ಕಲಬುರಗಿ: ಲಾಕ್‌ಡೌನ್‌ನಿಂದಾಗಿ ಹೊಟೇಲ್, ಅಂಗಡಿಗಳು ಸಂಪೂರ್ಣ ಬಂದ್ ಇರುವ ಕಾರಣದಿಂದ ಬೆಳಗ್ಗೆಯಿಂದ ತಿನ್ನಲು ತಿಂಡಿ ಸಿಗದೆ ಖಾಲಿ ಹೊಟ್ಟೆಯಲ್ಲಿ ಭಿಕ್ಷುಕರು ಪರದಾಡುತ್ತಿರುವ ದೃಶ್ಯ ಕಲಬುರಗಿಯ ರೈಲ್ವೆ ಸ್ಟೇಷನ್ ಬಳಿ ಕಂಡುಬಂದಿದೆ.
ಮನೆ-ಮಠವಿಲ್ಲದೆ ಬಸ್ ಅಥವಾ ರೈಲ್ವೆ ನಿಲ್ದಾಣಗಳನ್ನೇ ಅವಲಂಬಿಸಿ, ಭಿಕ್ಷಾಟನೆ ಮಾಡಿ ಬಂದ ಹಣದಲ್ಲಿ ರಸ್ತೆ ಬದಿಯ ಪೆಟ್ಟಿಗೆ ಅಂಗಡಿಯೋ ಅಥವಾ ಹೋಟೆಲ್‌ಗಳಲ್ಲೋ ಇವರು ತಿಂಡಿ ತಿನ್ನುತ್ತಿದ್ದರು. ಆದರೆ ಇಂದು ಆಹಾರ ಸಿಗದೆ ತೊಂದರೆಗೆ ಸಿಲುಕಿದ್ದಾರೆ. ಹಲವು ದಿನಗಳಿಂದ ಇವರು ಇಲ್ಲಿನ ಬಸ್ ಹಾಗೂ ರೈಲ್ವೆ ನಿಲ್ದಾಣದಲ್ಲೇ ವಾಸವಿರುತ್ತಿದ್ದರು.