ಕಲಬುರಗಿ: ಮುಖ್ಯಮಂತ್ರಿ ಯಡಿಯೂರಪ್ಪ ತುಂಬಾ ಧೈರ್ಯವಂತರು. ಹಿಂದಿನ ವೀರಶೈವ ಮುಖ್ಯಮಂತ್ರಿಗಳು ಮಾಡದ ಧೈರ್ಯವನ್ನು ಯಡಿಯೂರಪ್ಪ ಮಾಡಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ ಎಂದು ಶ್ರೀಶೈಲ್ ಸಾರಂಗಧರ ದೇಶಿಕೇಂದ್ರದ ಮಹಾಂತ ಶಿವಾಚಾರ್ಯರು ಸಿಎಂ ಅವರನ್ನು ಹೊಗಳಿದ್ದಾರೆ.
ಕಲಬುರಗಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಗಳು, ಬಹುದಿನಗಳ ಬೇಡಿಕೆ ಸಿಎಂ ಬಿಎಸ್‌ವೈ ಈಡೇರಿಸಿದ್ದಾರೆ. ಬಹುಸಂಖ್ಯಾತ ಲಿಂಗಾಯತರು ರಾಜ್ಯದಲ್ಲಿ ಇರುವ ಕಾರಣ ನಿಗಮ ಮಂಡಳಿಗೆ ಕನಿಷ್ಠ 500 ಕೋಟಿ ಹಣ ಮೀಸಲಿಡುವಂತೆ ಒತ್ತಾಯಿಸಿದರು. ಸಿಎಂ ಅವರ ಕಾರ್ಯಕ್ಕೆ ಜಿಲ್ಲಾ ಮಠಾಧೀಶರ ಪರವಾಗಿ ಅಭಿನಂದನೆ ಸಲ್ಲಿಸಿದ ಶ್ರೀಗಳು, 2A ವರ್ಗದಲ್ಲಿ ಲಿಂಗಾಯತ ಸಮುದಾಯವನ್ನು ಸೇರ್ಪಡೆಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಬೇಕೆಂದು ಇದೇ ವೇಳೆ ಸಿಎಂಗೆ ಮನವಿ ಮಾಡಿದರು.
ಮರಾಠಾ ಅಭಿವೃದ್ಧಿ ಮಂಡಳಿ ಹಿಂಪಡೆಯಲಿ:
ಇದೇ ವೇಳೆ ಮಾತನಾಡಿದ ಶ್ರೀಗಳು, ಮರಾಠಾ ಅಭಿವೃದ್ಧಿ ನಿಗಮ ಮಂಡಳಿ ಕನ್ನಡದ ನೆಲದಲ್ಲಿ ಮಾಡುವುದು ಸೂಕ್ತವಲ್ಲ. ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ, ಮಂಡಳಿ ನಿರ್ಮಿಸಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಕರ್ನಾಟಕದಲ್ಲಿ ಮಂಡಳಿ ರಚನೆ ಸರಿಯಲ್ಲ, ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು ಎಂದು ಶ್ರೀಗಳು ಆಗ್ರಹಿಸಿದರು.