ETV Bharat / state

ಸೋತರೂ ಕುಗ್ಗದ ವರ್ಚಸ್ಸು! ಎಐಸಿಸಿ ಅಧ್ಯಕ್ಷ ಗಾದಿಗೆ ಮುಂಚೂಣಿಯಲ್ಲಿದೆ ಖರ್ಗೆ ಹೆಸರು! - ರಾಹುಲ್ ಗಾಂಧಿ

ರಾಹುಲ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಮರ್ಥ ನಾಯಕನನ್ನು ಹುಡುಕಾಟದಲ್ಲಿರುವಾಗ ಖರ್ಗೆ ಹೆಸರು ತೇಲಿ ಬಂದಿದೆ. ಕಳೆದ ಬಾರಿ ಸಂಸತ್​ನಲ್ಲಿ ತಮ್ಮ ವಿಶಿಷ್ಟ ಮಾತಿನ ಶೈಲಿಯಲ್ಲಿಯೇ ಪ್ರಧಾನಿ ಮೋದಿಯ ಕಟ್ಟಿ ಹಾಕುವ ಕೆಲಸವನ್ನು ಖರ್ಗೆ ಮಾಡಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಸೂಕ್ತ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ
author img

By

Published : May 30, 2019, 3:05 PM IST

ಕಲಬುರಗಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋತರೂ ರಾಷ್ಟ್ರಮಟ್ಟದಲ್ಲಿ ಮತ್ತೆ ಮಿಂಚುವ ಲಕ್ಷಣಗಳು ಕಂಡು ಬರುತ್ತಿವೆ.

ಲೋಕಸಭೆ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಹಿನ್ನೆಲೆ ತೆರುವಾಗುವ ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಗೆ ಒಲಿದು ಬರುವ ಲಕ್ಷಣಗಳು ಗೋಚರಿಸುತ್ತಿದೆ. ಇದು ಸಹಜವಾಗಿಯೇ ಖರ್ಗೆ ಬೆಂಬಲಿಗರಲ್ಲಿ ಖುಷಿ ಮೂಡಿಸಿದೆ.
ಹಿಂದೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಸಮರ್ಥವಾಗಿ ಕಾರ್ಯಭಾರ ನಡೆಸಿದ ಖರ್ಗೆ ಅವರ ಹೆಸರು ಈ ಬಾರಿ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಯಾಗಿರುವ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಕೇಳಿ ಬರುತ್ತಿದೆ.

ಹಲವು ಹೆಸರುಗಳಿದ್ದರೂ ಖರ್ಗೆ ಹೆಸರು ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯವರೇ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ನೀಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ದೇಶದ ಜನರು ನಾಯಕತ್ವ ಒಪ್ಪಿಕೊಂಡಿಲ್ಲ ಎಂದು ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಹುಲ್ ಗಾಂಧಿಯೇ ಮುಂದುವರೆಯುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡದ ರಾಹುಲ್, ರಾಜೀನಾಮೆ ವಾಪಸ್ಸು ಪಡೆಯೋದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಖರ್ಗೆ ಅವರ ಹೆಸರು ಮುನ್ನಲೆಗೆ ಬಂದಿದೆ.

ರಾಹುಲ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸಮರ್ಥ ನಾಯಕನನ್ನು ಹುಡುಕಾಟದಲ್ಲಿರುವಾಗ ಖರ್ಗೆ ಹೆಸರು ತೇಲಿ ಬಂದಿದೆ. ಕಳೆದ ಬಾರಿ ಸಂಸತ್​ನಲ್ಲಿ ತಮ್ಮ ವಿಶಿಷ್ಟ ಮಾತಿನ ಶೈಲಿಯಲ್ಲಿಯೇ ಪ್ರಧಾನಿ ಮೋದಿಯ ಕಟ್ಟಿ ಹಾಕುವ ಕೆಲಸವನ್ನು ಖರ್ಗೆ ಮಾಡಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಸೂಕ್ತ, ಜೊತೆಗೆ ಮೋದಿಯ ಏಟಿಗೆ ಎದುರೇಟು ನೀಡಬಲ್ಲ ತಾಕತ್ತು ಖರ್ಗೆಗಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನಲ್ಲಿದೆ.

