ETV Bharat / state

ಮುರುಘಾ ಮಠಕ್ಕೆ ಸಚಿವ ಭೈರತಿ ಬಸವರಾಜ್​ ಭೇಟಿ: ಬಡವರಿಗೆ ದಿನಸಿ ಕಿಟ್​​ ವಿತರಣೆ

ಮುರುಘಾ ಮಠಕ್ಕೆ ಭೇಟಿ ನೀಡಿದ ಸಚಿವರು, ಶರಣರ ಜೊತೆ ಕೊರೊನಾ ವೈರಸ್ ಬಗ್ಗೆ ಸ್ವಲ್ಪ ಕಾಲ ಚರ್ಚಿಸಿದರು. ಬಳಿಕ ನಿರಾಶ್ರಿತ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.

Minister of Urban Development Bhairati Basavaraj
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮುರುಘಾ ಮಠಕ್ಕೆ ಭೇಟಿ
author img

By

Published : Apr 27, 2020, 4:43 PM IST

ಚಿತ್ರದುರ್ಗ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ದಾವಣಗೆರೆಗೆ ಹೋಗುವ ಮಾರ್ಗ ಮಧ್ಯೆ ಚಿತ್ರದುರ್ಗಕ್ಕೆ‌ ಆಗಮಿಸಿ ಮುರುಘಾ ಮಠಕ್ಕೆ ಭೇಟಿ ನೀಡಿದರು.

ಲಾಕ್​ಡೌನ್​ನಿಂದಾಗಿ ಬಡವರಿಗೆ, ನಿರ್ಗತಿಕರಿಗೆ ಆಗ್ತಿರುವ ಸಮಸ್ಯೆಗಳನ್ನು ಆಲಿಸಿದ ಸಚಿವರು, ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮನೆಗೆ ತೆರಳಿದ ಬಳಿಕ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ ಶ್ರೀ ಶಿವಮೂರ್ತಿ ಮುರುಘಾ ಶರಣರಿಂದ ಆಶೀರ್ವಾದ ಪಡೆದರು.

ಮುರುಘಾ ಮಠಕ್ಕೆ ಭೇಟಿ ನೀಡಿದ ಅವರು, ಶರಣರ ಜೊತೆ ಕೊರೊನಾ ವೈರಸ್ ಬಗ್ಗೆ ಸ್ವಲ್ಪ ಕಾಲ ಚರ್ಚಿಸಿದರು. ಬಳಿಕ ನಿರಾಶ್ರಿತ ಕಾರ್ಮಿಕರು, ನಿರ್ಗತಿಕರಿಗೆ ಸಚಿವರು ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.

ಮುರುಘಾ ಮಠದಿಂದ 300 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಹರಡದಂತೆ ಸಹಕರಿಸುವಂತೆ ಸಚಿವರು ಜನರಲ್ಲಿ ಮನವಿ ಮಾಡಿದರು. ಈ ವೇಳೆ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.