ETV Bharat / state

ಸಾವರ್ಕರ್​ ಕುರಿತು ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಎನ್​​​​​​​​.ರವಿಕುಮಾರ್​ ಕಿಡಿ - Siddaramaiah talking about V V Savarkar

ಸಾವರ್ಕರ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.

ಎನ್. ರವಿಕುಮಾರ್
author img

By

Published : Oct 20, 2019, 1:50 PM IST

ಕಲಬುರಗಿ: ಸಾವರ್ಕರ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್​ಗೆ ಭಾರತ ರತ್ನ ಕೊಡಬೇಕೆಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್, ಸಿದ್ದರಾಮಯ್ಯನವರು ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರೆಂದು ಹೇಳಿಕೆ ನೀಡಿದ್ದಾರೆ. ಇವರೇನು ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ತನಿಖೆ ಮಾಡಿದ್ದಾರಾ?. ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್, ಆರ್​ಎಸ್​ಎಸ್ ಪಾತ್ರ ಇಲ್ಲ ಅಂತ ನ್ಯಾಯಾಲಯವೇ ಸ್ಪಷ್ಟನೆ ನೀಡಿದೆ. ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಈ ರೀತಿ ಹೇಳಿಕೆ ನೀಡಲು. ಸ್ವಾತಂತ್ರ್ಯ ಹೋರಾಟದ ಗಂಧ ಗಾಳಿಯು ಗೊತ್ತಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಸ್ವಾತಂತ್ರ್ಯ ಹೋರಾಟ ಬಗ್ಗೆ ಓದಿ ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಕುಮಾರ ಸ್ವಾಮಿಗಳು ಭಾರತ ರತ್ನ ಪ್ರಶಸ್ತಿಗಿಂತಲೂ ದೊಡ್ಡವರು:

ಇದೇ ವೇಳೆ ಸಿದ್ದರಾಮಯ್ಯನವರು ಸಿದ್ದಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮಿ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್, ಶಿವಕುಮಾರ ಸ್ವಾಮಿಗಳು ಭಾರತ ರತ್ನಕ್ಕಿಂತಲೂ ದೊಡ್ಡವರು. ಅವರಿಗೆ ಭಾರತ ರತ್ನ ನೀಡುವ ಕುರಿತು ನಾವು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ ಎಂದರು. ಇನ್ನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಐವತ್ತು ಸೀಟು ಗೆಲ್ಲೋದಿಲ್ಲ. ಐವತ್ತಕ್ಕಿಂತ ಹೆಚ್ಚು ಸೀಟ್ ಗೆದ್ರೆ ನಾನು ರಾಜೀನಾಮೆ ಕೊಡ್ತೀನಿ ಎಂದು ಸವಾಲು ಹಾಕಿದರು. ಐವತ್ತಕ್ಕಿಂತ ಕಡಿಮೆ ಸೀಟ್ ಬಂದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ? ಎಂದು ಬಹಿರಂಗವಾಗಿ ಸವಾಲೆಸೆದರು.

Intro:Body:

ಫೈಲ್​ ಫೋಟೋ ಬಳಸಿ...

