ಕಲಬುರಗಿ: ನವೆಂಬರ್ 18 ರಿಂದ ವಾರದ ಮೂರು ದಿನಗಳ ಕಾಲ ಸ್ಟಾರ್ ಏರ್ ಸಂಸ್ಥೆ ದೆಹಲಿಗೆ ವಿಮಾನಯಾನ ಆರಂಭಿಸುತ್ತಿದೆ. ಈ ಬಗ್ಗೆ ಸ್ಟಾರ್ ಏರ್ ತನ್ನ ಆಫೀಸಿಯಲ್ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಕಲಬುರಗಿ-ಬೆಂಗಳೂರು ವಿಮಾನ ಹಾರಾಟಕ್ಕೆ ಈ ಭಾಗದ ಜನರ ಉತ್ತಮ ಸ್ಪಂದನೆ ವ್ಯಕ್ತವಾದ ಬೆನ್ನಲ್ಲೇ ಇದೀಗ ಕಲಬುರಗಿ-ದೆಹಲಿ (ಹಿಂಡಾನ್) ಗೆ ನವೆಂಬರ್ 18 ರಿಂದ ವಿಮಾನ ಹಾರಾಟ ಪ್ರಾರಂಭಿಸುತ್ತಿದೆ. ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಮೂರು ದಿನಗಳ ಕಾಲ ಬೆಳಗ್ಗೆ 10:20 ಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೊರಟು 12:40 ಕ್ಕೆ ದೆಹಲಿ (ಹಿಂಡಾನ್)ಗೆ ತಲುಪಲಿದೆ.
ವಾರದ ಅದೇ ಮೂರು ದಿನ ದೆಹಲಿಯಿಂದ 01:10 ಕ್ಕೆ ಹೊರಡುವ ವಿಮಾನ 03:30 ಕ್ಕೆ ಕಲಬುರಗಿ ವಿಮಾನ ನಿಲ್ದಾಣ ತಲುಪಲಿದೆ. ನಾನ್‌ಸ್ಟಾಪ್ ವಿಮಾನ ಇದಾಗಿದ್ದು, ಕೇವಲ 2 ಗಂಟೆ 20 ನಿಮಿಷದಲ್ಲಿ ಕಲಬುರಗಿಯಿಂದ ದೆಹಲಿ ತಲುಪಲಿದೆ. ವ್ಯಾಪಾರ ವಹಿವಾಟಕ್ಕೆ, ಉದ್ಯಮಿಗಳಿಗೆ ಈ ವಿಮಾನ ಹಾರಾಟ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ.