ಕಲಬುರಗಿ: ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಆಯ್ಕೆ ಬಹುತೇಕ ಖಚಿತವಾಗಿರುವ ಹಿನ್ನೆಲೆ ಕಲಬುರಗಿಯಿಂದ ದೆಹಲಿಯತ್ತ ಕಾಂಗ್ರೆಸ್ ಮುಖಂಡರು ದೌಡಾಯಿಸಿದ್ದಾರೆ.
ಶಾಸಕ ಪ್ರೀಯಾಂಕ್ ಖರ್ಗೆ, ಎಂ.ವೈ ಪಾಟೀಲ್, ಮಾಜಿ ಶಾಸಕ ಶರಣಪ್ರಕಾಶ ಪಾಟೀಲ್ ಸೇಡಂ, ಅಲ್ಲಮಪ್ರಭು ಪಾಟೀಲ್ ಸೇರಿ ಹಲವು ಕೈ ಮುಖಂಡರು ದೆಹಲಿಗೆ ತೆರಳಿದ್ದಾರೆ. ಇಂದು ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರಬೀಳಲಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಫೈಟ್ ನಡೆದಿದೆ.
ಗಾಂಧಿ ಕುಟುಂಬ ಖರ್ಗೆ ಬೆನ್ನಿಗೆ ನಿಂತಿರುವ ಹಿನ್ನೆಲೆ ಖರ್ಗೆ ಆಯ್ಕೆ ಬಹುತೇಕ ಖಚಿತವಾಗಿದೆ. ಫಲಿತಾಂಶ ಘೋಷಣೆಯೊಂದೇ ಬಾಕಿ ಉಳಿದಿದೆ. ಶುಭಕೋರಲು ಕಲಬುರಗಿಯ ಕೈ ಟೀಂ ದೆಹಲಿಗೆ ತೆರಳಿದೆ.

ಇದೇ ವೇಳೆ ಖರ್ಗೆ ಅವರ ಕೆಲ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಕಲಬುರಗಿಯ ಶರಣಬಸವೇಶ್ವರ ದೇವರಿಗೆ, ಖಾಜಾ ಬಂದೆ ನವಾಜ್ ದರ್ಗಾ ಸೇರಿ ಹಲವಡೆ ಪೂಜೆ ಸಲ್ಲಿಸಿ ಅವರ ಗೆಲುವಿಗೆ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದಿಂದ ಡಾ ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಗೆಲುವಿಗೆ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಶಶಿ ತರೂರ್ vs ಮಲ್ಲಿಕಾರ್ಜುನ ಖರ್ಗೆ: ಫಲಿತಾಂಶಕ್ಕೆ ಕ್ಷಣಗಣನೆ, ಕಾಂಗ್ರೆಸ್ಗೆ ಇಂದು ನೂತನ ಸಾರಥಿ ಆಯ್ಕೆ