ಕಲಬುರಗಿ : ಹುಟ್ಟಿದ ದಿನದಂದು ನಗರದ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹ ದಾನ ಮಾಡುವ ಮೂಲಕ ದಂಪತಿ ಗಮನ ಸೆಳೆದಿದ್ದಾರೆ.
ಬಿಜೆಪಿಯ ಮಾಧ್ಯಮ ವಕ್ತಾರ ಅರುಣ್ ಕುಲಕರ್ಣಿ ಮತ್ತು ಪತ್ನಿ ದೇಹದಾನ ಮಾಡಿದವರು. ಇಂದು ಅರುಣ್ ಕುಲಕರ್ಣಿ ಅವರ ಹುಟ್ಟಿದ ದಿನವಾಗಿದ್ದು, ಇಂದೇ ದೇಹದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಇವರೊಂದಿಗೆ ಪತ್ನಿ ವಿಜಯಲಕ್ಷ್ಮಿ ಕೂಡ ದೇಹದಾನ ಮಾಡಿದ್ದಾರೆ.
ಓದಿ : ಪೇಜಾವರ ಶ್ರೀ ಅಗಲಿ ಇಂದಿಗೆ ಒಂದು ವರ್ಷ: ಮಂಗಳೂರಿನಲ್ಲಿ 'ಪೇಜಾವರ ವಿಶ್ವೇಶತೀರ್ಥ ನಮನ'
ಅರುಣ್ ಕುಲಕರ್ಣಿ, ವಿಜಯಲಕ್ಷ್ಮಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಮಗಳು ವೈದ್ಯಕೀಯ ಇಂಟರ್ನ್ಶಿಪ್ ಮಾಡ್ತಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅರುಣ್ ಕುಲಕರ್ಣಿ ದಂಪತಿ ದೇಹ ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಅಟಾನಮಿ ವಿಭಾಗದ ಮುಖ್ಯಸ್ಥರಾದ ಡಾ. ವೀರಭದ್ರ ನಂದ್ಯಾಳ ಉಪಸ್ಥಿಯಲ್ಲಿ ದಂಪತಿ ಮರಣೋತ್ತರ ದೇಹದಾನ ಇಚ್ಚಾ ಪತ್ರಕ್ಕೆ ಸಹಿ ಹಾಕಿದ್ದಾರೆ.