ETV Bharat / state

ತೊಗರಿಗೆ ರೋಗಬಾಧೆ: ಒಣಗಿದ ಗಿಡಗಳ ಸಮೇತ ಡಿಸಿ ಕಚೇರಿಗೆ ಆಗಮಿಸಿದ ರೈತರು

ನೆಟೆ ರೋಗಕ್ಕೆ ಕಲಬುರಗಿಯಲ್ಲಿ ರೈತರು ಬೆಳೆದ ತೊಗರಿ ಒಣಗಿ ಹೋಗಿದೆ. ಹೀಗಾಗಿ ಒಣಗಿ ನಿಂತ ತೊಗರಿ ಗಿಡಗಳ ಸಮೇತವಾಗಿ ರೈತರು ಡಿಸಿ ಕಚೇರಿಗೆ ಆಗಮಿಸಿ, ಆಕ್ರೋಶ ವ್ಯಕ್ತಪಡಿಸಿದರು.

nete disease to Pigeon pea formers protest
ಒಣಗಿದ ಗಿಡಗಳ ಸಮೇತ ಡಿಸಿ ಕಚೇರಿಗೆ ಆಗಮಿಸಿದ ಅನ್ನದಾತರು
author img

By

Published : Dec 13, 2022, 6:22 PM IST

ಒಣಗಿದ ಗಿಡಗಳ ಸಮೇತ ಡಿಸಿ ಕಚೇರಿಗೆ ಆಗಮಿಸಿದ ಅನ್ನದಾತರು

ಕಲಬುರಗಿ: ತೊಗರಿ ಗಿಡಗಳಿಗೆ ನೆಟೆ ರೋಗ ಅಂಟಿದ ಪರಿಣಾಮ ಅವು ಒಣಗಿ ಹೋಗಿವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರದ ಗಮನ ಸೆಳೆಯಲು ಜಿಲ್ಲೆಯ ರೈತರು ಇಂದು ಒಣಗಿದ ಗಿಡಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಜಿಲ್ಲೆಯ ವಿವಿಧೆಡೆಯಿಂದ ನೆಟೆ ರೋಗದಿಂದ ಒಣಗಿ ನಿಂತ ತೊಗರಿ ಗಿಡಗಳ ಸಮೇತವಾಗಿ ರೈತರು ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ತೊಗರಿ ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದರೂ, ಇಲ್ಲಿವರೆಗೆ ಕಂದಾಯ ಇಲಾಖೆ ಅಥವಾ ಕೃಷಿ ಇಲಾಖೆಯಿಂದ ಸಮೀಕ್ಷೆ ಕಾರ್ಯ ನಡೆದಿಲ್ಲ. ವಿಮಾ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನ ಮಾಡಿದ ರೈತರು ಬರುವ 15 ದಿನಗಳಲ್ಲಿ ಸಮೀಕ್ಷೆ ಮುಗಿಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ನಿರ್ಲಕ್ಷ್ಯ ತೋರಿದರೆ ರೈತರು ಸಾಮೂಹಿಕ ಆತ್ಮಹತ್ಯೆಯಂತ ಗಂಭೀರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಬಿಸಿಯೂಟದ ತೊಗರಿ ಬೇಳೆ ಮಾರಾಟ; ವಿಡಿಯೋ ವೈರಲ್​ ಬಳಿಕ ಮುಖ್ಯ ಶಿಕ್ಷಕ ಅಮಾನತು

ಜಿಲ್ಲೆಯಲ್ಲಿ ಈ ವರ್ಷ ಸುಮಾರು 5 ಲಕ್ಷ ಹೆಕ್ಟೇರ್​​ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಆರಂಭದಲ್ಲಿ ಮುಂಗಾರು ಮಳೆ ಎಡಬಿಡದೇ ಸುರಿದ ಹಿನ್ನೆಲೆ ಮೊದಲನೆ ಬಿತ್ತನೆ ವಿಫಲವಾಗಿ, ಬಹುತೇಕ ಕಡೆಗಳಲ್ಲಿ ರೈತರು ಎರಡನೇ, ಮೂರನೇ ಬಾರಿ ಬಿತ್ತನೆ ಮಾಡಿದ್ದಾರೆ. ಸದ್ಯ ಸಮೃದ್ಧವಾಗಿ ಬೆಳೆದಿದ್ದ ತೊಗರಿ ಗಿಡಗಳು ಸಾಕಷ್ಟು ಲಾಭ ತಂದುಕೊಡುವ ನಿರೀಕ್ಷೇ ಮೂಡಿಸಿದ್ದವು.

ಆದರೆ, ನೆಟೆ ರೋಗಕ್ಕೆ ಜಿಲ್ಲೆಯ ಸೇಡಂ, ಅಫಜಲಪುರ, ಜೇವರ್ಗಿ, ಆಳಂದ ಸೇರಿ ಬಹುತೇಖ ರೈತರ ಜಮೀನಿನಲ್ಲಿ ತೊಗರಿ ಒಣಗಿ ನಿಂತಿವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಈ ಭಾಗದ ತೊಗರಿ ರೈತರ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು. ಶೀಘ್ರವಾಗಿ ತೊಗರಿ ಹಾನಿಯ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.