ETV Bharat / state

ಕಲಬುರಗಿ ನಗರವನ್ನ ಬೆಚ್ಚಿಬಿಳಿಸಿದ್ದ ಖತರ್ನಾಕ್​ ಸರಗಳ್ಳರ ಬಂಧನ - ಕಲಬುರಗಿ ನಗರದಲ್ಲಿ ಖತರ್ನಾಕ್​ ಸರಗಳ್ಳರ ಬಂಧನ

ಈ ನಿಜಲಿಂಗಪ್ಪ ಮತ್ತು ವಿಠಲ್, ಇಬ್ಬರು ಕೂಡ ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಪಲ್ಸರ್ ಗಾಡಿ ಹತ್ತಿ ಹೊರಟರೆ ಸಾಕು ಅವತ್ತು ಅದೆಷ್ಟೋ ಹೆಣ್ಣು ಮಕ್ಕಳ ಕತ್ತನ್ನ ಬರಿದು ಮಾಡ್ತಾರೆ ಅಂತಾ ಅವರಿಗೆ ಗೊತ್ತಾಗುತ್ತಿರಲಿಲ್ಲ. ಸಂಜೆ ಐದು ಗಂಟೆಗೆ ಫೀಲ್ಡ್‌ಗಿಳಿದ್ರೆ ರಾತ್ರಿ ಎಂಟು ಗಂಟೆಯವರೆಗೂ ನಗರದ ವಿವಿಧ ಬಡವಾಣೆಗಳಲ್ಲಿ ಓಡಾಡಿ ಸರಗಳ್ಳತನ ಮಾಡುತ್ತಿದ್ದರು..

ಸರಗಳ್ಳರ ಬಂಧನ
ಸರಗಳ್ಳರ ಬಂಧನ
author img

By

Published : Dec 26, 2021, 6:35 PM IST

ಕಲಬುರಗಿ : ಅವರಿಬ್ಬರು ಕುಚುಕು ಗೆಳೆಯರು. ಮಾಡೋಕೆ ಕೆಲಸ ಇಲ್ಲದಿದ್ದಕ್ಕೆ ಅವರು ಆಯ್ಕೆ ಮಾಡಿಕೊಂಡ ಕಾಯಕ ಮಾತ್ರ ಸರಗಳ್ಳತನ. ಅವರು ಯಾರು ಇಲ್ಲದೇ ಇರೋ ಗಲ್ಲಿಗೆ ಎಂಟ್ರಿ ಕೊಟ್ಟರೆ ಮುಗೀತು. ದಾರೀಲಿ ಹೋಗೋ ಹೆಣ್ಣುಮಕ್ಕಳ ಪಾಡು ದೇವರೇ ಕಾಪಾಡಬೇಕು.

ಸರಗಳ್ಳರ ಹಾವಳಿಯಿಂದ ನಗರದಲ್ಲಿ ಜನ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. ನಗರದ ಎಮ್‌ಬಿ ನಗರ ಪೊಲೀಸ್ ಠಾಣೆ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಸರಗಳ್ಳರು ಅಟ್ಟಹಾಸ ಮೆರೆಯುತ್ತಿದ್ದಾರೆ.

ಒಂಟಿ ಮಹಿಳೆಯರನ್ನ ಹೆಚ್ಚಾಗಿ ಟಾರ್ಗೆಟ್ ಮಾಡಿಕೊಂಡು, ಬಡಾವಣೆಗಳಲ್ಲಿ ವಾಕಿಂಗ್ ಮಾಡುವ ಮತ್ತು ಕಚೇರಿಯಿಂದ ನಡೆದುಕೊಂಡು ಮನೆಗೆ ಬರುವ ಮಹಿಳೆಯರ ಮಾಂಗಲ್ಯ ಸರ, ಲಾಕೇಟ್‌ಗಳನ್ನ ದೋಚುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸಂಜುನಗರದ ನಿಜಲಿಂಗಪ್ಪ, ವಿಠಲ್ ಮತ್ತು ಲಕ್ಷ್ಮಿನಗರ ಬಡಾವಣೆಯ ಗುರುದೇವ್ ಸೇರಿದಂತೆ ಮೂವರನ್ನ ಖೆಡ್ಡಾಗೆ ಕೆಡವಿರುವ ಪೊಲೀಸರು, ಬಂಧಿತರಿಂದ 11.50 ಲಕ್ಷ ರೂಪಾಯಿ ಮೌಲ್ಯದ 280 ಗ್ರಾಂ ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ.

ಕಳೆದ ನವೆಂಬರ್ ತಿಂಗಳಿನಿಂದ ನಗರದ ವಿವಿಧೆಡೆ ಜನರ ನಿದ್ದೆಗೆಡಿಸಿದ್ದ ಈ ಗ್ಯಾಂಗ್‌ನ, ಅಟ್ಟಹಾಸಕ್ಕೆ ವಿಶೇಷವಾಗಿ ಕಲಬುರಗಿ ನಗರದ ಮಹಿಳೆಯರು ಬೆಚ್ಚಿಬಿದ್ದಿದ್ದರು. ಇದೀಗ ಕುಖ್ಯಾತ ಸರಗಳ್ಳರ ಬಂಧನದಿಂದ ಸಾರ್ವಜನಿಕರಲ್ಲದೇ ಪೊಲೀಸರು ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ನಿಜಲಿಂಗಪ್ಪ ಮತ್ತು ವಿಠಲ್, ಇಬ್ಬರು ಕೂಡ ನಂಬರ್ ಪ್ಲೇಟ್ ಇಲ್ಲದ ಬ್ಲಾಕ್ ಪಲ್ಸರ್ ಗಾಡಿ ಹತ್ತಿ ಹೊರಟರೆ ಸಾಕು ಅವತ್ತು ಅದೆಷ್ಟೋ ಹೆಣ್ಣು ಮಕ್ಕಳ ಕತ್ತನ್ನ ಬರಿದು ಮಾಡ್ತಾರೆ ಅಂತಾ ಅವರಿಗೆ ಗೊತ್ತಾಗುತ್ತಿರಲಿಲ್ಲ. ಸಂಜೆ ಐದು ಗಂಟೆಗೆ ಫೀಲ್ಡ್‌ಗಿಳಿದ್ರೆ ರಾತ್ರಿ ಎಂಟು ಗಂಟೆಯವರೆಗೂ ನಗರದ ವಿವಿಧ ಬಡವಾಣೆಗಳಲ್ಲಿ ಓಡಾಡಿ ಸರಗಳ್ಳತನ ಮಾಡುತ್ತಿದ್ದರು.

ಬಳಿಕ ಸರಗಳ್ಳತನ ಮಾಡಿದ ಸರಗಳನ್ನ ಮಾರಾಟ ಮಾಡಿ ಅದ್ರಿಂದ ಬಂದ ಹಣದಲ್ಲಿ ಕಂಠಪೂರ್ತಿ ಕುಡಿದು ಮಜಾ ಮಾಡುತ್ತಿದ್ದರು. ಮತ್ತೆ ಮರುದಿನ ಎಂದಿನಂತೆ ತಮ್ಮ ಕಾಯಕ ಸರಗಳ್ಳತನವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದರು. ಈಗ ಈ ಕಳ್ಳರನ್ನ ಬಂಧಿಸಿದ್ದಕ್ಕೆ ನಗರದ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.