ETV Bharat / state

ಕಲಬುರಗಿ ಪಾಲಿಕೆ ಮೇಯರ್ ಚುನಾವಣೆ: ಐವರು ಎಂಎಲ್‌ಸಿಗಳಿಗೆ ಮತ ಚಲಾಯಿಸಲು ಹೈಕೋರ್ಟ್ ಗ್ರೀನ್ ಸಿಗ್ನಲ್

2021 ರಲ್ಲಿ ಕಲಬುರಗಿ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಬಹುಮತಕ್ಕಾಗಿ ಬಿಜೆಪಿ ಐವರು ಎಂಎಲ್​ಸಿಗಳನ್ನು ಕಲಬುರಗಿ ಮತದಾರರ ಪಟ್ಟಿಗೆ ಸೇರಿಸಿತ್ತು. ಅದನ್ನು ಪ್ರಶ್ನಿಸಿ ಕಾಂಗ್ರೆಸ್​ ಹೈಕೋರ್ಟ್​ ಮೆಟ್ಟಿಲೇರಿತ್ತು.

author img

By

Published : Jan 14, 2023, 2:04 PM IST

Updated : Jan 14, 2023, 3:51 PM IST

Karnataka High Court Gulbarga Bench
ಕರ್ನಾಟಕ ಉಚ್ಛ ನ್ಯಾಯಾಲಯ ಗುಲ್ಬರ್ಗಾ ಪೀಠ
ಬಿಜೆಪಿ ಪರ ಹೈಕೋರ್ಟ್ ವಕೀಲ ಗೌರೀಶಂಕರ ಕಾಶಂಪುರ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ‌ ಹಿನ್ನಡೆಯಾಗಿದೆ. ನೂತನವಾಗಿ ಸೇರ್ಪಡೆಯಾದ ಬಿಜೆಪಿಯ ಐವರು ವಿಧಾನ ಪರಿಷತ್ ಸದಸ್ಯರಿಗೂ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ನೀಡಿ ಕಲಬುರಗಿ ಹೈಕೋರ್ಟ್ ವಿಭಾಗೀಯ ದ್ವಿಸದಸ್ಯ ಪೀಠ ತೀರ್ಪು ನೀಡಿದೆ. ಎಂಎಲ್‌ಸಿ ಲಕ್ಷ್ಮಣ ಸೌದಿ, ತುಳಸಿ ಮುನಿರಾಜಗೌಡ, ಭಾರತಿ ಶೆಟ್ಟಿ, ಬೀದರ್ ಎಂಎಲ್‌ಸಿ ರಘುನಾಥ ಮಲ್ಕಾಪುರೆ ಹಾಗೂ ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಲೇಯರ್ ಸಿಂಗ್ ಅವರು ಮತ ಚಲಾಯಿಸಲು ಅರ್ಹರು ಎಂದು ಹೈಕೋರ್ಟ್ ಗ್ರಿನ್ ಸಿಗ್ನಲ್ ನೀಡಿದೆ.

ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಮೇಯರ್ ಚುನಾವಣೆಗೆ ಕಂಟಕ ಎದುರಾಗಿತ್ತು. ನಂತರದ ದಿನಗಳಲ್ಲಿ ಬಿಜೆಪಿಯ ಐವರು ಎಂಎಲ್‌ಸಿಗಳ ಹೆಸರು ಕಲಬುರಗಿ ಮತದಾರರ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಮೇಯರ್ ಚುನಾವಣೆಗೆ ಪೂರಕವಾಗಲಿ ಎನ್ನುವ ಕಾರಣಕ್ಕೆ ಹೊರ ಜಿಲ್ಲೆಯ ಎಂಎಲ್‌ಸಿಗಳ ಹೆಸರು ಇಲ್ಲಿನ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆಕ್ಷೇಪಿಸಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಇಂದರೇಶ್ ಅವರ ನೇತೃತ್ವದ ಏಕಸದಸ್ಯ ಪೀಠ, ಕಾಂಗ್ರೆಸ್ ಅರ್ಜಿ ಪುರಸ್ಕರಿಸಿ ಹೊಸದಾಗಿ ಸೇರ್ಪಡೆಯಾದ ಐವರ ಹೆಸರು ಕೈಬಿಟ್ಟು ಹಳೆಯ ಮತದಾರರ ಪಟ್ಟಿ ಅನ್ವಯ ಮೇಯರ್ ಚುನಾವಣೆ ನಡೆಸಲು ಸೂಚಿಸಿತ್ತು. ಆದರೆ ಬಿಜೆಪಿ ಎಂಎಲ್​ಸಿಗಳು ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕಲಬುರಗಿ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ಅನಿಲ್ ಬಿ. ಕಟ್ಟಿ ಅವರಿದ್ದ ದ್ವಿಸದಸ್ಯ ಪೀಠ ಶುಕ್ರವಾರ ಬಿಜೆಪಿ ಅರ್ಜಿ ಪುರಸ್ಕರಿಸಿದ್ದು, ಐವರು ಪರಿಷತ್ ಸದಸ್ಯರ ಮತದಾನಕ್ಕೆ ಗ್ರೀನ್ ಸಿಗ್ನಲ್‌ ನೀಡಿ ಆದೇಶ ನೀಡಿದೆ.

