ಕಲಬುರಗಿ: ದೇಶಾದ್ಯಂತ ಕೊರೊನಾ ಕರಿಛಾಯೆ ಆವರಿಸುತ್ತಿದ್ದು, ಈಗಾಗಲೇ ಇಡೀ ಭಾರತವೇ ಲಾಕ್ಡೌನ್ ಆಗಿದೆ. ಇನ್ನು ಇದರ ನಡುವೆ ಜನರು ಗಂಭೀರವಾಗಿ ತೆಗೆದುಕೊಳ್ಳದೆ, ಜನರು ಎಲ್ಲಿಯಂದರಲ್ಲಿ ತಿರುಗಾಡುತ್ತಿದ್ದಾರೆ. ಅಂತಹವರಿಗೆ ಪೊಲೀಸರು ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಹೋಂ ಕ್ವಾರಂಟೈನ್ ಬಿಟ್ಟು ಹೊರಬಂದ ವ್ಯಕ್ತಿಗೆ, ಪೊಲೀಸರು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಶಹಬಾದ್ ಪಟ್ಟಣಕ್ಕೆ ವಿದೇಶದಿಂದ ಬಂದ ವ್ಯಕ್ತಿಗೆಯನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿತ್ತು. ಆದ್ರೆ ಆತ ಬೇಕಾಬಿಟ್ಟಿಯಾಗಿ ಹೊರಗಡೆ ಒಡ್ಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ, ಶಹಾಬಾದ್ ಠಾಣೆಯ ಪೊಲೀಸರು ಮನೆಗೆ ಆಗಮಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮನೆಯಲ್ಲೇ ಇರಬೇಕು, ಹೊರಗಡೆ ಬಂದ್ರೆ ಕೇಸ್ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.