ಕಲಬುರಗಿ: ಕಂಪನಿಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಆಗಮಿಸಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮೃತಪಟ್ಟ ಘಟನೆ ಕಲಬುರಗಿಯ ಹೈಕೋರ್ಟ್ ಬಳಿಯ ಖಾಸಗಿ ಹೋಟೆಲ್ನಲ್ಲಿ ನಡೆದಿದೆ. ಯುನೈಟೆಡ್ ಕಿಂಗ್‌ಡಂನ ಲೀ ಜೀಮ್ಸ್ ಪ್ಯಾಲಿನ್ (53) ಮೃತ ವಿದೇಶಿ ಪ್ರಜೆ ಎಂದು ಗುರುತಿಸಲಾಗಿದೆ.
ದುಬೈ ಮುಲದ ಹೈಟ್ ರೈಡರ್ಸ್ ಇಡರ್ಸ್ಟ್ರೀಯಲ್ ಸ್ಪೇಶಲಿಸ್ಟ್ ಕಂಪನಿಯಲ್ಲಿ ಆಪರೇಷನ್ ಮ್ಯಾನೇಜರ್ ಅಂತ ಕೆಲಸ ಮಾಡುತ್ತಿದ್ದ ಲೀ ಜೀಮ್ಸ್ ಪ್ಯಾಲಿನ್, ತಮ್ಮ ಕಂಪನಿಯಲ್ಲಿನ ಖಾಲಿ ಹುದ್ದೆಗೆ ಇಂಟರ್ವ್ಯೂ ಮಾಡಲು ಅಕ್ಟೋಬರ್ 16 ರಂದು ರಾತ್ರಿ ಹೈದ್ರಾಬಾದ್ ಮೂಲಕ ಕಲಬುರಗಿಗೆ ಆಗಮಿಸಿದ್ದರು.
ಇವರೊಟ್ಟಿಗೆ ಹೈಟ್ ರೈಡರ್ಸ್ ಇಡರ್ಸ್ಟ್ರೀಯಲ್ ಸ್ಪೇಶಲಿಸ್ಟ್ ಕಂಪನಿಯ ಸೇಫ್ಟಿ ಮ್ಯಾನೇಜರ್ ಕೇರಳದ ಜೀಯಾದ್ ಮೈದನ್ ಹಾಗೂ ಮುಂಬೈನ್ ರದೀಶ ಕುಮಾರ್ ಆಗಮಿಸಿದ್ದರು. ಮೂವರು ಹೊಟೇಲ್ನಲ್ಲಿ ತಂಗಿದ್ದರು. ಮರುದಿನ ಕೆಲಸ ಮುಗಿಸಿ ರಾತ್ರಿ ಹತ್ತಿರದ ಬಾರ್ವೊಂದರಲ್ಲಿ ಮೂವರು ಸೇರಿ ಮದ್ಯ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಇಬ್ಬರು ತಮ್ಮ ಕೋಣೆಗಳಿಗೆ ಹೋಗಿದ್ದಾರೆ. ಆದರೆ ಲೀ ಜೀಮ್ಸ್ ಪ್ಯಾಲಿನ್ ಅಲ್ಲಿಯೇ ಕುಸಿದು ಬಿದ್ದು ಮುಖಕ್ಕೆ ಗಾಯ ಮಾಡಿಕೊಂಡಿದ್ದನು. ಅಲ್ಲಿನ ಸಿಬ್ಬಂದಿ ವ್ಹೀಲ್ ಚೇರ್ ಸಹಾಯದಿಂದ ಹೊಟೇಲ್ ರೂಮಿಗೆ ತಂದು ಬಿಟ್ಟಿದ್ದರು ಎಂದು ತಿಳಿದುಬಂದಿದೆ.
ಆದರೆ ಅ.19 ರಂದು ರೂಮ್ ಖಾಲಿ ಮಾಡುವ ಸಮಯಕ್ಕೆ ಸಹಪಾಠಿಗಳು ಕರೆಯಲು ಹೋದಾಗ ಲೀ ಜೀಮ್ಸ್ ಪ್ಯಾಲಿನ್ ಅಸ್ವಸ್ಥರಾಗಿರುವುದು ಗೊತ್ತಾಗಿದೆ. ತಕ್ಷಣ 108 ಆ್ಯಂಬುಲೆನ್ಸ್ಗೆ ಕರೆ ಮಾಡಲಾಗಿತ್ತು. ಬಳಿಕ ವೈದ್ಯರು ಲೀ ಜೀಮ್ಸ್ ಪ್ಯಾಲಿನ್ ಮೃತಪಟ್ಟಿರುವದನ್ನು ಖಚಿತಪಡಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮೃತದೇಹ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇಡಲಾಗಿದ್ದು, ರಾಯಭಾರಿ ಕಚೇರಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಪ್ರಕರಣ, ಪತ್ನಿ ಮೇಲೆ ಹಲ್ಲೆ 12 ವರ್ಷದ ಬಳಿಕ ಆರೋಪಿ ಬಂಧನ: ಪತ್ನಿ ಸೇರಿದಂತೆ ಅನೇಕರ ಮೇಲೆ ಹಲ್ಲೆಗೈದು ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಿಲ್ಲೆಯ ಮಹಾಗಾಂವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಶರಣಯ್ಯ ಮಠಪತಿ ಬಂಧಿತ ಆರೋಪಿ. ಈತ 2011ರಲ್ಲಿ ತನ್ನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಆಗ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ತಂದೆ–ತಾಯಿ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದರಿಂದ ಮತ್ತೊಂದು ಪ್ರಕರಣ ದಾಖಲು ಮಾಡಲಾಗಿತ್ತು. ಬಳಿಕವೂ ಪಕ್ಕದ ಮನೆಯವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ, ಆಗ ಮೂರನೇ ಪ್ರಕರಣ ದಾಖಲಾಗಿತ್ತು.
ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹುಡುಕಾಟ ನಡೆಸಿದ್ದರು. 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಶರಣಯ್ಯ ಓಡಾಡಿಕೊಂಡಿದ್ದನು. ಆರೋಪಿ ಶರಣಯ್ಯನ ಭಯಕ್ಕೆ ಪತ್ನಿ, ಮಕ್ಕಳು, ತಂದೆ, ತಾಯಿ ಕಲಬುರಗಿಯ ಕಾಕಡೆ ಚೌಕ್‌ನಲ್ಲಿ ಮನೆ ಮಾಡಿ ವಾಸಿಸುತ್ತಿದ್ದರು. ಇದು ಗೊತ್ತಾಗಿ ಶರಣಯ್ಯ ಬಂದಿದ್ದ, ಈತ ಬಂದಿರುವ ವಿಚಾರ ಗೊತ್ತಾಗಿ ಮಹಾಗಾಂವ ಪೊಲೀಸರು ದೌಡಾಯಿಸಿ ಬಂಧಿಸಿದ್ದಾರೆ.
ಇದನ್ನೂಓದಿ:ಚಾಕೊಲೆಟ್ ತರಲು ಹೋಗಿ ಬೈಕ್‌ನಿಂದ ಬಿದ್ದು ಗರ್ಭಿಣಿ ಸಾವು: ಶವದ ಬಳಿ ರಾತ್ರಿ ಕಳೆದ ಮಗ