ಇದನ್ನೂ ಓದಿ: ಕಲಬುರಗಿ ಮೇಯರ್-ಉಪಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್.. ಕಿಂಗ್ ಮೇಕರ್ ಜೆಡಿಎಸ್​ ಬೆಂಬಲ ಯಾರಿಗೆ? ​​

ಅಲ್ಲದೆ ಸರ್ಕಾರ ಈ ಮುಂಚೆ ನಿಗದಿ ಮಾಡಿದ್ದ ಮೇಯರ್ ಸ್ಥಾನಕ್ಕೆ ಎಸ್ಸಿ ಪುರುಷ ಮಿಸಲು ಆದೇಶ ಕೂಡಾ ಹೈಕೋರ್ಟ್ ಎತ್ತಿಹಿಡಿದಿದೆ. ಕಳೆದ 2022 ರ ಫೆಬ್ರವರಿ 22 ರಂದು ಪಾಲಿಕೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಆದರೆ ಚುನಾವಣೆ ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಮುಂದೂಡಲಾಗಿತ್ತು.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 55 ವಾರ್ಡಗಳಿದ್ದು, ಸೆ.3ರಂದು ಚುನಾವಣೆ ನಡೆದಿತ್ತು. ಸೆ.6 ರಂದು ಫಲಿತಾಂಶ ಬಂದಾಗ ಕಾಂಗ್ರೆಸ್ 27, ಬಿಜೆಪಿ 23 ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಗೆದ್ದಿದ್ದವು. ಒಬ್ಬ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಚುನಾಯಿತ 55 ಸದಸ್ಯರು, ಇಬ್ಬರು ಸಂಸದರು, ಮೂವರು ಶಾಸಕರು, ಇಬ್ಬರು ವಿಧಾನ ಪರಿಷತ್‌ ಸದಸ್ಯರು ಸೇರಿದಂತೆ ಒಟ್ಟು ಬಲಾಬಲ 62 ಆಗಲಿದೆ. ಹೀಗಾಗಿ ಮೇಯರ್‌ ಗದ್ದುಗೆ ಏರಬೇಕಾದರೆ 31 ಮ್ಯಾಜಿಕ್ ಸಂಖ್ಯೆ ಗಡಿ ದಾಟಬೇಕು. ಆದರೆ ಯಾವುದೇ ಪಕ್ಷ ಇಲ್ಲಿ ಸ್ಪಷ್ಟ ಬಹುಮತ ಪಡೆದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಮೊದಲ ಎರಡು ಸ್ಥಾನಗಳಲ್ಲಿದ್ದರೂ ಅಧಿಕಾರಕ್ಕೆ ಬರಲು ಜೆಡಿಎಸ್ ನೆರವು ಅನಿವಾರ್ಯವಾಗಿತ್ತು. ಆದರೆ ಕಿಂಗ್ ಮೇಕರ್ ಸ್ಥಾನದಲ್ಲಿರುವ ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದೆ. ಹೀಗಾಗಿ ಎರಡು ಪಕ್ಷದವರು ಜೆಡಿಎಸ್​ನಿಂದ ದೂರ ಸರಿದಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ 27 ಸದಸ್ಯರು ಆಯ್ಕೆ ಆಗಿದ್ದು, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕಿ ಕನೀಜ್‌ ಫಾತಿಮಾ ಮತದಾನದ ಹಕ್ಕು ಹೊಂದಿದ್ದು, 'ಕೈ' ಸಂಖ್ಯಾ ಬಲ 29 ಆಗಲಿದೆ. ಮೇಯರ್‌ ಸ್ಥಾನ ಪಡೆಯಲು ಇವರಿಗೆ ಮೂವರು ಸದಸ್ಯರ ಅಗತ್ಯ ಇದೆ. ಕಮಲ ಪಕ್ಷದಿಂದ ಆಯ್ಕೆಯಾಗಿರುವ 23 ಸದಸ್ಯರಿದ್ದು, ಲೋಕಸಭಾ ಸದಸ್ಯ ಡಾ. ಉಮೇಶ್‌ ಜಾಧವ್‌, ಇಬ್ಬರು ಶಾಸಕರಾದ ಅಪ್ಪುಗೌಡ, ಬಸವರಾಜ ಮತ್ತಿಮೂಡ್‌, ಇಬ್ಬರು ಎಂಎಲ್ಸಿಗಳಾದ ಬಿ. ಜಿ. ಪಾಟೀಲ್‌, ಶಶಿಲ್‌ ನಮೋಶಿ ಮತದಾನದ ಹಕ್ಕು ಹೊಂದಿದ್ದಾರೆ. ಆ ಮೂಲಕ ಸಂಖ್ಯಾ ಬಲ 28 ಆಗಲಿದೆ. ಅಧಿಕಾರ ಹಿಡಿಯಲು ಇವರಿಗೆ ನಾಲ್ಕು ಸದಸ್ಯರು ಬೇಕು.

