ETV Bharat / state

ಕಲಬುರಗಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಗೆ ಸಾಕ್ಷಿಯಾದ ಸಚಿವ ಶ್ರೀಮಂತ ಪಾಟೀಲ - Kalaburagi news

ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಕಲಬುರಗಿಯ ಡಿ. ಎ. ಆರ್. ಮೈದಾನದಲ್ಲಿ ಆಯೋಜಿಸಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ ಧ್ವಜಾರೋಹಣ ನೆರವೇರಿಸಿ ನೆರೆದವರನ್ನುದ್ದೇಶಿಸಿ ಮಾತನಾಡಿದರು.

Minister Shreemanth Patil witnesses 74th Independence Day at Kalaburagi
ಕಲಬುರಗಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚಾರಣೆಗೆ ಸಾಕ್ಷಿಯಾದ ಸಚಿವ ಶ್ರೀಮಂತ ಪಾಟೀಲ
author img

By

Published : Aug 15, 2020, 11:39 AM IST

ಕಲಬುರಗಿ: ಕೊರೊನಾದಿಂದಾಗಿ ಸದ್ಯಕ್ಕೆ ನಾವು ಕೆಟ್ಟ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೊರೊನಾ ವಿರುದ್ಧ ಹೋರಾಟಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, ಆದಷ್ಟು ಬೇಗ ಸಮಸ್ಯೆಯಿಂದ ಮುಕ್ತವಾಗೋಣ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಕಲಬುರಗಿಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚಾರಣೆಗೆ ಸಾಕ್ಷಿಯಾದ ಸಚಿವ ಶ್ರೀಮಂತ ಪಾಟೀಲ

ಕಲಬುರಗಿಯ ಡಿ. ಎ. ಆರ್. ಮೈದಾನದಲ್ಲಿ ಆಯೋಜಿಸಿದ್ದ 74 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ವೇಳೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೊರೊನಾ ವೈರಾಣು ಹಾವಳಿಗೆ ಹೆದರುವ ಅವಶ್ಯಕತೆ ಇಲ್ಲ. ಎಲ್ಲರೂ ದಿಟ್ಟವಾಗಿ ಹೆಮ್ಮಾರಿ‌ ಕೊರೊನಾ ವಿರುದ್ಧ ಹೋರಾಡೋಣ ಎಂದರು. ಕಲಬುರ್ಗಿ ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಈ ಪೈಕಿ 90 ಸಾವಿರಕ್ಕೂ ಅಧಿಕ ಜನರಿಗೆ ನೆಗೆಟಿವ್ ವರದಿ ಬಂದಿದೆ

ಜಿಮ್ಸ್, ಇ. ಎಸ್. ಐ ಸೇರಿ ಜಿಲ್ಲೆಯ ಎಂಟು ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ಮಾಡಿಸಲಾಗಿದೆ. ಕಲಬುರ್ಗಿ ಸ್ಮಾರ್ಟ್ ಸಿಟಿಗೆ 500 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ನಗರಕ್ಕೆ ನಿರಂತರ ನೀರು ಪೂರೈಕೆಗೂ ಕೂಡ 838 ಕೋಟಿ ರೂಪಾಯಿ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸರ್ಕಾರ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.