ETV Bharat / state

ಸೋಂಕಿನಿಂದ ಮೃತಪಟ್ಟ ತಾಯಿ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಯವಕ..

ಯುವಕ ಕೇಳದಿದ್ದಾಗ ಆತನ ಜೀವಕ್ಕೆ ಕುತ್ತು ಬರಬಹುದೆಂಬ ಕಾರಣಕ್ಕೆ ತಾಯಿಯ ಮುಖ ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಇದಾದ ನಂತರ ಆಸ್ಪತ್ರೆ ಕಟ್ಟಡದಿಂದ ಯುವಕ ಕೆಳಗಿಳಿದ್ದಾನೆ..

man-tried-to-climb-the-hospital-building-while-the-staff-reject-to-meet-his-died-mother
ಸೋಂಕಿನಿಂದ ಮೃತಪಟ್ಟ ತಾಯಿ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಯವಕ
author img

By

Published : Apr 25, 2021, 9:10 PM IST

ಕಲಬುರಗಿ : ಕೊರೊನಾ‌ ಸೋಂಕಿನಿಂದ ಮೃತಪಟ್ಟ ತಾಯಿಯ ಮುಖ ನೋಡಲಿಕ್ಕೆ ಅನುಮತಿ ನೀಡಲಿಲ್ಲ ಎಂದು ಯುವಕನೊಬ್ಬ ಬಹುಮಹಡಿ ಕಟ್ಟಡ ಏರಲು ಯತ್ನಿಸಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಕಳೆದ 12 ದಿನಗಳಿಂದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ತಾಯಿ ಇವತ್ತು ಬೆಳಗ್ಗೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಖಿನ್ನತೆಗೆ ಒಳಗಾಗಿರುವ ಯುವಕ ಮತ್ತು ಯುವಕನ‌ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಸೋಂಕಿನಿಂದ ಮೃತಪಟ್ಟ ತಾಯಿ ಮುಖ ನೋಡಲು ಬಹುಮಹಡಿ ಕಟ್ಟಡ ಏರಿದ ಯುವಕ..

ಒಮ್ಮೆ ತಾಯಿ ಮುಖ ನೋಡಲು ಬಿಡಿ ಎಂದು ಸಿಬ್ಬಂದಿಯನ್ನು ಪರಿಪರಿಯಾಗಿ ಕೇಳಿದರೂ ಅವರು ಒಪ್ಪದಿದ್ದಾಗ, ಬಹು ಮಹಡಿ ಜಿಮ್ಸ್ ಕಟ್ಟಡವನ್ನು ಏರಲು ಯತ್ನಿಸಿದ್ದಾರೆ. ಅರ್ಧದಷ್ಟು ಕಟ್ಟಡ ಏರಿದ್ದನ್ನು ಕಂಡು ಸಿಬ್ಬಂದಿ ಆತನ ಮನವೊಲಿಸಲು ಯತ್ನಿಸಿದ್ದಾರೆ‌.

ಯುವಕ ಕೇಳದಿದ್ದಾಗ ಆತನ ಜೀವಕ್ಕೆ ಕುತ್ತು ಬರಬಹುದೆಂಬ ಕಾರಣಕ್ಕೆ ತಾಯಿಯ ಮುಖ ತೋರಿಸುವುದಾಗಿ ಭರವಸೆ ನೀಡಿದ್ದಾರೆ. ಇದಾದ ನಂತರ ಆಸ್ಪತ್ರೆ ಕಟ್ಟಡದಿಂದ ಯುವಕ ಕೆಳಗಿಳಿದ್ದಾನೆ. ಯುವಕನ ದುಸ್ಸಾಹಸದಿಂದ ಆಸ್ಪತ್ರೆ ಮುಂಭಾಗದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಓದಿ: ಕೃತಕವಾಗಿ ಹಾಸಿಗೆ ಅಭಾವ ಸೃಷ್ಟಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ : ಡಿಸಿ ರೋಹಿಣಿ ಸಿಂಧೂರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.