ETV Bharat / state

ಕಲಬುರಗಿಯಿಂದ ತಮ್ಮ ರಾಜ್ಯಗಳಿಗೆ ಕಾಲ್ನಡಿಗೆಯಲ್ಲೇ ಹೊರಡಲು ಮುಂದಾದ ವಲಸೆ ಕಾರ್ಮಿಕರು!

ಕಲಬುರಗಿಯಲ್ಲಿ ವಾಸವಿದ್ದ ಬಿಹಾರ ಹಾಗೂ ರಾಜಸ್ಥಾನ ಮೂಲದ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಗಳಿಗೆ ತೆರಳಲು ಮುಂದಾಗಿದ್ದಾರೆ.

migrant labours problem in kalaburgi
ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು
author img

By

Published : May 9, 2020, 8:18 PM IST

ಕಲಬುರಗಿ: ಜಿಲ್ಲೆಯಲ್ಲಿದ್ದ ರಾಜಸ್ಥಾನ, ಬಿಹಾರ ಕಾರ್ಮಿಕರು ಸಾರಿಗೆ ವ್ಯವಸ್ಥೆ ಇಲ್ಲದೆ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿಯೇ ತಮ್ಮೂರು ಸೇರಲು ಮುಂದಾಗಿದ್ದಾರೆ.

ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕರು
ನಗರದ ಎಂ.ಎಸ್.ಕೆ ಮಿಲ್ ಬಡಾವಣೆಯ ಮಿರ್ಚಿ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ 70 ಜನ ಕಾರ್ಮಿಕರು ನಡೆಯುತ್ತಾ ಬಿಹಾರದ ಕಡೆ ಹೊರಟಿದ್ದಾರೆ. ಲಾಕ್​​ಡೌನ್ ಕಾರಣದಿಂದಾಗಿ ಕಳೆದ ಒಂದು ತಿಂಗಳಿಂದ ಕೆಲಸವಿಲ್ಲ, ವೇತನವೂ ಇಲ್ಲ. ಹೀಗಾಗಿ ಊಟಕ್ಕೂ ಪರದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡ ಕಾರ್ಮಿಕರು, ಕಾಲ್ನಡಿಗೆಯಲ್ಲಿಯೇ 2,200 ಕಿಲೋ ಮೀಟರ್ ದೂರವಿರೋ ಬಿಹಾರಕ್ಕೆ​​ ನಡೆಯುತ್ತಲೇ ಹೊರಟಿರುವುದಾಗಿ ತಿಳಿಸಿದ್ದಾರೆ.
ಇನ್ನು ರಾಜಸ್ಥಾನ ಮೂಲದ ಸುಮಾರು 150ಕ್ಕೂ ಹೆಚ್ಚು ಕಾರ್ಮಿಕರು ತಮ್ಮೂರಿಗೆ ತೆರಳಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಸೇವಾ ಸಿಂಧು ಆನ್‌ಲೈನ್ ಪ್ರಕ್ರಿಯೆ ಮೂಲಕ 60 ಕಾರ್ಮಿಕರು ತಮ್ಮೂರಿಗೆ ತೆರಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದ್ರೆ ಜಿಲ್ಲಾಡಳಿತ ತಮಗೆ ಊರಿಗೆ ತೆರಳಲು ಸೂಕ್ತ ಸೌಲಭ್ಯ ಒದಗಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆಯೇ ಹೊರತು ತಮಗೆ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸುತ್ತಿಲ್ಲ. ಹೀಗಾದರೆ ಅನಿವಾರ್ಯವಾಗಿ ಮಕ್ಕಳ ಸಮೇತ ಕಾಲ್ನಡಿಗೆಯಲ್ಲಿ ಊರಿಗೆ ತೆರಳಬೇಕಾಗಲಿದೆ. ತಕ್ಷಣ ಸರ್ಕಾರ ತಮ್ಮ ಕಷ್ಟಕ್ಕೆ ಸ್ಪಂದಿಸಲಿ ಎಂದು ಅವಲತ್ತುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.