ಸೇಡಂ:ಸತತ 40 ಗಂಟೆಗಳ ನಂತರ ತಾಲೂಕಿನ ಮಳಖೇಡ ಗ್ರಾಮದ ಕಾಗೀಣಾ ನದಿಗೆ ಅಡ್ಡಲಾಗಿ ಕಟ್ಟಡಲಾಗಿರುವ ಬ್ರಿಡ್ಜ್ ಸಂಚಾರಕ್ಕೆ ಮುಕ್ತವಾಗಿದೆ.
ನಿರಂತರ ಉಕ್ಕಿ ಹರಿಯುತ್ತಿರುವ ಕಾಗೀಣಾ ನದಿ ಭಾನುವಾರ ಸೂರ್ಯಾಸ್ತದ ಜೊತೆಗೆ ತನ್ನ ಹರಿವನ್ನೂ ತಗ್ಗಿಸಿಕೊಂಡಿದೆ. ಇದರಿಂದ ಬ್ರಿಡ್ಜ್ ಮೇಲಿನ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಡಿ.ಸಿ.ಎಲ್. ಎಇಇ ಬಸವರಾಜ ಮತ್ತು ಇಇ ಸಂತೋಷ ಬ್ರಿಡ್ಜ್ ಸಂಚಾರ ಸಾಮರ್ಥ್ಯವನ್ನು ಪರಿಶೀಲಿಸಿದ್ದಾರೆ. ನಂತರ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಿ, ಕೆಲ ಹೊತ್ತಿನ ನಂತರ ಉಳಿದ ವಾಹನಗಳಿಗೆ ಚಾಲನೆ ದೊರೆತಿದೆ.