ಕಲಬುರಗಿ: ಶುಕ್ರವಾರ ರಾತ್ರಿ ಐದನೇ ದಿನದ ಗಣೇಶ ನಿಮಜ್ಜನ ನಗರದೆಲ್ಲೆಡೆ ಭಾರಿ ಸದ್ದು ಮಾಡಿತು. ಇನ್ನೂ ಯುವಕ-ಯುವತಿಯರು ಡಿಜೆ ಹಾಡುಗಳಿಗೆ ಕುಳಿದು ಕುಪ್ಪಳಿಸಿದರು.
ಗಣಪತಿ ಬಪ್ಪ ಮೋರಯಾ, ಮಂಗಳ ಮೂರ್ತಿ ಮೋರಯಾ ಎಂಬ ಘೋಷಣೆಗಳು ರಾರಾಜಿಸುತ್ತಿದ್ದವು. ಯುವ ಸಮೂಹದ ಉತ್ಸಾಹ, ಹುಮ್ಮಸ್ಸು ಹೆಚ್ಚಾಗುತ್ತಲೆ ಇತ್ತು. ನಗರದ ಅಪ್ಪಾ ಕೆರೆಯಲ್ಲಿ ಗಣೇಶ ನಿಮಜ್ಜನೆಗೆ ಮಹಾನಗರ ಪಾಲಿಕೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೂಡ ಕಲ್ಪಿಸಲಾಗಿತ್ತು.
ಬಹುತೇಕ ಗಣಪತಿಗಳನ್ನು ಐದನೇ ದಿನದ ನಿಮಜ್ಜನ ಮಾಡಿ, ವಿನಾಯಕನಿಗೆ ಭಕ್ತಿಯಿಂದ ವಿದಾಯ ಹೇಳಿದರು.