ETV Bharat / state

ಕಲಬುರಗಿ: ಬಡ್ಡಿ ವಸೂಲಿ ದಂಧೆ ಕಡಿವಾಣಕ್ಕೆ ಮುಂದಾದ ಪೊಲೀಸರು - ಬಡ್ಡಿ ವಸೂಲಿ‌ ಧಂದೆ

ನಗರದಲ್ಲಿ ನಡೆಯುತ್ತಿರುವ ಬಡ್ಡಿ ವಸೂಲಿ ದಂಧೆಗೆ ಕಡಿವಾಣ ಹಾಕಲು ಕಲಬುರಗಿ ಪೊಲೀಸರು ಮುಂದಾಗಿದ್ದಾರೆ.

Police
Police
author img

By

Published : Aug 25, 2020, 1:00 PM IST

ಕಲಬುರಗಿ: ಕಳೆದ 19ರಂದು ನಗರದ ಸಾರ್ವಜನಿಕ ಉದ್ಯಾನವನದ ಜನನಿಬಿಡ ಪ್ರದೇಶದಲ್ಲಿ ಹಣಕ್ಕಾಗಿ ಕೊಲೆ ನಡೆದ ಪ್ರಕರಣದ ಬೆನ್ನಲ್ಲೇ ಕಲಬುರಗಿ ಪೊಲೀಸರು ಬಡ್ಡಿ ವಸೂಲಿ ದಂಧೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಸಾಲ ವಾಪಸ್ ನೀಡದ್ದಕ್ಕೆ ಯುವಕನೋರ್ವನನ್ನು ರೌಡಿಗಳ ಗುಂಪೊಂದು ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿತ್ತು. ಪ್ರಕರಣ ನಡೆದ ಬೆನ್ನಲ್ಲೇ ಹಾಗೂ ನಗರದಲ್ಲಿ ಸಾಲದ ಬಡ್ಡಿ ವಸೂಲಿ ಕಿರುಕುಳ ಹೆಚ್ಚಾಗುತ್ತಿರುವ ಕಾರಣ, ಬಡ್ಡಿ ವಸೂಲಿ ದಂಧೆಗೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್, ಮಾಹಿತಿಗಾಗಿ ವಾಟ್ಸಪ್ ಅಸ್ತ್ರ ಬಳಸಲಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ನಗರದಲ್ಲಿ ಇಂತಹ ಅಪರಾಧಗಳು ಕಂಡು ಬಂದಲ್ಲಿ ಸಾರ್ವಜನಿಕರು ವಾಟ್ಸಪ್ ಮೂಲಕ ಮಾಹಿತಿ ನೀಡಬಹುದಾಗಿದೆ. ಕರ್ನಾಟಕ ಅತಿಯಾದ ಬಡ್ಡಿ ನಿಷೇಧ ಕಾಯ್ದೆ 2004 ಕಲಂ 4ರ ಅನ್ವಯ ಯಾವುದೇ ವ್ಯಕ್ತಿ ತಾನು ನೀಡಿದ ಮುಂಗಡ ಸಾಲಕ್ಕಾಗಿ ಅತಿಯಾದ ಬಡ್ಡಿಯನ್ನು ವಸೂಲಿ, ಸಾಲ ಮರು ಪಡೆಯಲು ಕಿರುಕುಳ ನೀಡಿದರೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿ ಮಾಹಿತಿ ನೀಡಿ. 9480803611, 9480803612 ಸಂಖ್ಯೆಗೆ ಖಚಿತ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.