ETV Bharat / state

ಲಾಕ್​ಡೌನ್​ ಹೊಡೆತ: ಬೆಳೆದ ಕಲ್ಲಂಗಡಿ ಮಣ್ಣುಪಾಲು ಮಾಡಿದ ರೈತ!

author img

By

Published : May 30, 2021, 10:16 PM IST

3 ಲಕ್ಷ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ನಾಶವಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಹ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ದೊರೆತಿಲ್ಲ. ಇದರಿಂದ ತೀವ್ರ ನಷ್ಟ ಎದುರಿಸುತ್ತಿದ್ದೇನೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಕಲ್ಲಂಗಡಿ ಬೆಳೆದ ರೈತ ರಾಮಲಿಂಗಯ್ಯ ಕಲಾಲ ತಿಳಿಸಿದ್ದಾರೆ.

lock-down-effect-farmer-destroyed-watermelon-in-sedam
ಬೆಳೆದ ಕಲ್ಲಂಗಡಿ ಮಣ್ಣುಪಾಲು ಮಾಡಿದ ರೈತ

ಸೇಡಂ: ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅನಿವಾರ್ಯವಾಗಿ ಲಾಕ್​ಡೌನ್​ ಮೊರೆ ಹೋಗಿದೆ. ಇದು ಒಂದೆಡೆ ಸೋಂಕು ತಡೆಗೆ ವರದಾನವಾದರೆ, ಮತ್ತೊಂದೆಡೆ ಬಡವರು, ನಿರ್ಗತಿಕರ ಪಾಲಿಗೆ ಅಕ್ಷರಶಃ ನರಕದಂತಾಗಿದೆ. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ತಾಲೂಕಿನ ದುಗನೂರ ಗ್ರಾಮದ ರೈತನೋರ್ವ ಲಕ್ಷಾಂತರ ರೂಪಾಯಿ ಸುರಿದು ಬೆಳೆದ ಕಲ್ಲಂಗಡಿ ಬೆಳೆಯನ್ನು ನಾಶಪಡಿಸಿದ್ದಾನೆ.

ತಾಲೂಕಿನಾದ್ಯಂತ ಸಂಪೂರ್ಣ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಮಾರುಕಟ್ಟೆ ಬಂದ್ ಮಾಡಲಾಗಿದ್ದು, ಪರಿಣಾಮ ವ್ಯಾಪಾರಕ್ಕೂ ಅವಕಾಶವಿಲ್ಲ. ಇತ್ತ ಸರ್ಕಾರದ ನೆರವೂ ಇಲ್ಲ. ಇದರಿಂದ ರೈತ ತನ್ನ ಜೀವನೋಪಾಯಕ್ಕಾಗಿ ಬೆಳೆದಿದ್ದ ಕಲ್ಲಂಗಡಿಯನ್ನು ಮಣ್ಣು ಪಾಲು ಮಾಡಿದ್ದಾನೆ.

ಬೆಳೆದ ಕಲ್ಲಂಗಡಿಯನ್ನು ಟ್ರ್ಯಾಕ್ಟರ್​ ಮೂಲಕ ನಾಶ ಮಾಡಿದ ರೈತ

ದುಗನೂರ ಗ್ರಾಮದ ರೈತ ರಾಮಲಿಂಗಯ್ಯ ಕಲಾಲ ತಮ್ಮ 4 ಎಕರೆ ಜಮೀನಿನಲ್ಲಿ 3 ಲಕ್ಷ ಬಂಡವಾಳ ಹಾಕಿ ಕಲ್ಲಂಗಡಿ ಬೆಳೆದಿದ್ದರು. ಇನ್ನೇನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಲಕ್ಷಾಂತರ ರೂಪಾಯಿ ಹಣ ಕೈ ಸೇರುತ್ತದೆ ಎನ್ನುವಾಗಲೇ ಲಾಕ್​ಡೌನ್​ ಜಾರಿ ಮಾಡಲಾಯಿತು. ಇದರಿಂದ ಖರೀದಿದಾರರಿಲ್ಲದೆ ಹೊಲದಲ್ಲಿಯೇ ಕಲ್ಲಂಗಡಿ ಕೊಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಲ್ಪ ಸ್ವಲ್ಪ ಮಾರಾಟ ಮಾಡಿದ್ದಾರೆ. ಆದರೆ ಯೋಜಿತ ಮಟ್ಟದಲ್ಲಿ ಮಾರಾಟಕ್ಕೆ ವಿಫಲವಾಗಿ, ಬೇಸತ್ತ ರೈತ ಟ್ರಾಕ್ಟರ್​ನಿಂದ ಬೆಳೆ ನಾಶ ಮಾಡಿದ್ದಾರೆ.

3 ಲಕ್ಷ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ನಾಶವಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಹ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅವಕಾಶ ದೊರೆತಿಲ್ಲ. ಇದರಿಂದ ತೀವ್ರ ನಷ್ಟ ಎದುರಿಸುತ್ತಿದ್ದೇನೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಕಲ್ಲಂಗಡಿ ಬೆಳೆದ ರೈತ ರಾಮಲಿಂಗಯ್ಯ ಕಲಾಲ ತಿಳಿಸಿದ್ದಾರೆ.

ಓದಿ: ಸಮ್ಮತಿಯ ಸೆಕ್ಸ್​: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಗೆ ಎಸ್ಐಟಿಯಿಂದ ಸಿಗುತ್ತಾ ಕ್ಲೀನ್ ಚಿಟ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.