ETV Bharat / state

ಹೋಂ ಕ್ವಾರಂಟೈನ್ ನಲ್ಲಿ 641 ಜನರಿಗೆ ಚಿಕಿತ್ಸೆ: ಕಲಬುರಗಿ ಜಿಲ್ಲಾಧಿಕಾರಿ ಸ್ಪಷ್ಟನೆ - ಜಿಲ್ಲಾಧಿಕಾರಿ ಬಿ.ಶರತ್

ಕಲಬುರಗಿಯಲ್ಲಿ ಇದಾಗಲೇ ಇಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದ ಹಿನ್ನೆಲೆ ವಿದೇಶದಿಂದ ಆಗಮಿಸಿದ 250 ಜನರನ್ನು ಸೇರಿ ಇದುವರೆಗೆ ಒಟ್ಟು 641 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

District Collector
ಒಟ್ಟು 641 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ
author img

By

Published : Mar 19, 2020, 9:41 PM IST

ಕಲಬುರಗಿ: ಕೊರೊನಾ ಮಹಾಮಾರಿ ತಡೆಯಲು ಜಿಲ್ಲಾಡಳಿತ ಸಾಕಷ್ಟು ಪರಿಶ್ರಮ ವಹಿಸುತ್ತಿದೆ. ವಿದೇಶದಿಂದ ಆಗಮಿಸಿದ 250 ಜನರನ್ನು ಸೇರಿ ಇದುವರೆಗೆ ಒಟ್ಟು 641 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 22 ಜನರ ಗಂಟಲು ದ್ರವದ ಸ್ಯಾಂಪಲ್​​ನನ್ನು​​ ಲ್ಯಾಬ್​​ಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದರಲ್ಲಿ ಮೃತ ವೃದ್ಧ ಮಹಮದ್​​​ ಹಾಗೂ ಇವರ ಓರ್ವ ಸಂಬಂಧಿ ಮತ್ತು ಮನೆಗೆ ತೆರಳಿ ಚಿಕಿತ್ಸೆ ನೀಡಿದ್ದ ವೈದ್ಯ ಮೂವರಲ್ಲಿ ಮಾತ್ರ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇನ್ನುಳಿದಂತೆ 8 ವರದಿಗಳು ನೆಗೆಟಿವ್ ಬಂದಿವೆ. ಎರಡು ಪ್ರಕರಣಗಳಲ್ಲಿ ತಾಂತ್ರಿಕ ದೋಷ ಹಿನ್ನೆಲೆ ಮತ್ತೊಮ್ಮೆ ಸ್ಯಾಂಪಲ್ ಕಳಿಸಲಾಗಿದೆ. ಒಂಬತ್ತು ಜನರ ಲ್ಯಾಬ್ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಒಟ್ಟು 641 ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ

641 ಜನರಿಗೆ ಹೋಂ ಕ್ವಾರಂಟೈನ್:

ಕೊರೊನಾ ಪಾಸಿಟಿವ್ ಹೊಂದಿದ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿರುವ 98 ವ್ಯಕ್ತಿಗಳನ್ನು ಹಾಗೂ ಎರಡನೇ ಸಂಪರ್ಕ ಹೊಂದಿರುವ 333 ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇದಲ್ಲದೇ ವಿದೇಶದಿಂದ ಆಗಮಿಸಿದ 250 ಜನರನ್ನು ಸಹ ಪತ್ತೆ ಹಚ್ಚಲಾಗಿದ್ದು, ಒಟ್ಟಾರೆ ಇದೂವರೆಗೆ 641 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 11 ಜನರನ್ನು ಆಸ್ಪತ್ರೆಯ ಐಸೋಲೇಷನ್​​​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ 4,720 ಮನೆಗಳನ್ನು ಸರ್ವೆ ಮಾಡಿ ಅಲ್ಲಿ ಮುಂಜಾಗೃತ ಕ್ರಮವಾಗಿ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.

ಶೀಘ್ರವೇ ಲ್ಯಾಬ್ ಆರಂಭ, ವ್ಯಾಪಾರ ವಹಿವಾಟಿಗೆ ನಿಷೇಧ:

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆಗಾಗಿ ಉಪಕರಣ ಬಂದಿದೆ. ಇನ್ನೊಂದು ಉಪಕರಣ ನಾಳೆ ಬೆಳಗ್ಗೆ ಬರಲಿದೆ. ಲ್ಯಾಬ್ ಸುಪರ್ರ್ವೈ​ಸ್ ಮಾಡಲು ಬೆಂಗಳೂರಿನಿಂದ ಎಕ್ಸ್​​ಪರ್ಟ್ ಬರುತ್ತಿದ್ದಾರೆ. ಇದೆ 21 ರಿಂದು ಲ್ಯಾಬ್ ಕಾರ್ಯಾರಂಭ ಮಾಡಲಿದೆ‌‌. ಇನ್ನು ದಿನಪಯೋಗಿ ವಸ್ತು ಅಂಗಡಿ ಮಾತ್ರ ತೆರೆದಿರಬೇಕು. ಇತರ ವ್ಯಾಪಾರ ವಹಿವಾಟಿಗೆ ನಿಷೇಧ ಹೇರಲಾಗಿದೆ. ಜನರು ಗುಂಪು ಗುಂಪಾಗಿ ಸೇರದಂತೆ ಇಂದು ರಾತ್ರಿ 8 ರಿಂದ 144 ಕಲಂ ನಿಷೇಧಾಜ್ಞೆ ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಕೊರೊ‌ನಾ ವೈರಸ್ ಬಗ್ಗೆ ಸಾಮಾಜಿಕ ಜಾಲತಾನದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.