ಸೇಡಂ: ಕೊರೊನಾ ಹಿನ್ನೆಲೆಯಲ್ಲಿ ಕಂಟೈನ್‌ಮೆಂಟ್ ಝೋನ್ ಎಂದು ಪರಿಗಣಿಸಿರುವ ಏರಿಯಾದಲ್ಲಿ ಕಸದ ರಾಶಿಯೇ ಕಂಡುಬರುತ್ತಿದ್ದು, ಪುರಸಭೆಯ ನಿರ್ಲಕ್ಷ್ಯಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯ ರಸ್ತೆಯಲ್ಲಿ ಅನೇಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಸ್ತೆ ಬಂದ್ ಮಾಡಿ ಸೀಲ್ಡೌನ್ ಮಾಡಲಾಗಿತ್ತು.
ಕಸ ಕೊಳೆತು ನಾರುತ್ತಿರುವುದರಿಂದ ಜನರಲ್ಲಿ ರೋಗ ಭೀತಿ ಶುರುವಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಅನ್ನೋದು ನಿವಾಸಿಗಳ ಆಗ್ರಹ.