ಕಲಬುರಗಿ:ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು,ವೀರ್ ಸಾವರ್ಕರ್ ಗೆ ಭಾರತ ರತ್ನ ಕೊಡಬೇಕೆಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರವಿಕುಮಾರ್.ಸಿದ್ದರಾಮಯ್ಯನವರು ಮಹಾತ್ಮ ಗಾಂಧೀಜಿ ಹತ್ಯೆಗೆ ಸಾವರ್ಕರ್ ಸಂಚು ರೂಪಿಸಿದ್ದರೆಂದು ಹೇಳಿಕೆ ನೀಡಿದ್ದಾರೆ.ಇವರೇನು ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ಸ್ಟಡಿ ಮಾಡಿದ್ದಾರಾ?.ಮಹಾತ್ಮ ಗಾಂಧಿ ಹತ್ಯೆಯಲ್ಲಿ ಸಾವರ್ಕರ್,ಆರ್ ಎಸ್ ಎಸ್ ಪಾತ್ರ ಇಲ್ಲ ಅಂತಾ ನ್ಯಾಯಾಲಯವೇ ಸ್ಪಷ್ಟನೆ ನೀಡಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಗೆ ನಾಚಿಕೆಯಾಗೇಕು ಈ ರೀತಿ ಹೇಳಿಕೆ ನೀಡಲು,ಸ್ವಾತಂತ್ರ್ಯ ಹೋರಾಟದ ಗಂಧಗಾಳಿ ಗೊತ್ತಿಲ್ಲ,ಸ್ವಾತಂತ್ರ್ಯ ಹೋರಾಟದಲ್ಲಿ ವೀರ್ ಅಂತಾ ಬಿರುದು ಬಂದಿದ್ದು ಸಾವರ್ಕರ್ ಗೆ ಮಾತ್ರ,ಸಿದ್ದರಾಮಯ್ಯ ಇನ್ನೊಮ್ಮೆ ಸ್ವಾತಂತ್ರ್ಯ ಹೋರಾಟ ಬಗ್ಗೆ ಓದಿ ತಿಳಿದುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾರತ ರತ್ನ ವನ್ನ ಗಾಂಧಿ ಫ್ಯಾಮಿಲಿಗೆ ಕೊಡಬೇಕು ಅಂತಾ ಬರೆದುಕೊಟ್ಟಿದ್ದಾರಾ?.ಕಾಂಗ್ರೆಸ್ ನವರು  ಅಂಬೇಡ್ಕರ್ ಅವರಿಗೆ ಏಕೆ ಭಾರತ ರತ್ನ ಕೊಡಲಿಲ್ಲ ಎಂದು ಪ್ರಶ್ನಿಸಿದರು.

ಆತ್ಮ ಇಲ್ಲದವರು ಸಿದ್ದರಾಮಯ್ಯ,ಆತ್ಮ ವಂಚನೆ ಮಾಡಿಕೊಂಡು ಸಾವರ್ಕರ್ ಬಗ್ಗೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆಸಿದ್ದರಾಮಯ್ಯನವರು ನೀಚ ರಾಜಕಾರಣ ಮಾಡ್ತಿದಾರೆ.ಅದೇ ರೀತಿ ದಿನೇಶ್ ಗುಂಡೂರಾವ್ ಸಹ ಟೀಕೆಗಳನ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಶಿವಕುಮಾರ್ ಸ್ವಾಮಿಗಳು ಭಾರತ ರತ್ತ ಪ್ರಶಸ್ತಿಗಿಂತಲು ದೊಡ್ಡವರು.

ಇದೆ ವೇಳೆ ಸಿದ್ದರಾಮಯ್ಯನವರು ಶಿವಕುಮಾರ್ ಸ್ವಾಮಿ ಅವರಿಗೆ ಭಾರತ್ಮ ರತ್ನ ನೀಡಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ರವಿಕುಮಾರ್,ಶಿವಕುಮಾರ್ ಸ್ವಾಮಿಗಳು ಭಾರತ ರತ್ನಗಿಂತಲು ದೊಡ್ಡವರು ಅವರಿಗೆ ಭಾರತ ರತ್ನ‌ ನೀಡಬೇಕು ಈ ಕುರಿತು ನಾವು ಕೇಂದ್ರಕ್ಕೆ ಶಿಫಾರಸು ಮಾಡುತ್ತೆವೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಐವತ್ತು ಸೀಟ್ ಗೆಲ್ಲೋದಿಲ್ಲ ರವಿ ಚಾಲೇಂಜ್...!

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಐವತ್ತು ಸೀಟ್ ಗೆಲ್ಲೋದಿಲ್ಲ.ಐವತ್ತಕ್ಕಿಂತ ಹೆಚ್ಚು ಸೀಟ್ ಗೆದ್ರೆ ನಾನು ರಾಜೀನಾಮೆ ಕೊಡ್ತೀನಿ,ಐವತ್ತಕ್ಕಿಂತ ಕಡಿಮೆ ಸೀಟ್ ಬಂದ್ರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ಎಂದು ಬಹಿರಂಗವಾಗಿ ಚಾಲೆಂಜ್ ಮಾಡಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.