ಕಲಬುರಗಿ: ನಿಮಗೆ ಕನ್ನಡಿಗರು ಅಂದ್ರೆ ಇಷ್ಟ ಇಲ್ಲವಾ? ಅಥವಾ ನಮ್ಮ ಸಿಎಂ ಯಡಿಯೂರಪ್ಪನವರು ಇಷ್ಟವಿಲ್ಲವಾ? ಎಂದು ಕೆಪಿಸಿಸಿ ವಕ್ತಾರ ಹಾಗು ಶಾಸಕ ಪ್ರಿಯಾಂಕ್ ಖರ್ಗೆ ಪ್ರಧಾನಮಂತ್ರಿಗೆ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ನೆರೆಪೀಡಿತ ಆಂಧ್ರ ಹಾಗೂ ತೆಲಂಗಾಣ ಸಿಎಂ ಅವರೊಂದಿಗೆ ಮಾತನಾಡಿ ಪರಿಹಾರದ ಭರವಸೆ ನೀಡಿರುವುದಾಗಿ ಪ್ರಧಾನಿ ಟ್ವೀಟ್ ಮಾಡಿದ್ದರು.
ಈಗ ಅದೇ ಟ್ವೀಟ್ಗೆ ಉತ್ತರಿಸಿರುವ ಶಾಸಕ ಖರ್ಗೆ, ಭಾರಿ ಮಳೆ ಹಾಗೂ ಪ್ರವಾಹದಿಂದ ಕರ್ನಾಟಕ ಸಂಕಷ್ಟದಲ್ಲಿದೆ ಆದರೂ ನೀವು ಪ್ರತಿ ಸಲ ತಾರತಮ್ಯ ನೀತಿ ಅನುಸರಿಸುತ್ತೀರಿ ಎಂದು ಪ್ರಧಾನಿ ಮೋದಿಯನ್ನು ಕೇಳಿದ್ದು, ಆಂಧ್ರದ ಜಗನ್ ಹಾಗೂ ತೆಲಂಗಾಣದ ಕೆಸಿಆರ್ ಅವರಿಗೆ ಸಹಾಯ ಮಾಡುವ ನಿಮಗೆ ಕನ್ನಡಿಗರು ಹಾಗೂ ಯಡಿಯೂರಪ್ಪನವರು ಇಷ್ಟವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.