ಅನುಭವ ಮತ್ತು ಹಿರಿತನ:

50 ವರ್ಷಗಳ ಕಾಲ ರಾಜಕೀಯ ಅನುಭವವನ್ನು ಹೊಂದಿರುವ ಖರ್ಗೆ, 9 ಬಾರಿ ಶಾಸಕರಾಗಿ 2 ಬಾರಿ ಸಂಸದರಾಗಿದ್ದವರು. ಸಾಕಷ್ಟು ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಸಂಸತ್ ಒಳಗಡೆಯೂ ಮೋದಿ ವಿರುದ್ದ ಸಾಕಷ್ಟು ಮಾತನಾಡಿದ್ದಾರೆ. ಜೊತೆಗೆ ಪಕ್ಷ ನಿಷ್ಠೆ, ತಾಳ್ಮೆ ಕೂಡ ಅವರಲ್ಲಿದ್ದು ಎಲ್ಲರನ್ನೂ ತೆಗೆದುಕೊಂಡು ಹೋಗುವ ಸಾಮರ್ಥ ಹೊಂದಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಖರ್ಗೆ ಅವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೇಳಿ ಬರುತ್ತಿದೆ.

ರಾಷ್ಟ್ರಪತಿ ಹುದ್ದೆ ದಲಿತ ಸಮೂದಾಯಕ್ಕೆ ನೀಡಿದ್ದಾಗಿ ಹೇಳುವ ಪ್ರಧಾನಿ ಮೋದಿಗೆ ದಲಿತ ಸಮುದಾಯದ ಖರ್ಗೆಗೆ ಎಐಸಿಸಿ ಪಟ್ಟಕಟ್ಟಿ ಸಂದೇಶವನ್ನು ಸಾರಲು ಕಾಂಗ್ರೆಸ್ ಹೈಕಮಾಂಡ್ ಈ ಪ್ಲಾನ್ ಮಾಡಿದೆ ಎನ್ನಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ವರ್ಕೌಟ್ ಆಗಬಹುದೆಂಬ ಲೆಕ್ಕಾಚಾರ ಕೂಡಾ ಗಾಂಧಿ ಕುಟುಂಬದಲ್ಲಿದೆ ಎಂಬ ಮಾತುಗಳಿವೆ.

ಪಕ್ಷನಿಷ್ಠೆಯಲ್ಲಿ ಮೊದಲಿಗ!

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಮೂರ್ನಾಲ್ಕು ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ, ಖರ್ಗೆ ಹಿಂದೆಂದೂ ವ್ಯಕ್ತಿನಿಷ್ಠೆ ತೋರಿಸಿಲ್ಲ ಬದಲಾಗಿ ಪಕ್ಷನಿಷ್ಠೆಗೆ ಹೆಸರಾದವರು. ಪಕ್ಷದ ಸಂಘಟನೆ, ಅಭಿವೃದ್ದಿಗಾಗಿ ದುಡಿಯುತ್ತಲೇ ಬಂದಿದ್ದಾರೆ. ಈ ಹಿಂದೆ ದಲಿತ ಸಿಎಂ ಕೂಗು ಎದ್ದಾಗಲೂ ಕೂಡ ನಾನು ದಲಿತ ಎನ್ನುವ ಕಾರಣಕ್ಕಾಗಿ ಮುಖ್ಯಮಂತ್ರಿ ನೀಡಬೇಡಿ, ಪಕ್ಷಕ್ಕಾಗಿ ದುಡಿದಿದ್ದೇನೆ. ಅದನ್ನು ಪರಿಗಣಿಸಿ ಸಿಎಂ ಹುದ್ದೆ ನೀಡುವುದಾದ್ರೆ ನೀಡಲಿ ಎಂದು ಹೇಳಿದ್ದರು. ಇಂತಹ ಪಕ್ಷ ನಿಷ್ಠ ನಾಯಕನನ್ನು ಎಐಸಿಸಿ ಅಧ್ಯಕ್ಷನಾಗಿ ಮಾಡಿದ್ರೆ ಪಕ್ಷಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಆಗಲಿದೆ ಎನ್ನುವ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.

ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಖರ್ಗೆ ಹೆಸರು ಪ್ರಸ್ತಾಪವಾಗಿದೆ. ಇದರೊಂದಿಗೆ ರಾಜ್ಯ ರಾಜಕಾರಣಕ್ಕೆ ಖರ್ಗೆಯವರನ್ನು ಮರಳಿ ಕರೆ ತರುವ ಪ್ರಯತ್ನಗಳು ಸಮ್ಮಿಶ್ರ ಸರಕಾರದ ಮುಖಂಡರಲ್ಲಿ ನಡೆಯುತ್ತಿದೆ. ಎಲ್ಲರೊಂದಿಗೆ ಸಮನ್ವಯತೆಯನ್ನು ಸಾಧಿಸುವ ಗುಣ ಹೊಂದಿರುವ ಖರ್ಗೆ ರಾಜ್ಯ ರಾಜಕಾರಣಕ್ಕೆ ಆಗಮಿಸಿದ್ದೇ ಆದಲ್ಲಿ ಸಮ್ಮಿಶ್ರ ಸರಕಾರ ಸುಸೂತ್ರವಾಗಿ ನಡೆಯಲಿದೆ ಎನ್ನುವ ಲೆಕ್ಕಾಚಾರ ಮೈತ್ರಿ ನಾಯಕರಲ್ಲಿದೆ.

ಮಲ್ಲಿಕಾರ್ಜುನ ಖರ್ಗೆ ಸೋತರು ಅವರ ವರ್ಚಸ್ಸು ಸ್ಟ್ರಾಂಗ್ ಆಗಿಯೇ ಕೆಲಸ ಮಾಡ್ತಿದೆ. ಒಂದೆಡೆ ಎಐಸಿಸಿ ಗಾಧಿ, ಇನ್ನೊಂದೆಡೆ ಸಮನ್ವಯ ಸಮಿತಿ ಗಾಧಿ ಖರ್ಗೆಯವರತ್ತ ಮುಖ ಮಾಡುವ ಲಕ್ಷಣಗಳು ಕಂಡು ಬಂದಿವೆ.

Intro:ಕಲಬುರಗಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋತರೂ ರಾಷ್ಟ್ರ ಮಟ್ಟದಲ್ಲಿ ಮತ್ತೆ ಮಿಂಚುವ ಲಕ್ಷಣಗಳು ಕಂಡು ಬರುತ್ತಿವೆ. ಲೋಕಸಭೆ ಸೋಲಿನ ಹೊಣೆಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಹಿನ್ನಲೆ ತೆರುವಾಗುವ ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಗೆ ಒಲಿದು ಬರುವ ಲಕ್ಷಣಗಳು ಕಾಣುತ್ತಿವೆ. ಇದು ಸಹಜವಾಗಿಯೇ ಖರ್ಗೆ ಬೆಂಬಲಿಗರಲ್ಲಿ ಖುಷಿ ಮೂಡಿಸಿದೆ.
ಹಿಂದೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಸಮರ್ಥವಾಗಿ ಕಾರ್ಯಭಾರ ನಡೆಸಿದ ಖರ್ಗೆ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಯಾಗಿರುವ ಎಐಸಿಸಿ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ) ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಅವರ ಹೆಸರು ಕೇಳಿ ಬರುತ್ತಿದೆ. ಹಲವು ಹೆಸರುಗಳಿದ್ದರೂ ಖರ್ಗೆ ಹೆಸರು ಮುಂಚೂಣಿಯಲ್ಲಿದ್ದು ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯವರೇ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ನೀಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ದೇಶದ ಜನರು ನಾಯಕತ್ವ ಒಪ್ಪಿಕೊಂಡಿಲ್ಲ ಎಂದು ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಹುಲ್ ಗಾಂಧಿಯೇ ಮುಂದುವರೆಯುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡದ ರಾಹುಲ್, ರಾಜೀನಾಮೆ ವಾಪಸ್ಸು ಪಡೆಯೋದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಖರ್ಗೆ ಅವರ ಹೆಸರು ಮುನ್ನಲೆಗೆ ಬಂದಿದೆ.
ರಾಹುಲ್ ರಾಜೀನಾಮೆಯಿಂದ ತೆರುವಾದ ಸ್ಥಾನಕ್ಕೆ ಸಮರ್ಥ ನಾಯಕನನ್ನು ಹುಡುಕಾಟದಲ್ಲಿರುವಾಗ ಖರ್ಗೆ ಹೆಸರು ತೆಲಿ ಬಂದಿದೆ. ಕಳೆದ ಬಾರಿ ಸಂಸತ್ ನಲ್ಲಿ ತಮ್ಮ ವಿಶಿಷ್ಠ ಮಾತಿನ ಶೈಲಿಯಲ್ಲಿಯೇ ಪ್ರಧಾನಿ ಮೋದಿಯ ಕಟ್ಟಿ ಹಾಕುವ ಕೆಲಸ ಖರ್ಗೆ ಮಾಡಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಸೂಕ್ತ ಜೊತೆಗೆ ಮೋದಿಯ ಏಟಿಗೆ ಎದುರೇಟು ನೀಡಬಲ್ಲ ತಾಕತ್ತು ಖರ್ಗೆಗಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನಲ್ಲಿದೆ.
50 ವರ್ಷಗಳ ಕಾಲ ರಾಜಕೀಯ ಅನುಭವವನ್ನು ಹೊಂದಿರುವ ಖರ್ಗೆ, 9 ಬಾರಿ ಶಾಸಕರಾಗಿ 2 ಬಾರಿ ಸಂಸದರಾಗಿದ್ದವರು. ಸಾಕಷ್ಟು ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಸಂಸತ್ ಒಳಗಡೆಯೂ ಮೋದಿ ವಿರುದ್ದ ಸಾಕಷ್ಟು ಮಾತನಾಡಿದ್ದಾರೆ. ಜೊತೆಗೆ ಪಕ್ಷ ನಿಷ್ಟೆ, ತಾಳ್ಮೆ ಕೂಡ ಅವರಲ್ಲಿದ್ದು ಎಲ್ಲರನ್ನೂ ತೆಗೆದುಕೊಂಡು ಹೋಗುವ ಸಾಮರ್ಥ ಹೊಂದಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಖರ್ಗೆ ಅವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೇಳಿ ಬರುತ್ತಿದೆ.
