ETV Bharat / state

ರೈಲಿನಲ್ಲಿ ನಡೆಯುವ ಅಪರಾಧ ನಿಯಂತ್ರಿಸಲು ಕಲಬುರಗಿ ಪೊಲೀಸರ ಹೊಸ ಪ್ಲಾನ್​ - ಅಪರಾಧ ನಿಯಂತ್ರಿಸಲು ಕಲಬುರಗಿ ಪೊಲೀಸ್​ ಹೊಸ ಪ್ಲಾನ್​

ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರಗಿ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಸಿಟಿಂಗ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದಾರೆ. ಅಪರಾಧ ಕೃತ್ಯಗಳು ನಡೆದಾಗ ಹೆಲ್ಪ್‌ಲೈನ್ ನಂಬರ್‌‌ಗೆ ಕರೆ ಮಾಡಿದಾಗ ತಕ್ಷಣ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.‌.

Kalaburagi railway police department distributed visiting card to Passengers
ರೈಲಿನಲ್ಲಿ ನಡೆಯುವ ಅಪರಾಧ ನಿಯಂತ್ರಿಸಲು ಕಲಬುರಗಿ ಪೊಲೀಸ್​ ಹೊಸ ಪ್ಲಾನ್​
author img

By

Published : Aug 1, 2021, 10:01 PM IST

ಕಲಬುರಗಿ : ರಾಜ್ಯದ ರೈಲಿನಲ್ಲಿ ನಡೆಯುವ ಅಪರಾಧ ತಗ್ಗಿಸಲು ಹಾಗೂ ಪ್ರಯಾಣಿಕರ ಜೊತೆ ನಿರಂತರ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕಲಬುರಗಿ ರೈಲ್ವೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಇಲಾಖೆಯು ತಮ್ಮ ಸಿಬ್ಬಂದಿಗೆ ವಿಸಿಟಿಂಗ್ ಕಾರ್ಡ್ ಮಾಡಿಸಿ‌ ಅದನ್ನು ಪ್ರಯಾಣಿಕರಿಗೆ ವಿತರಿಸುವ ಮೂಲಕ ಕಳ್ಳತನ ಸೇರಿದಂತೆ ಅಹಿತಕರ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ವಿನಂತಿಸಿದೆ.

ರೈಲಿನಲ್ಲಿ ನಡೆಯುವ ಅಪರಾಧ ನಿಯಂತ್ರಿಸಲು ಕಲಬುರಗಿ ಪೊಲೀಸ್​ ಹೊಸ ಪ್ಲಾನ್​

ಪ್ರಯಾಣಿಸುವಾಗ ಭಯ ಬೇಡ : ಇನ್ಮುಂದೆ ರೈಲಿನಲ್ಲಿ ಪ್ರಯಾಣಿಸಬೇಕಾದರೆ ಪ್ರಯಾಣಿಕರು ಅದರಲ್ಲೂ ಮಹಿಳೆಯರು ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. ಅದಕ್ಕಾಗಿ ಕಲಬುರಗಿ ರೈಲ್ವೆ ಪೊಲೀಸರು ವಿಸಿಟಿಂಗ್ ಕಾರ್ಡ್ ರಿಲೀಸ್ ಮಾಡಿದೆ.

ಈ ಕಾರ್ಡ್​​​ನಲ್ಲಿ ರೈಲ್ವೆ ಪೊಲೀಸ್ ಇಲಾಖೆ ವಾಟ್ಸ್‌ಆ್ಯಪ್ ನಂಬರ್, ಇಬ್ಬರು ಕಾನ್​ಸ್ಟೇಬಲ್​, ಹಿರಿಯ ಪೊಲೀಸ್ ಅಧಿಕಾರಿಯೋರ್ವರ ಕಾಂಟ್ಯಾಕ್ಟ್ ನಂಬರ್ ಮತ್ತು ಇ-ಮೇಲ್​​​ ಐಡಿ ನಮೂದಿಸಲಾಗಿದೆ.

Kalaburagi railway police department distributed visiting card to Passengers
ಪ್ರಯಾಣಿಕರಿಗೆ ವಿಸಿಟಿಂಗ್​ ಕಾರ್ಡ್​ ವಿತರಿಸಿದ ಪೊಲೀಸ್​

ತಕ್ಷಣವೇ ಅಲರ್ಟ್​ ಆಗುತ್ತೆ ಪೊಲೀಸ್ ​: ರೈಲ್ವೆಯಲ್ಲಿ ಪ್ರಯಾಣಿಸುವಾಗ ಯಾರಾದರೂ ಕಿಡಿಗೇಡಿಗಳು ಚುಡಾಯಿಸಿದ್ರೆ, ಪರ್ಸ್, ಮೊಬೈಲ್, ಸರಗಳ್ಳತನ ಮಾಡಲು ಯತ್ನಿಸಿದ್ರೆ ತಕ್ಷಣವೇ ವಿಸಿಟಿಂಗ್ ಕಾರ್ಡ್​ನಲ್ಲಿರುವ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಅಥವಾ ವಾಟ್ಸ್‌ಆ್ಯಪ್ ಮಾಡಿದ್ರೆ ಕ್ಷಣಾರ್ಧದಲ್ಲಿ ಪೊಲೀಸರು ನೆರವಿಗೆ ಧಾವಿಸುತ್ತಾರೆ.

ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರಗಿ ರೈಲ್ವೆ ಪೊಲೀಸರು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ವಿಸಿಟಿಂಗ್ ಕಾರ್ಡ್ ಯೋಜನೆ ಜಾರಿಗೆ ತಂದಿದ್ದಾರೆ. ಅಪರಾಧ ಕೃತ್ಯಗಳು ನಡೆದಾಗ ಹೆಲ್ಪ್‌ಲೈನ್ ನಂಬರ್‌‌ಗೆ ಕರೆ ಮಾಡಿದಾಗ ತಕ್ಷಣ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.‌

ಇದರಿಂದ ಮುಜುಗರಕ್ಕೀಡಾಗುತ್ತಿದ್ದ ರೈಲ್ವೆ ಪೊಲೀಸರು, ಇದೀಗ ಪ್ರಯಾಣಿಕರ, ಅದ್ರಲ್ಲಿ ವಿಶೇಷವಾಗಿ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಕಲಬುರಗಿ ರೈಲ್ವೆ ಪೊಲೀಸರು ವಿನೂತನ ಯೋಜನೆಯೊಂದನ್ನ ಜಾರಿಗೆ ತಂದಿದ್ದಾರೆ.

ಓದಿ: ಪೊಲೀಸ್ ಕಮಿಷನರ್ ಬದಲಾವಣೆ ಸಾಧ್ಯತೆ.. ಪಂತ್‌ ಜಾಗಕ್ಕೆ ದಯಾನಂದ್‌-ಎಂ ಎ ಸಲೀಂ ಇಬ್ಬರಲ್ಲಿ ಯಾರು!?

ವಿಸಿಟಿಂಗ್ ಕಾರ್ಡ್​​ ಪೋಸ್ಟರ್‌ಗಳನ್ನು ರೈಲ್ವೆ ನಿಲ್ದಾಣ, ಕೋಚ್‌ಗಳಲ್ಲಿ ಅಂಟಿಸಲಾಗಿದ್ದು, ಪೊಲೀಸರ ವಿನೂತನ ಕಾರ್ಯಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.