ETV Bharat / state

ಕಲಬುರಗಿ: ಹಳೇ ವೈಷಮ್ಯದ ಹಿನ್ನೆಲೆ ಸ್ನೇಹಿತರಿಂದಲೇ ರೌಡಿಶೀಟರ್​ನ ಬರ್ಬರ ಹತ್ಯೆ - ಕಲಬುರಗಿಯಲ್ಲಿ ಕೊಲೆ

ಕಲಬುರಗಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಒಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

fesdd
ಹಳೆ ವೈಷಮ್ಯದ ಹಿನ್ನೆಲೆ ಸ್ನೇಹಿತರಿಂದಲೇ ರೌಡಿಶೀಟರ್ ಬರ್ಬರ ಹತ್ಯೆ
author img

By

Published : Jun 20, 2020, 4:43 PM IST

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಪೀರ ಬಂಗಾಲಿ ಮೈದಾನದಲ್ಲಿ ನಡೆದಿದೆ.

ಹಳೇ ವೈಷಮ್ಯದ ಹಿನ್ನೆಲೆ ಸ್ನೇಹಿತರಿಂದಲೇ ರೌಡಿಶೀಟರ್​ನ ಬರ್ಬರ ಹತ್ಯೆ

ಹಸನ್ ಅಲಿ(24) ಅಲಿಯಾಸ್ ಚಿಂದಿ ಹಸನ್ ಕೊಲೆಯಾದ ರೌಡಿಶೀಟರ್. ಹಳೇ ವೈಷಮ್ಯದ ಹಿನ್ನೆಲೆ ಸ್ನೇಹಿತರ ನಡುವೆ ನಡೆದ ಜಗಳ ವಿಕೋಪಕ್ಕೆ ಹೋಗಿ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ರೌಡೀಶೀಟರ್ ಹಸನ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ನಿನ್ನೆ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ, ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ಹಸನ್ ಅಲಿ ಕೊಲೆ ಪ್ರಕರಣ, ಬೈಕ್ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದ. ಆರು ತಿಂಗಳ ಹಿಂದಷ್ಟೇ ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿದ್ದ. ಈ ಕುರಿತು ಗ್ರಾಮಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.