ರಾಷ್ಟ್ರಪತಿ ಹುದ್ದೆ ದಲಿತ ಸಮೂದಾಯಕ್ಕೆ ನೀಡಿದ್ದಾಗಿ ಹೇಳುವ ಪ್ರಧಾನಿ ಮೋದಿಗೆ ದಲಿತ ಸಮುದಾಯದ ಖರ್ಗೆಗೆ ಎಐಸಿಸಿ ಪಟ್ಟಕಟ್ಟಿ ಸಂದೇಶವನ್ನು ಸಾರಲು ಕಾಂಗ್ರೆಸ್ ಹೈಕಮಾಂಡ್ ಈ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ವರ್ಕೌಟ್ ಆಗಬಹುದೆಂಬ ಲೆಕ್ಕಾಚಾರ ಕೂಡಾ ಗಾಂಧಿ ಕುಟುಂಬದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಮೂರ್ನಾಲ್ಕು ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಖರ್ಗೆ ಹಿಂದೆಂದೂ ವ್ಯಕ್ತಿನಿಷ್ಠೆ ತೊರಿಸಿಲ್ಲ ಬದಲಾಗಿ ಪಕ್ಷನಿಷ್ಟೆಗೆ ಹೆಸರಾದವರು. ಪಕ್ಷದ ಸಂಘಟನೆ, ಅಭಿವೃದ್ದಿಗಾಗಿ ದುಡಿಯುತ್ತಲೇ ಬಂದಿದ್ದಾರೆ. ಈ ಹಿಂದೆ ದಲಿತ ಸಿಎಂ ಕೂಗು ಎದ್ದಾಗಲೂ ಕೂಡ ನಾನು ದಲಿತ ಎನ್ನುವ ಕಾರಣಕ್ಕಾಗಿ ಮುಖ್ಯಮಂತ್ರಿ ನೀಡಬೇಡಿ, ಪಕ್ಷಕ್ಕಾಗಿ ದುಡಿದಿದ್ದೇನೆ. ಅದನ್ನು ಪರಿಗಣಿಸಿ ಸಿಎಂ ಹುದ್ದೆ ನೀಡುವದಾದ್ರೆ ನೀಡಲಿ ಎಂದು ಹೇಳಿದ್ದರು. ಇಂತಹ ಪಕ್ಷ ನಿಷ್ಟ ನಾಯಕನನ್ನು ಎಐಸಿಸಿ ಅಧ್ಯಕ್ಷನಾಗ ಮಾಡಿದ್ರೆ ಪಕ್ಷಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಆಗಲಿದೆ ಎನ್ನುವ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.
ಇನ್ನು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಖರ್ಗೆ ಹೆಸರು ಪ್ರಸ್ತಾಪವಾಗಿದೆ. ಇದರೊಂದಿಗೆ ರಾಜ್ಯ ರಾಜಕಾರಣಕ್ಕೆ ಖರ್ಗೆಯವರನ್ನು ಮರಳಿ ಕರೆ ತರುವ ಪ್ರಯತ್ನಗಳು ಸಮ್ಮಿಶ್ರ ಸರಕಾರದ ಮುಖಂಡರಲ್ಲಿ ನಡೆಯುತ್ತಿದೆ. ಎಲ್ಲರೊಂದಿಗೆ ಸಮನ್ವಯತೆಯನ್ನು ಸಾಧಿಸುವ ಗುಣ ಹೊಂದಿರುವ ಖರ್ಗೆ ರಾಜ್ಯ ರಾಜಕಾರಣಕ್ಕೆ ಆಗಮಿಸಿದ್ದೇ ಆದಲ್ಲಿ ಸಮ್ಮಿಶ್ರ ಸರಕಾರ ಸುಸೂತ್ರವಾಗಿ ನಡೆಯಲಿದೆ ಎನ್ನುವ ಲೆಕ್ಕಾಚಾರ ಮೈತ್ರಿ ನಾಯಕರಲ್ಲಿದೆ.
ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋತರು ಅವರ ವರ್ಚಸ್ಸು ಸ್ಟ್ರಾಂಗ್ ಆಗಿಯೇ ಕೆಲಸ ಮಾಡ್ತಿದೆ. ಒಂದಡೆ ಎಐಸಿಸಿ ಗಾಧಿ ಇನ್ನೊಂದಡೆ ಸಮನ್ವಯ ಸಮಿತಿ ಗಾಧಿ ಖರ್ಗೆಯರತ್ತವ ಮುಖ ಮಾಡುವ ಲಕ್ಷಣಗಳು ಕಂಡು ಬಂದಿವೆ. ಸೋನಿಯಾ ಗಾಂಧಿ ಅವರ ಕೊನೆಯ ಚಿಂತನೆ ಖರ್ಗೆ ಪರವಾಗಿ ವರ್ಕೌಟ್ ಆಗಿದ್ದೆ ಆದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನ ಖರ್ಗೆ ಅವರಿಗೆ ಒಲೆದು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಿಂವುವದರಲ್ಲಿ ಎರಡನೇ ಮಾತೆ ಇಲ್ಲ....Body:ಕಲಬುರಗಿ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋತರೂ ರಾಷ್ಟ್ರ ಮಟ್ಟದಲ್ಲಿ ಮತ್ತೆ ಮಿಂಚುವ ಲಕ್ಷಣಗಳು ಕಂಡು ಬರುತ್ತಿವೆ. ಲೋಕಸಭೆ ಸೋಲಿನ ಹೊಣೆಹೊತ್ತು ರಾಹುಲ್ ಗಾಂಧಿ ರಾಜೀನಾಮೆ ಹಿನ್ನಲೆ ತೆರುವಾಗುವ ಎಐಸಿಸಿ ಅಧ್ಯಕ್ಷ ಸ್ಥಾನ ಮಲ್ಲಿಕಾರ್ಜುನ ಖರ್ಗೆಗೆ ಒಲಿದು ಬರುವ ಲಕ್ಷಣಗಳು ಕಾಣುತ್ತಿವೆ. ಇದು ಸಹಜವಾಗಿಯೇ ಖರ್ಗೆ ಬೆಂಬಲಿಗರಲ್ಲಿ ಖುಷಿ ಮೂಡಿಸಿದೆ.
ಹಿಂದೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಸಮರ್ಥವಾಗಿ ಕಾರ್ಯಭಾರ ನಡೆಸಿದ ಖರ್ಗೆ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಹುದ್ದೆಯಾಗಿರುವ ಎಐಸಿಸಿ (ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ) ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಅವರ ಹೆಸರು ಕೇಳಿ ಬರುತ್ತಿದೆ. ಹಲವು ಹೆಸರುಗಳಿದ್ದರೂ ಖರ್ಗೆ ಹೆಸರು ಮುಂಚೂಣಿಯಲ್ಲಿದ್ದು ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯವರೇ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ನೀಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ದೇಶದ ಜನರು ನಾಯಕತ್ವ ಒಪ್ಪಿಕೊಂಡಿಲ್ಲ ಎಂದು ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ರಾಹುಲ್ ಗಾಂಧಿಯೇ ಮುಂದುವರೆಯುವಂತೆ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಕಿವಿಗೊಡದ ರಾಹುಲ್, ರಾಜೀನಾಮೆ ವಾಪಸ್ಸು ಪಡೆಯೋದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಖರ್ಗೆ ಅವರ ಹೆಸರು ಮುನ್ನಲೆಗೆ ಬಂದಿದೆ.
ರಾಹುಲ್ ರಾಜೀನಾಮೆಯಿಂದ ತೆರುವಾದ ಸ್ಥಾನಕ್ಕೆ ಸಮರ್ಥ ನಾಯಕನನ್ನು ಹುಡುಕಾಟದಲ್ಲಿರುವಾಗ ಖರ್ಗೆ ಹೆಸರು ತೆಲಿ ಬಂದಿದೆ. ಕಳೆದ ಬಾರಿ ಸಂಸತ್ ನಲ್ಲಿ ತಮ್ಮ ವಿಶಿಷ್ಠ ಮಾತಿನ ಶೈಲಿಯಲ್ಲಿಯೇ ಪ್ರಧಾನಿ ಮೋದಿಯ ಕಟ್ಟಿ ಹಾಕುವ ಕೆಲಸ ಖರ್ಗೆ ಮಾಡಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ಪಟ್ಟಕ್ಕೆ ಖರ್ಗೆ ಸೂಕ್ತ ಜೊತೆಗೆ ಮೋದಿಯ ಏಟಿಗೆ ಎದುರೇಟು ನೀಡಬಲ್ಲ ತಾಕತ್ತು ಖರ್ಗೆಗಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನಲ್ಲಿದೆ.
50 ವರ್ಷಗಳ ಕಾಲ ರಾಜಕೀಯ ಅನುಭವವನ್ನು ಹೊಂದಿರುವ ಖರ್ಗೆ, 9 ಬಾರಿ ಶಾಸಕರಾಗಿ 2 ಬಾರಿ ಸಂಸದರಾಗಿದ್ದವರು. ಸಾಕಷ್ಟು ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಸಂಸತ್ ಒಳಗಡೆಯೂ ಮೋದಿ ವಿರುದ್ದ ಸಾಕಷ್ಟು ಮಾತನಾಡಿದ್ದಾರೆ. ಜೊತೆಗೆ ಪಕ್ಷ ನಿಷ್ಟೆ, ತಾಳ್ಮೆ ಕೂಡ ಅವರಲ್ಲಿದ್ದು ಎಲ್ಲರನ್ನೂ ತೆಗೆದುಕೊಂಡು ಹೋಗುವ ಸಾಮರ್ಥ ಹೊಂದಿದ್ದಾರೆ ಎಂಬ ಲೆಕ್ಕಾಚಾರದಲ್ಲಿ ಖರ್ಗೆ ಅವರ ಹೆಸರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕೇಳಿ ಬರುತ್ತಿದೆ.
