ಕಲಬುರಗಿ: ನಗರಾಭಿವೃದ್ಧಿ ಇಲಾಖೆಯಲ್ಲಿ ಯಾವೆಲ್ಲ ಕಾಮಗಾರಿಗಳು ಬಾಕಿ ಇವೆಯೋ ಅವೆಲ್ಲಕ್ಕೂ ವೇಗ ನೀಡುವುದಾಗಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ನಗರಕ್ಕೆ 24x7 ಕಾಮಗಾರಿಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಿರುವುದಾಗಿ ಹೇಳಿದ್ದಾರೆ. ಒಟ್ಟು 837 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಜಲ ಶುದ್ಧೀಕರಣ ಘಟಕದಲ್ಲಿಯೂ ಹೊಸ ಯಂತ್ರೋಪಕರಣ ಅಳವಡಿಕೆ ಮಾಡುಲಾಗುವುದು ಎಂದರು.
ಎಸ್.ಟಿ.ಪಿ ಪ್ಲಾಂಟ್ ನೀರು ಭೀಮಾ ನದಿಗೆ ಬಿಡೋದು ಅಪರಾಧ:
ಎಸ್.ಟಿ.ಪಿ ಪ್ಲಾಂಟ್ ನೀರನ್ನು ನೇರವಾಗಿ ಭೀಮಾ ನದಿಗೆ ಬಿಡೋದು ಅಪರಾಧ. ನೀರನ್ನು ಕಲಬುರಗಿಯ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಮತ್ತು ಶರಣಬಸವೇಶ್ವರ ಕೆರೆ ತುಂಬಿಸಲು ಬಳಕೆ ಮಾಡಿಕೊಳ್ಳಲಾಗುವುದು. 10 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಸೌಂದರೀಕರಣ ಮಾಡಲಾಗುತ್ತದೆ ಎಂದರು.
ಪತ್ರಕರ್ತರಿಗೆ ನಿವೇಶನ: ಸ್ಮಾರ್ಟ್ ಸಿಟಿಗೆ ಸಾವಿರ ಕೋಟಿ ರೂ.
ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಲಿರುವ ಲೇಔಟ್ಗಳಲ್ಲಿ ಶೇ.5 ರಷ್ಟು ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿಡಲಾಗುವುದು. ಕಲಬುರಗಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಬರುತ್ತೆ. ಆಯ್ಕೆಯಾದರೆ ಆ ಹಣದಿಂದ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.