ಕಲಬುರಗಿ: ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ ಮಗ ಕೂದಲೆಳೆ ಅಂತರದಲ್ಲಿ ಪ್ರಾಣ ಉಳಿಸಿಕೊಂಡಿರುವ ಭಯಾನಕ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ಇದ್ದರೂ ಸಹ ಮೂರನೇ ಪ್ಲಾಟ್ ಫಾರಂನಿಂದ ಒಂದನೇ ಪ್ಲಾಟ್ ಫಾರಂಗೆ ತಾಯಿ ಮಗ ಹಳಿ ದಾಟಿಕೊಂಡು ಬರುವಾಗ ಗೂಡ್ಸ್ ರೈಲು ಆಗಮಿಸಿದೆ. ಮುಂದೆ ಹೋಗಿದ್ದ ತಾಯಿ ರೈಲಿಗೆ ಸಿಲುಕಿದ್ದಾಳೆಂದು ಮಗ ರಕ್ಷಣೆಗೆ ಧಾವಿಸಿ ಬಂದಿದ್ದು, ಬಳಿಕ ಇಬ್ಬರೂ ಹಳಿ ಪಕ್ಕದ ಸ್ವಲ್ಪ ಸ್ಥಳದಲ್ಲಿಯೇ ರೈಲು ದಾಟುವವರೆಗೆ ಅವಚಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ಚಲಿಸುತ್ತಿದ್ದ ರೈಲಿನ ಇಂಜಿನ್ಗೆ ಬೆಂಕಿ, ಪ್ರಯಾಣಿಕರು ಪಾರು: ವಿಡಿಯೋ
ಮಂಗಳವಾರ ಸಂಜೆ 6.40 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: ಓವರ್ಟೇಕ್ ಮಾಡಲು ಹೋಗಿ ಕಬ್ಬಿನ ಗದ್ದೆಗೆ ನುಗ್ಗಿದ ಸಾರಿಗೆ ಬಸ್ : 50 ವಿದ್ಯಾರ್ಥಿಗಳು ಪಾರು