ಇದನ್ನೂ ಓದಿ: ಕಲಬುರಗಿ ಪಾಲಿಕೆಗೆ ಇಲ್ಲ ಮೇಯರ್ .. ಅಧಿಕಾರಿಗಳು ಆಡಿದ್ದೇ ಆಟ.. ಸಮಸ್ಯೆ ಪರಿಹಾಕ್ಕೆ ಕಾಂಗ್ರೆಸ್ ಆಗ್ರಹ..

ಈ ನಡುವೆ ಪಾಲಿಕೆಯ ವಾರ್ಡ್ ಸಂಖ್ಯೆ 24ರ ಬಿಜೆಪಿ ಸದಸ್ಯೆ ಪ್ರಿಯಾಂಕಾ ಅಂಬ್ರೇಶ ಅವರ ಆಯ್ಕೆಯನ್ನು ಜಿಲ್ಲಾ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ. ಚುನಾವಣೆ ಸಂದರ್ಭದಲ್ಲಿ ಪ್ರಿಯಾಂಕಾ ಅವರ ವಯಸ್ಸು 20 ಇದ್ದರೂ 21 ಎಂದು ಚುನಾವಣಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆಂದು ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಸೈಯದಾ ನೂರ್ ಫಾತಿಮಾ ಜಿಲ್ಲಾ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಮೂರನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಡಿ.ಖರೋಷಿ, ಪ್ರೀಯಾಂಕಾ ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೈಯದಾ ನೂರದ ಫಾತಿಮಾ ಅವರು ವಿಜಯಶಾಲಿ ಎಂದು ಘೋಷಿಸುವಂತೆ ನ್ಯಾಯಾಲಯ ಸೂಚಿಸಿದೆ.

ಅದರಂತೆ ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 36ರ ಪಕ್ಷೇತರ ಸದಸ್ಯ ಶಂಭುಲಿಂಗ ಬಳಬಟ್ಟಿ ಆಯ್ಕೆಯನ್ನು ಅಸಿಂಧುಗೊಳಿಸಿ ಕಲಬುರಗಿ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ. ನಾಮಪತ್ರ ಸಲ್ಲಿಸುವಾಗ ಆಸ್ತಿ, ವಿದ್ಯಾರ್ಹತೆ ಸೇರಿ ಹಲವು ವಿಷಯಗಳ ಕುರಿತು ಮಾಹಿತಿ ನೀಡಿರಲಿಲ್ಲ ಎಂಬ ಆರೋಪ ಇತ್ತು. ಬಳಬಟ್ಟಿ ಅವರ ಆಯ್ಕೆ ಪ್ರಶ್ನಿಸಿ ಪಾಲಿಕೆಯ ಮಾಜಿ ಸದಸ್ಯೆ ಆರತಿ ತಿವಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಳ್ಳು ಅಫಿಡವಿಟ್ ಸಲ್ಲಿಸಿದ್ದರಿಂದ ಆಯ್ಕೆ ಅಸಿಂಧು ಎಂದು ಆದೇಶಿಸಲಾಗಿದೆ. ಪಕ್ಷೇತರ ಅಭ್ಯರ್ಥಿಯಾದರೂ ಶಂಬುಲಿಂಗ ಬಳಬಟ್ಟಿ ನಂತರದ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಕಾರಣಕ್ಕೆ ಮೂರು ಪಕ್ಷಗಳ ಜಿದ್ದಾಜಿದ್ದಿನಲ್ಲಿ ತೊಡಗಿದ್ದು, ಚುನಾವಣೆ ಮುಗಿದು 16 ತಿಂಗಳು ಕಳೆದರು ಪಾಲಿಕೆಗೆ ಮೇಯರ್ ಗಾದಿ ಅನಾಥವಾಗಿದೆ. ಸದ್ಯ ಬಿಜೆಪಿ ಪರವಾಗಿ ನ್ಯಾಯಾಲಯ ಆದೇಶ ನೀಡಿದೆ. ಆದರೆ ಕಾಂಗ್ರೆಸ್‌ನವರು ಮತ್ತೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ: ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದ ವಿಭಾಗೀಯ ಪೀಠ

Last Updated : Jan 14, 2023, 3:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.