ETV Bharat / state

ಕೋವಿಡ್ ಭೀತಿ: ಪಂಡರಾಪುರ‌ದ 'ಕಾರ್ತಿಕ ವರಿ' ಕಾರ್ಯಕ್ರಮಕ್ಕೆ ತೆರಳದಂತೆ ನಿರ್ಬಂಧಿಸಿ ಡಿಸಿ ಆದೇಶ

author img

By

Published : Nov 23, 2020, 8:00 PM IST

Updated : Nov 23, 2020, 8:48 PM IST

ಕೋವಿಡ್-19 ಹರಡುವ ಭೀತಿ ಹಿನ್ನೆಲೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸುಪ್ರಸಿದ್ಧ ಪಂಡರಾಪುರ‌ದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಕ್ತಾದಿಗಳು ತೆರಳದಂತೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ಯಾ ಆದೇಶಿಸಿದ್ದಾರೆ.

Vivi Jotsya
ವಿವಿ ಜೋತ್ಸ್ಯಾ

ಕಲಬುರಗಿ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಸುಪ್ರಸಿದ್ಧ ಪಂಡರಾಪುರ‌ದಲ್ಲಿ ನಡೆಯುವ 'ಕಾರ್ತಿಕ ವರಿ' ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಕ್ತಾದಿಗಳು ತೆರಳದಂತೆ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ಯಾ ಸೂಚಿಸಿದ್ದಾರೆ.

District Collector Vivi Jotsya ordered
ಜಿಲ್ಲಾಧಿಕಾರಿ ವಿವಿ ಜೋತ್ಸ್ಯಾ ಆದೇಶ
ಕೋವಿಡ್-19 ಹರಡುವ ಭೀತಿ ಹಿನ್ನೆಲೆ ಈ ಬಾರಿ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ತೆರಳದಂತೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದೆ. ಪ್ರತಿ ವರ್ಷ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಸುಕ್ಷೇತ್ರ ಪಂಡರಾಪುರದ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು, ಮಹಾರಾಷ್ಟ್ರ ಸರ್ಕಾರ ನವೆಂಬರ್​ 24ರಿಂದ 26ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಮುಂಬೈ ಪೊಲೀಸ್ ಆ್ಯಕ್ಟ್ 37ರ ಅನ್ವಯ ಐದಕ್ಕಿಂತ ಹೆಚ್ಚು ಜನ ಸೇರದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಆದ ಕಾರಣ ಜಿಲ್ಲೆಯಿಂದ ಪಂಡರಾಪುರ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಪಲ್ಲಕ್ಕಿ, ನಂದಿಕೋಲು, ಪಾದಯಾತ್ರೆ ಮೂಲಕ ತೆರಳುತ್ತಿದ್ದವರು ಈ ಬಾರಿ ಕಾರ್ಯಕ್ರಮ ರದ್ದಾದ ಹಿನ್ನೆಲೆ ಪಂಡರಾಪುರಕ್ಕೆ ಹೋಗದಂತೆ ಸೂಚನೆ ನೀಡಿದ್ದಾರೆ. ಕಾರ್ತಿಕ ವರಿ ಹಿನ್ನೆಲೆ ಕರ್ನಾಟಕ ಸೇರಿದಂತೆ ಅನ್ಯ ರಾಜ್ಯಗಳಿಂದ ಪ್ರತಿ ವರ್ಷ ಐದು ಲಕ್ಷಕ್ಕೂ ಅಧಿಕ ಜನರು ಸೇರುತ್ತಾರೆ.

Last Updated : Nov 23, 2020, 8:48 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.