ETV Bharat / state

ಕಲಬುರಗಿಯಲ್ಲಿ 263 ವಾಹನಗಳು ಜಪ್ತಿ - ಕಲಬುರಗಿ

ಅನಗತ್ಯವಾಗಿ ಸಂಚರಿಸುತ್ತಿದ್ದ 263 ವಾಹನಗಳನ್ನು ಕಲಬುರಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Kalburgi
ಕಲಬುರಗಿ ಜಿಲ್ಲೆಯಲ್ಲಿ 263 ವಾಹನಗಳ ಜಪ್ತಿ
author img

By

Published : May 12, 2021, 7:09 AM IST

ಕಲಬುರಗಿ: ಕೊರೊನಾ ಲಾಕ್‌ಡೌನ್‌ನ 2ನೇ ದಿನ ಪೊಲೀಸರು ಲಾಠಿ ಹಿಡಿಯುವ ಬದಲಾಗಿ ವಾಹನಗಳನ್ನು ಸೀಜ್ ಮಾಡುವ ಮೂಲಕ ಅನಗತ್ಯವಾಗಿ ರಸ್ತೆಗಿಳಿದ ಸವಾರರಿಗೆ ಬಿಸಿ ಮುಟ್ಟಿಸಿದರು.

ಮಂಗಳವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ 263 ವಾಹನಗಳನ್ನು ಸೀಜ್ ಮಾಡಲಾಗಿದೆ. ಇವುಗಳಲ್ಲಿ 198 ದ್ವಿಚಕ್ರ ವಾಹನ, 33 ತ್ರಿಚಕ್ರ ವಾಹನ ಹಾಗೂ 32 ನಾಲ್ಕು ಚಕ್ರದ ವಾಹನಗಳು ಸೇರಿವೆ. ಅಲ್ಲದೇ ಕೆಇಡಿ ಕಾಯಿದೆ ಅನ್ವಯ ಸವಾರರ ಮೇಲೆ 8 ಪ್ರಕರಣಗಳನ್ನು ದಾಖಲಿಸಲಾಗಿದೆ.

ಜಪ್ತಿ ಮಾಡಿದ ವಾಹನಗಳನ್ನು ಡಿಎಆರ್ ಪೊಲೀಸ್ ಪರೇಡ್ ಮೈದಾನದ ಹೆಲಿಪ್ಯಾಡ್ ಗ್ರೌಂಡ್​​ನಲ್ಲಿ ಇಡಲಾಗಿದೆ. ಜನತಾ ಕರ್ಫ್ಯೂ ಆರಂಭದಿಂದ ವಾಹನಗಳನ್ನು ಸೀಜ್ ಮಾಡಲಾಗುತಿದ್ದು, ಮೈದಾನದ ತುಂಬೆಲ್ಲಾ ವಾಹನಗಳೇ ಕಂಡು ಬರುತ್ತಿವೆ. ಈ ವಾಹನಗಳು ಮೇ. 24ರ ಲಾಕ್‌ಡೌನ್ ಮುಕ್ತಾಯದ ಬಳಿಕ ವಾರಸುದಾರರ ಬಳಕೆಗೆ ಸಿಗಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.