಲಿಸಲಾಗುತ್ತದೆ. ಆಗ ವಾಹನದಲ್ಲಿ ಕಸ ಹಾಕುವಂತೆ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.

  • We've identified black spots where people throw garbage. During morning rounds, corporation workers collect garbage from their & draw a Rangoli giving a message to clean the area. This has helped to reduce number of black spots: Bhuvanesh Patil, Commissioner, City Corp Kalaburagi pic.twitter.com/8oP35nPk5Z

    — ANI (@ANI) September 2, 2022 " class="align-text-top noRightClick twitterSection" data=" ">

ಒಟ್ಟಿನಲ್ಲಿ ಬೀದಿಬದಿ ಎಲ್ಲೆಂದರಲ್ಲಿ ಕಸ ಹಾಕುವದನ್ನು ತಪ್ಪಿಸಲು ಪಾಲಿಕೆ ಕೈಗೊಂಡ ರಂಗೋಲಿ ಪ್ಲಾನ್ ಸಖತ್ ವರ್ಕೌಟ್ ಆಗಿದೆ. ಜನರು ಜಾಗೃತರಾಗಿ ಕಸ ಬಿಸಾಡುವುದನ್ನು ಸ್ವಲ್ಪ ಮಟ್ಟಿಗೆ ನಿಲ್ಲಿಸಿದ್ದಾರೆ. ಇದೆ ರೀತಿ ಮುಂದುವರೆದರೆ ಪಾಲಿಕೆ ಸಿಬ್ಬಂದಿ ನಿಟ್ಟುಸಿರು ಬಿಡಲಿದ್ದಾರೆ ಜೊತೆಗೆ ಪರಿಸರ ರಕ್ಷಣೆ ಕೂಡಾ ಆಗಲಿದೆ.

ಇದನ್ನೂ ಓದಿ: ಬೆಣ್ಣೆಹಳ್ಳ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್.. ಕೂದಳೆಲೆ ಅಂತರದಲ್ಲಿ ಪಾರಾದ ಯುವಕರು

Last Updated : Sep 6, 2022, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.