ETV Bharat / state

ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಕಲಬುರಗಿ ಪೊಲೀಸರು - ಬಂದ್ ಮಾಡಿಸಿದ ಕಲಬುರಗಿ ಪೊಲೀಸರು

ಕೊರೊನಾ ಉಲ್ಬಣಿಸುತ್ತಿರುವ ಹಿನ್ನೆಲೆ ಸರ್ಕಾರ ಅಲರ್ಟ್​ ಆಗಿದೆ. ಕಲಬುರಗಿಯ ಸೂಪರ್ ಮಾರ್ಕೆಟ್ ನಲ್ಲಿ ಅಂಗಡಿಗಳನ್ನ ಬಂದ್ ಮಾಡಲು ಪೊಲೀಸರು ಮುಂದಾಗಿದ್ದರೆ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ದಿಢೀರ್​ ಮಾರ್ಗಸೂಚಿ ಹೊರಡಿಸಿರುವುದರಿಂದ ವರ್ತಕರಿಗೆ ಇದೊಂದು ರೀತಿ ಬಿಸಿತುಪ್ಪವಾಗಿದೆ.

Kalaburagi
Kalaburagi
author img

By

Published : Apr 22, 2021, 9:02 PM IST

ಕಲಬುರಗಿ: ಸರ್ಕಾರದ ಹೊಸ ಮಾರ್ಗಸೂಚಿಯಂತೆ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳನ್ನ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನ ನಗರದಲ್ಲಿ ಪೊಲೀಸರು ಬಂದ್ ಮಾಡಿಸುತ್ತಿದ್ದಾರೆ.

ದಿಢೀರ್ ಹೊಸ ಮಾರ್ಗಸೂಚಿ ಜಾರಿ ಮಾಡಿರುವುದರಿಂದ ವರ್ತಕರು ಗೊಂದಲಕ್ಕೆ ಸಿಲುಕಿದ್ದಾರೆ. ವಾಣಿಜ್ಯ ವ್ಯವಹಾರ ನಡೆಸುವ ಅಂಗಡಿಗಳನ್ನ ಬಂದ್ ಮಾಡಿಸಲು ಒಂದು ರೀತಿಯಿಂದ ಪೊಲೀಸರು ಹರಸಾಹಸ ಪಡುವಂತಾಗಿದೆ. ಪೊಲೀಸರು ಎಷ್ಟೇ ಹೇಳಿದರೂ ನಗರದ ಸೂಪರ್ ಮಾರ್ಕೆಟ್ ನಲ್ಲಿ ಅಂಗಡಿಗಳನ್ನ ಬಂದ್ ಮಾಡಲು ವರ್ತಕರು ಹಿಂದೇಟು ಹಾಕುತ್ತಿದ್ದಾರೆ.

ಆದರೂ ಸಹ ಪೊಲೀಸರು ವರ್ತಕರಿಗೆ ತಿಳಿ ಹೇಳಿ ಅಂಗಡಿಗಳನ್ನ ಬಂದ್ ಮಾಡಿಸುತ್ತಿದ್ದಾರೆ‌. ಸೂಪರ್ ಮಾರ್ಕೆಟ್, ಗೋಲ್ಡ್ ಮಾರ್ಕೆಟ್, ಚಪ್ಪಲಿ ಬಜಾರ್ ನಲ್ಲಿ ಅಂಗಡಿಗಳನ್ನ ಬಂದ್ ಮಾಡಬೇಕೋ ಬೇಡವೋ ಅನ್ನೋ ಗೊಂದಲದಲ್ಲಿ ವರ್ತಕರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.