ಸೇಡಂ: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯೇ ಮಗನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮದನಾ ಗ್ರಾಮದಲ್ಲಿ ನಡೆದಿದೆ.
ನಾಗೇಶ ರಾಮು ಮದ್ದೂರ (25) ಕೊಲೆಯಾದ ದುರ್ದೈವಿ. ಈತ ಮರಗೆಲಸ ಮಾಡಿಕೊಂಡಿದ್ದನು. ಐದಾರು ವರ್ಷಗಳಿಂದ ಮುನಕನಪಲ್ಲಿಯ ಭರತ್ ಕುಮಾರ ಶರಣಯ್ಯಸ್ವಾಮಿ ಎಂಬುವವನ ಜೊತೆ ಮದನಾ ಗ್ರಾಮದ ಮೃತ ನಾಗೇಶ್ ತಾಯಿ ಎಂಬುವವರು ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ನಾಗೇಶ್ಗೆ ತಿಳಿದು ಆಕ್ಷೇಪ ವ್ಯಕ್ತಪಡಿಸಿದ್ದನು.
ಇದರಿಂದ ಕೋಪಗೊಂಡ ತಾಯಿ, ಮಗಳು ಹಾಗೂ ಪ್ರಿಯಕರ ಸೇರಿಕೊಂಡು ಹಗ್ಗದಿಂದ ಕುತ್ತಿಗೆ ಬಿಗಿದು ನಾಗೇಶನನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿಗಳು ಮುಂದಾಗಿದ್ದರು.
ಘಟನೆ ಸಂಬಂಧ ತನಿಖೆ ಕೈಗೊಂಡ ಮುಧೋಳ ಪಿಐ ಆನಂದ್ ರಾವ್ ತಲೆಮರೆಸಿಕೊಂಡಿದ್ದ ಮೂರು ಜನ ಕೊಲೆಗಟುಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದ 953 ಜನರಿಗೆ ಕೊರೊನಾ