ETV Bharat / state

ಕಲಬುರಗಿಯಲ್ಲಿ ಕೌಟುಂಬಿಕ ಕಲಹ - ಪತ್ನಿ ಮೇಲೆ‌ ಗುಂಡು ಹಾರಿಸಿ‌ ಕೊಲೆ ಮಾಡಿದ ಪತಿ - ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಆಲೂರು ಗ್ರಾಮದಲ್ಲಿ ಗುಂಡು ಹಾರಿಸಿ ಪತ್ನಿಯನ್ನೇ ಪತಿ ಕೊಲೆ ಮಾಡಿದ ಘಟನೆ ನಡೆದಿದೆ.

ಬಸವರಾಜ
ಬಸವರಾಜ
author img

By ETV Bharat Karnataka Team

Published : Sep 14, 2023, 8:32 PM IST

ಕಲಬುರಗಿ : ಗುಂಡು ಹಾರಿಸಿ ಪತ್ನಿಯನ್ನೇ ಪತಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಆಲೂರು (ಕೆ) ಗ್ರಾಮದಲ್ಲಿ ನಡೆದಿದೆ. 36 ವರ್ಷದ ಹನಮವ್ವ ಕೊಲೆಯಾದ ಮಹಿಳೆ. ಪತಿ ಕೊಲೆ ಆರೋಪಿ ಬಸವರಾಜ, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾನೆ‌.

ಆಲೂರು (ಬಿ) ಗ್ರಾಮದ ನಿವಾಸಿಯಾದ ಬಸವರಾಜ ಎಂಬುವವರಿಗೆ ಕಳೆದ 18 ವರ್ಷಗಳ ಹಿಂದೆ ಆಲೂರು (ಕೆ) ಗ್ರಾಮದ ನಿವಾಸಿ ಹನಮವ್ವ ಜೊತೆ ವಿವಾಹವಾಗಿತ್ತು. ಕುಡಿತದ ಚಟಕ್ಕೆ ದಾಸನಾಗಿದ್ದ ಬಸವರಾಜ ಮದುವೆಯಾದಾಗಿನಿಂದ ಹನಮವ್ವ ಜತೆ ಜಗಳ ತೆಗೆಯುತ್ತಿದ್ದ. ಇದರಿಂದ ಬೇಸತ್ತ ಹನಮವ್ವ ಗಂಡನನ್ನ ಬಿಟ್ಟು ತನ್ನ ತವರು ಮನೆಗೆ ಸೇರಿದ್ದಳು‌. ಕಳೆದ ಎರಡು ದಿನಗಳ ಹಿಂದೆ ಬಸವರಾಜ ಹೆಂಡತಿ ಮನೆಗೆ ಬಂದು ತನ್ನ ಮನೆಗೆ ಕರೆದುಕೊಂಡು ಹೋಗಲು ಬಯಸಿದ್ದ. ಆದರೆ, ಎರಡು ಮೂರು ದಿನಗಳ ಬಳಿಕ ಬರುವುದಾಗಿ ಹನಮವ್ವ ಹೇಳಿ ಕಳುಹಿಸಿದ್ದಳು.

ಇಂದು ಕುಡಿದು ಬಂದಿದ್ದ ಬಸವರಾಜ ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ, ಮನೆಯಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಪತ್ನಿ ಮೇಲೆ ಎರಗಿ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ತಿಳಿದು ಚಿತ್ತಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕಡಗಂಚಿ ಬಳಿ ಆ್ಯಕ್ಸಿಡೆಂಟ್​.. ಇಬ್ಬರು ಯುವಕರು ಸಾವು: ಸಾರಿಗೆ ಬಸ್​ ಮತ್ತು ದ್ವಿ- ಚಕ್ರ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಆಳಂದ ತಾಲೂಕಿನ ಕಡಗಂಚಿ ಬಳಿ ನಡೆದಿದೆ. ಲಾಡಮುಗಳಿ ಗ್ರಾಮದ ಶಶಿಕಾಂತ ಕಟ್ಟಬೂರೆ (27) ಹಾಗೂ ಶಿವಕುಮಾರ (25) ಮೃತ ಯುವಕರು. ಲಾಡಮುಗಳಿಯಿಂದ ಕೋರಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿಂದ ಲಾಡಚಿಂಚೋಳಿ ಮಾರ್ಗವಾಗಿ ಕಡಗಂಚಿಗೆ ಹೋಗುವಾಗ ಕಲಬುರಗಿಯಿಂದ ಆಳಂದಕ್ಕೆ ತೆರಳುತ್ತಿದ್ದ ಸಾರಿಗೆ ಬಸ್​ ಹಾಗೂ ಬೈಕ್​ ನಡುವೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್‌ಪಿ ಗೋಪಿ ಆರ್, ಸಿಪಿಐ ಭಾಸು ಚವ್ಹಾಣ್​, ಪಿಎಸ್‌ಐ ಗಂಗಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ- ಮಹಿಳೆ ಬಂಧನ : ಕಲಬುರಗಿಯ ಓಜಾ‌ ಕಾಲೋನಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ. ಬಿದ್ದಾಪುರ ಕಾಲೋನಿಯ ನಾಗಮ್ಮ ಫೂಲಾರಿ (40) ಎಂಬುವವರನ್ನು ಬಂಧಿಸಿ 600 ರೂ.ನಗದು ಮತ್ತು 1500 ರೂ.ಮೌಲ್ಯದ ಮೊಬೈಲ್ ಜಪ್ತಿ ಮಾಡಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಜೇವರ್ಗಿ ಕಾಲೋನಿಯ ಅಶೋಕ ಹಾಗರಗಿ (52) ವಿರುದ್ಧ ಪ್ರಕರಣ ದಾಖಲಾಗಿದೆ. ದಂದೆಯಲ್ಲಿ ತೊಡಗಿದ್ದ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಸಂಬಂಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Double Murder : ಬೆಂಗಳೂರಿನಲ್ಲಿ ಜೋಡಿ ಕೊಲೆ.. ಹೆಂಡತಿ, ಮಗನ ಕೊಂದು ಪರಾರಿಯಾದ ಪತಿ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.