ರಾಷ್ಟ್ರಪತಿ ಹುದ್ದೆ ದಲಿತ ಸಮೂದಾಯಕ್ಕೆ ನೀಡಿದ್ದಾಗಿ ಹೇಳುವ ಪ್ರಧಾನಿ ಮೋದಿಗೆ ದಲಿತ ಸಮುದಾಯದ ಖರ್ಗೆಗೆ ಎಐಸಿಸಿ ಪಟ್ಟಕಟ್ಟಿ ಸಂದೇಶವನ್ನು ಸಾರಲು ಕಾಂಗ್ರೆಸ್ ಹೈಕಮಾಂಡ್ ಈ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ. ಇದು ಮುಂದಿನ ಚುನಾವಣೆಯಲ್ಲಿ ವರ್ಕೌಟ್ ಆಗಬಹುದೆಂಬ ಲೆಕ್ಕಾಚಾರ ಕೂಡಾ ಗಾಂಧಿ ಕುಟುಂಬದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಮೂರ್ನಾಲ್ಕು ಹೆಸರುಗಳು ಕೇಳಿ ಬರುತ್ತಿವೆ. ಆದ್ರೆ ಖರ್ಗೆ ಹಿಂದೆಂದೂ ವ್ಯಕ್ತಿನಿಷ್ಠೆ ತೊರಿಸಿಲ್ಲ ಬದಲಾಗಿ ಪಕ್ಷನಿಷ್ಟೆಗೆ ಹೆಸರಾದವರು. ಪಕ್ಷದ ಸಂಘಟನೆ, ಅಭಿವೃದ್ದಿಗಾಗಿ ದುಡಿಯುತ್ತಲೇ ಬಂದಿದ್ದಾರೆ. ಈ ಹಿಂದೆ ದಲಿತ ಸಿಎಂ ಕೂಗು ಎದ್ದಾಗಲೂ ಕೂಡ ನಾನು ದಲಿತ ಎನ್ನುವ ಕಾರಣಕ್ಕಾಗಿ ಮುಖ್ಯಮಂತ್ರಿ ನೀಡಬೇಡಿ, ಪಕ್ಷಕ್ಕಾಗಿ ದುಡಿದಿದ್ದೇನೆ. ಅದನ್ನು ಪರಿಗಣಿಸಿ ಸಿಎಂ ಹುದ್ದೆ ನೀಡುವದಾದ್ರೆ ನೀಡಲಿ ಎಂದು ಹೇಳಿದ್ದರು. ಇಂತಹ ಪಕ್ಷ ನಿಷ್ಟ ನಾಯಕನನ್ನು ಎಐಸಿಸಿ ಅಧ್ಯಕ್ಷನಾಗ ಮಾಡಿದ್ರೆ ಪಕ್ಷಕ್ಕೆ ಇನ್ನಷ್ಟು ಬಲ ತುಂಬುವ ಕೆಲಸ ಆಗಲಿದೆ ಎನ್ನುವ ಲೆಕ್ಕಾಚಾರ ಪಕ್ಷದಲ್ಲಿ ನಡೆಯುತ್ತಿದೆ.
ಇನ್ನು ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೂ ಖರ್ಗೆ ಹೆಸರು ಪ್ರಸ್ತಾಪವಾಗಿದೆ. ಇದರೊಂದಿಗೆ ರಾಜ್ಯ ರಾಜಕಾರಣಕ್ಕೆ ಖರ್ಗೆಯವರನ್ನು ಮರಳಿ ಕರೆ ತರುವ ಪ್ರಯತ್ನಗಳು ಸಮ್ಮಿಶ್ರ ಸರಕಾರದ ಮುಖಂಡರಲ್ಲಿ ನಡೆಯುತ್ತಿದೆ. ಎಲ್ಲರೊಂದಿಗೆ ಸಮನ್ವಯತೆಯನ್ನು ಸಾಧಿಸುವ ಗುಣ ಹೊಂದಿರುವ ಖರ್ಗೆ ರಾಜ್ಯ ರಾಜಕಾರಣಕ್ಕೆ ಆಗಮಿಸಿದ್ದೇ ಆದಲ್ಲಿ ಸಮ್ಮಿಶ್ರ ಸರಕಾರ ಸುಸೂತ್ರವಾಗಿ ನಡೆಯಲಿದೆ ಎನ್ನುವ ಲೆಕ್ಕಾಚಾರ ಮೈತ್ರಿ ನಾಯಕರಲ್ಲಿದೆ.
ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋತರು ಅವರ ವರ್ಚಸ್ಸು ಸ್ಟ್ರಾಂಗ್ ಆಗಿಯೇ ಕೆಲಸ ಮಾಡ್ತಿದೆ. ಒಂದಡೆ ಎಐಸಿಸಿ ಗಾಧಿ ಇನ್ನೊಂದಡೆ ಸಮನ್ವಯ ಸಮಿತಿ ಗಾಧಿ ಖರ್ಗೆಯರತ್ತವ ಮುಖ ಮಾಡುವ ಲಕ್ಷಣಗಳು ಕಂಡು ಬಂದಿವೆ. ಸೋನಿಯಾ ಗಾಂಧಿ ಅವರ ಕೊನೆಯ ಚಿಂತನೆ ಖರ್ಗೆ ಪರವಾಗಿ ವರ್ಕೌಟ್ ಆಗಿದ್ದೆ ಆದಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನ ಖರ್ಗೆ ಅವರಿಗೆ ಒಲೆದು ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಿಂವುವದರಲ್ಲಿ ಎರಡನೇ ಮಾತೆ ಇಲ್ಲ....Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.