ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಒಂದೇ ದಿನ ಮತ್ತೆ ಆರು ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 254ಕ್ಕೆ ಏರಿಕೆ ಆಗಿದೆ.
ಜೇವರ್ಗಿ ತಾಲೂಕು ನೆಲೋಗಿ ಗ್ರಾಮದ 50 ವರ್ಷದ ಪುರುಷ, ಕಲಬುರಗಿಯ ಕೆಎಚ್‌ಬಿ ಕಾಲೋನಿ 68 ವರ್ಷದ ವೃದ್ಧೆ, ಅತ್ತರ್ ಕಂಪೌಂಡ್ ನಿವಾಸಿ 60 ವರ್ಷದ ವೃದ್ಧ, ಭವಾನಿ ನಗರದ 68 ವರ್ಷದ ವೃದ್ಧ, ಶಹಬಾದ್ ಪಟ್ಟಣದ ಬಸವೇಶ್ವರ ನಗರದ 59 ವರ್ಷದ ಪುರುಷ, ಹಾಗೂ ಕಮಲಾಪುರ ತಾಲೂಕಿನ ರಾಜನಾಳ ಗ್ರಾಮದ 45 ವರ್ಷದ ಪುರುಷ ಕೊರೊನಾ ಸೋಂಕಿಗೆ ಬಲಿಯಾಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
ಶುಕ್ರವಾರ ಜಿಲ್ಲೆಯಲ್ಲಿ 179 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 15,333ಕ್ಕೆ ಏರಿಕೆಯಾಗಿದೆ. ಶುಕ್ರವಾರ 202 ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ ಇದೀಗ 12,320 ಕ್ಕೆ ಏರಿಕೆಯಾಗಿದೆ. ಸದ್ಯ 2,759 ಸಕ್ರಿಯ ಪ್ರಕರಣಗಳಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಕೋವಿಡ್ನಿಂದ ಆರು ಸಾವು, 179 ಹೊಸ ಕೇಸ್, ಒಂದೇ ದಿನ ಕಲಬುರಗಿಯಲ್ಲಿ 202 ಡಿಸ್ಚಾರ್ಜ್
ಮಹಾಮಾರಿ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಒಂದೇ ದಿನ ಆರು ಮಂದಿ ಸಾವನ್ನಪ್ಪಿದ್ದು, ಹೊಸದಾಗಿ 179 ಕೇಸ್ ಪತ್ತೆಯಾಗಿವೆ.